Site icon TUNGATARANGA

ಶಿವಮೊಗ್ಗಕ್ಕೆ ಮತ್ತೊಂದು ರೈಲು, ಜು.25 ರಿಂದ ಈ ಸೌಭಾಗ್ಯ, ಎಲ್ಲಿಗೆ ಪ್ರಯಾಣ ಗೊತ್ತಾ?

ಶಿವಮೊಗ್ಗ ಜು.20:
ನೈಋತ್ಯ ರೈಲ್ವೆ ವತಿಯಿಂದ ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ವಿಶೇಷ ರೈಲು ಘೋಷಣೆ ಮಾಡಿದ್ದು, ಬರುವ ಜುಲೈ 25ರಿಂದ ಈ ರೈಲು ಸೇವೆ ಆರಂಭವಾಗಲಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
ರೈಲು ಸಂಖ್ಯೆ 16221/16222 ತಾಳಗುಪ್ಪ – ಮೈಸೂರು – ತಾಳಗುಪ್ಪ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಆರಂಭಿಸಲಾಗುತ್ತಿದೆ.


ಈ ಎಕ್ಸ್ ಪ್ರೆಸ್ ರೈಲು ಪ್ರತಿದಿನ ಎರಡು ನಗರಗಳ ನಡುವೆ ಸಂಚರಿಸಲಿದೆ. ಮೈಸೂರಿನಿಂದ ಮಧ್ಯಾಹ್ನ 2 ಗಂಟೆಗೆ ಹೊರಡುವ ರೈಲು ರಾತ್ರಿ 11.30ಕ್ಕೆ ತಾಳಗುಪ್ಪ ತಲುಪಲಿದೆ. ಮತ್ತೆ ತಾಳಗುಪ್ಪದಿಂದ ಬೆಳಿಗ್ಗೆ 6 .10ಕ್ಕೆ ಹೊರಡುವ ರೈಲು ಮೈಸೂರಿಗೆ ಮಧ್ಯಾಹ್ನ 3:30ಕ್ಕೆ ಬಂದು ತಲುಪಲಿದೆ.
ಮೈಸೂರಿನಿಂದ – ಬೆಳಗುಳ – ಸಾಗರಕಟ್ಟೆ – ಕೃಷ್ಣರಾಜನಗರ – ಹೊಸ ಅಗ್ರಹಾರ – ಅಕ್ಕಿ ಹೆಬ್ಬಾಳು ಬೀರಹಳ್ಳಿ – ಮಂಡಗೆರೆ – ಹೊಳೆ ನರಸಿಪುರಕ್ಕೆ ಮಧ್ಯಾಹ್ನ 3.50ಕ್ಕೆ ತಲುಪಲಿದೆ. ಮಾವಿನಕರೆ ಮೂಲಕ ಮದ್ಯಾಹ್ನ 4.28ಕ್ಕೆ ಹಾಸನ ತಲುಪಲಿದೆ. ಬಾಗೇಶಪುರ – ಹಬನಘಟ್ಟ ಮೂಲಕ ಸಂಜೆ 6 ಗಂಟೆಗೆ ಅರಸಿಕರೆ ತಲುಪಲಿದೆ. ಬಾಣವರ -ದೇವನೂರು – ಬಳ್ಳೆಕರೆ – ಕಡೂರು ಬೀರೂರಿಗೆ ಸಂಜೆ 7 ಗಂಟೆಗೆ ತಲುಪಲಿದೆ.


