Site icon TUNGATARANGA

ಶೃಂಗೇರಿ ಶ್ರೀಗಳಿಗೆ ಅವಮಾನ ಮಾಡಿದವನಿಗೆ ಜೈಲು ಶಿಕ್ಷೆ

ಚಿಕ್ಕಮಗಳೂರು ವರದಿ, ಜು.20:
ಶೃಂಗೇರಿ ಶ್ರೀಗಳ ವಿರುದ್ಧ ಫೇಸ್ಬುಕ್ ನಲ್ಲಿ ಅವಹೇಳಕಾರಿ ಪೋಸ್ಟ್ ಹಾಕಿದ್ದ ವ್ಯಕ್ತಿಗೆ ಶೃಂಗೇರಿ ನ್ಯಾಯಾಲಯವು ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮುನ್ನಾ ಅಜರ್ ಎಂಬಾತನಿಗೆ ಜೈಲು ಶಿಕ್ಷೆ ವಿಧಿಸಿದ ಶೃಂಗೇರಿ ಕೋರ್ಟ್ 10 ಸಾವಿರ ದಂಡ ವಿಧಿಸಿದೆ.


2015 ನವೆಂಬರ್ 19ರಂದು ಅವಹೇಳನಕಾರಿ ಪೋಸ್ಟ್ ಹಾಕಿದ್ದ ಅಜರ್ ವಿರುದ್ದ ದೂರು ದಾಖಲಾಗಿತ್ತು. ಆ ಸಂದರ್ಭದಲ್ಲಿ ಭಕ್ತರು ರಾಜ್ಯದ ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಸಿದ್ದರು.
ಕರ್ನಾಟಕ ಹಿಂದೂಸ್ ಎಂಬ ಪೇಜ್ ನಲ್ಲಿ ಗುರುಪರಂಪರೆಯ ಪೋಸ್ಟ್ ಹಾಕಲಾಗಿತ್ತು. ಆ ಪೋಸ್ಟ್ ನಲ್ಲಿ ಇದ್ದ ಶ್ರೀಗಳ ಫೋಟೋಗೆ ಅವಹೇಳನಕಾರಿ ಕಾಮೆಂಟ್ ಹಾಕಿದ್ದ ಆರೋಪದ ಮೇಲೆ ಶಿಕ್ಷೆ ವಿಧಿಸಲಾಗಿದರ.
ಅಂದು ಹುಬ್ಬಳ್ಳಿ ಮೂಲದ ಮುನ್ನಾ ಅಜರ್ ಎಂಬುವನನ್ನ ಪೊಲೀಸರು ಬಂಧಿಸಿದ್ದರು.

Exit mobile version