Site icon TUNGATARANGA

ತಂದೆಯಾಗಲಿರುವ ಕ್ಯಾಪ್ಟನ್ ವಿರಾಟ್

ನವದೆಹಲಿ,ಆ.27:
ದೇಶದ ಕ್ರಿಕೆಟ್ ದಿಗ್ಗಜರು ಸಂಸಾರದ ಬಾಹುಬಂಧನ ಗಳಲ್ಲಿ ತೊಡಗಿರುವ ಸಂದರ್ಭವಿದು ಎನ್ನಬಹುದು. ನಾಯಕ ವಿರಾಟ್ ಕೊಹ್ಲಿ ತಂದೆಯಾಗುವ ಸಂಭ್ರಮದಲ್ಲಿದ್ದಾರೆ.
ಇತ್ತೀಚೆಗೆ ಭಾರತದ ತಂಡದ ಮತ್ತೊಬ್ಬ ಆಟಗಾರ ಹಾರ್ದಿಕ್ ಪಾಂಡ್ಯ ತಂದೆಯಾದರು. ಈಗ ಕ್ಯಾಪ್ಟನ್ ಕೊಹ್ಲಿಯ ಸರದಿ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli) ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ (Anushka Sharma) ಶೀಘ್ರದಲ್ಲೇ ಪೋಷಕರಾಗಲಿದ್ದಾರೆ ಎಂದು ವಿರಾಟ್ ಕೊಹ್ಲಿ ಅವರು ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಪ್ರಕಟಿಸಿದ್ದಾರೆ.
ವಿರಾಟ್ ಟ್ವಿಟ್ಟರ್ ನಲ್ಲಿ, ‘ನಾವು ಮೂವರು ಆಗಲಿದ್ದೇವೆ, ಜನವರಿ 2021 ರಲ್ಲಿ ಈ ಗಳಿಗೆ ಕೂಡಿಬರಲಿದೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಫೋಟೋದೊಂದಿಗೆ ಶೇರ್ ಮಾಡಿದ್ದಾರೆ.
ವಿಶೇಷವೆಂದರೆ, ಈ ದಂಪತಿಗಳು 2017ರಲ್ಲಿ ಇಟಲಿಯ ಫ್ಲಾರೆನ್ಸ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಈಗ 3 ವರ್ಷಗಳ ನಂತರ ಅವರ ಮನೆಗೆ ಸಂತೋಷದ ಸುದ್ದಿಯೊಂದು ಬರುತ್ತಿದೆ. ಅನುಷ್ಕಾ ಅವರ ಗರ್ಭಧಾರಣೆಯ ಸುದ್ದಿ ಬರುತ್ತಿದ್ದಂತೆ ಅವರ ಅಭಿಮಾನಿಗಳು ಮತ್ತು ಆಪ್ತರು ‘ವಿರುಷ್ಕಾ’ಗೆ ಅಭಿನಂದನೆ ಹೇಳುತ್ತಿದ್ದಾರೆ.
ಟೀಮ್ ಇಂಡಿಯಾದ ಗಬ್ಬರ್ ಶಿಖರ್ ಧವನ್ ವಿರಾಟ್-ಅನುಷ್ಕಾ ಅವರನ್ನು ಅಭಿನಂದಿಸಿದ್ದಾರೆ.

Exit mobile version