ಸಾವಿಪುರ – ಕಾರಣಹಳ್ಳಿ – ತರೀಕೆರೆ (ರಾತ್ರಿ 7.39) ಮೊಸರಹಳ್ಳಿ – ಭದ್ರಾವತಿ (ರಾತ್ರಿ 8.03ಕ್ಕೆ) – ಶಿವಮೊಗ್ಗ ವಿದ್ಯಾನಗರ (8.19) – ಶಿವಮೊಗ್ಗ ರೈಲ್ವೆ ನಿಲ್ದಾಣದ (ರಾತ್ರಿ 8.45) – ಕೊನಗವಳ್ಳಿ ಹಾರನಹಳ್ಳಿ – ಕುಂಸಿ (ರಾತ್ರಿ 9.39ಕ್ಕೆ) – ಅರಸಾಳು (ರಾತ್ರಿ 9.54ಕ್ಕೆ) – ಕೆಂಚನಾಳು – ಆನಂದಪುರ (ರಾತ್ರಿ 10.14ಕ್ಕೆ) – ಅಡ್ಡೇರಿ – ಸಾಗರ ಜಂಬಗಾರು (ರಾತ್ರಿ 10.44ಕ್ಕೆ) ತಾಳಗುಪ್ಪ ರಾತ್ರಿ 11.30ಕ್ಕೆ ತಲುಪಲಿದೆ.
ಮತ್ತೆ ತಾಳಗುಪ್ಪದಿಂದ ಬೆಳಗ್ಗೆ 6.10ಕ್ಕೆ ಹೊರಡುವ ರೈಲು ಮಧ್ಯಾಹ್ನ 3.35ಕ್ಕೆ ಮೈಸೂರು ತಲುಪಲಿದೆ. ಸಾಗರ ಜಂಬಾರು (ಬೆಳಗ್ಗೆ 6.34ಕ್ಕೆ ತಲುಪಲಿದೆ) – ಅಡ್ಡೇರಿ – ಆನಂದಪುರ (ಬೆಳಗ್ಗೆ 7.06ಕ್ಕೆ) – ಕೆಂಚನಾಳು – ಅರಸಾಳು ಕುಂಸಿ – ಹಾರನಹಳ್ಳಿ – ಕೊನಗವಳ್ಳಿ – ಶಿವಮೊಗ್ಗ ರೈಲ್ವೆ ನಿಲ್ದಾಣ (8.15ಕ್ಕೆ ತಲುಪಲಿದೆ)
ಶಿವಮೊಗ್ಗ ವಿದ್ಯಾನಗರ (ಬೆಳಗ್ಗೆ 8.25ಕ್ಕೆ) – ಭದ್ರಾವತಿ (ಬೆಳಗ್ಗೆ 8.43ಕ್ಕೆ), ಮೊಸರಹಳ್ಳಿ – ತರೀಕರೆ (ಬೆಳಗ್ಗೆ 9.13ಕ್ಕೆ) – ಕಾರಣಹಳ್ಳಿ – ಶಿವಪುರ – ಬೀರೂರು (10.03ಕ್ಕೆ) – ಕಡೂರು (10.15ಕ್ಕೆ) – ಬಳ್ಳೆಕರೆ – ದೇವನೂರು – ಬಾಣವರ – ಅರಸೀಕರೆ (11.15ಕ್ಕೆ) – ಹಬನಘಟ್ಟ – ಬಾಗೇಶಪುರ – ಹಾಸನ (ಮಧ್ಯಾಹ್ನ 12.28ಕ್ಕೆ) – ಮಾವಿನಕೆರೆ – ಹೊಳೆ ನರಸೀಪುರ (ಮಧ್ಯಾಹ್ನ 1.08ಕ್ಕೆ) – ಮಂಡಗೆರೆ – ಬೀರಹಳ್ಳಿ – ಅಕ್ಕಿಹೆಬ್ಬಾಳು – ಹೊಸ ಅಗ್ರಹಾರ ಕೃಷ್ಣರಾಜನಗರ – ಸಾಗರಕಟ್ಟೆ – ಬೆಳಗುಳ – ಮೈಸೂರು ಮದ್ಯಾಹ್ನ 3.35ಕ್ಕೆ ತಲುಪಲಿದೆ.
ಈ ವಿಶೇಷ ರೈಲಿನಲ್ಲಿ 12 ಬೋಗಿಗಳಿದ್ದು, ರೈಲಿನಲ್ಲಿ ಹತ್ತು ಸೆಕೆಂಡ್ ಕ್ಲಾಸ್ ಜನರಲ್ ಕೋಚ್ ಬೋಗಿ ಇರಲಿದೆ. ಎರಡು ಸಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ ಇರಲಿದೆ.

Exit mobile version