ಶಿವಮೊಗ್ಗ, ಜು.20:
ಕಳೆದ ಮೂರು ದಿನದ ಹಿಂದೆ ಮೊಟ್ಟಮೊದಲು ಅತ್ಯಂತ ನಿರ್ಭಯವಾಗಿ ಶಿವಮೊಗ್ಗ ವೈದ್ಯಕೀಯ ವಿದ್ಯಾ ಸಂಸ್ಥೆ(ಸಿಮ್ಸ್)ನಲ್ಲಿ ನಡೆದ ವಿದ್ಯಾರ್ಥಿನಿ ಮೇಲೆ ಸಹ ಪ್ರಾದ್ಯಾಪಕನೋರ್ವ ಅತ್ಯಾಚಾರ ಎಸಗಿದ್ದ ಪ್ರಕರಣವನ್ನು ಬಯಲಿಗೆಳೆದಿದ್ದ ತುಂಗಾತರಂಗ ದಿನಪತ್ರಿಕೆಯ ಸುದ್ದಿ ಜಾಲತಾದ ಸುದ್ದಿಯಂತೆ ಸಿಮ್ಸ್ ನ ಆಡಳಿತಮಂಡಳಿ ಇಡೀ ಪ್ರಕರಣಕ್ಕೆ ತಿಲಾಂಜಲಿ ಇಟ್ಟಿದೆ.
ತುಂಗಾತರಂಗ ಯಾವತ್ತೂ ಯಾರ ಮರ್ಜಿಗೂ ಬಲಿಯಾಗದೇ, ಸುದ್ದಿ ಹುಡುಕಿ ಮದ್ಯರಾತ್ರಿ ಸಂಗ್ರಹಿಸಿದ್ದ ಮಾಹಿತಿ ಬೆಳಿಗ್ಗೆ ಪ್ರಚುರವಾದಾಕ್ಷಣ ಗಡಗಡ ನಡುಗಿದ್ದ ಆಡಳಿತ ಮಂಡಳಿ ಹಾಗೂ ವಿಶೇಷವಾಗಿ ನಿರ್ದೇಶಕರು ಅಂದೇ ಪತ್ರಿಕೆ ಹೇಳಿದ್ದಂತೆ ಈಗ ಸ್ಪಷ್ಟನೆ ನೀಡಿ ನಿರ್ದೇಶಕರು “ಗ್ರೇಟ್ ಸ್ಪಷ್ಟನೆ ನೀಡಲಷ್ಟೇ ಸೀಮಿತವಾದ ಅಧಿಕಾರಿ” ಎನಿಸಿಕೊಂಡಿದ್ದಾರೆ.
ಜಮ್ಮು ಮೂಲದ ಈ ವಿದ್ಯಾರ್ಥಿನಿ ಚಿಕ್ಕ ಮಗುವೇನಲ್ಲ. ಇಲ್ಲಿಯವರೆಗೆ ಶಿವಮೊಗ್ಗ ಬಗ್ಗೆ ಹೊಂದಿದ್ದ ಎಲ್ಲಾ ಪ್ರೀತಿ ವಿಶ್ವಾಸಕ್ಕೆ ಬೆಂಕಿ ಹಾಕಿ ಸಹಜವಾಗಿ ಸಹ ಪ್ರಾದ್ಯಾಪಕನ ಬಗ್ಗೆ ಸಿಡಿದೆದ್ದಿದ್ದವರು.
ಡಿಸಿ, ಗೃಹಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು, ಮುಖ್ಯಮಂತ್ರಿಗಳವರೆಗೂ ಹೋರಾಟ ಮಾಡಿ ಗುರುವಿನ ಹೆಸರಿಗೆ ಕಪ್ಪುಚುಕ್ಕಿ ತಂದ ಕಿರಾತಕ ಮನಸಿನ ವೈದ್ಯನಿಗೆ ತಕ್ಕ ಶಿಕ್ಷೆ ಕೊಡಿಸಲು ಮುಂದಾಗಿದ್ದರು.
ಅಂದಿನ ಈ ಸುದ್ದಿ. ಮೊದಲು ಬಹಿರಂಗ ಪಡಿಸಿದ್ದ ಸುದ್ದಿ ಇದು
ಶಿವಮೊಗ್ಗ ಸಿಮ್ಸ್/ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸರ್ಜರಿ ವಿಭಾಗದ ಸಹಪ್ರಾದ್ಯಾಪಕನ ಲೈಂಗಿಕ ಕಿರುಕುಳ…? ಟಾಂ ಟಾಂ ಸುದ್ದಿಗೆ ಆಡಳಿತ ಮಂಡಳಿಯೇಕೆ ಮೌನ….! https://tungataranga.com/?p=13256
ಸಮಗ್ರ ಸುದ್ದಿ ಓದಲು ಮೇಲಿನ ಲಿಂಕ್ ಕ್ಲಿಕ್ ಮಾಡಿ
ಇಷ್ಟೇಲ್ಲಾ ಘಟನೆ ನಡೆದರೂ ನನಗೇನು ಗೊತ್ತಿಲ್ಲ ಎಂದು ಎಸಿ ರೂಮಿನಲ್ಲೇ ಜಾಲಿಯಾಗಿ ಕುಳಿತಿದ್ದ ನಿರ್ದೇಶಕ ಮಹಾತ್ಮರು ಒಂದ್ ಟೀಮ್ ಮಾಡಿದರಂತೆ., ಅದರ ಪರಿಶೀಲನೆ ನಂತರ ಇಡೀ ಪ್ರಕರಣ ಮಿಸ್ ಗೈಡ್ ನಿಂದ ಆಯ್ತಂತೆ. ಇಲ್ಲಿ ಯಾರೂ ಏನೂ ಮಾಡಿಲ್ವಂತೆ. ಆ ವಿದ್ಯಾರ್ಥಿನಿ ತಪ್ಪು ಗ್ರಹಿಕೆಯಿಂದ ದೂರು ಕೊಟ್ಟಿದ್ದಳಂತೆ. ವಾಪಾಸ್ ಪಡೆದಳಂತೆ….. ಎಂಬಂತೆ ಚಿಕ್ಕ ಮಕ್ಕಳ ಕಥೆ ಕಟ್ಟಿಬಿಟ್ಟಿದ್ದಾರೆ.
ಡಾ. ರೇಖಾ ಅವರ ತಂಡದ ಪರಿಶೀಲನೆ ಹೆಸರಲ್ಲಿ ಇಡೀ ಪ್ರಕರಣಕ್ಕೆ ಶಾಶ್ವತ ತಿಲಾಂಜಲಿ ಇಡಲಾಗಿದೆ.
ನಿರ್ದೇಶಕ ಸಿದ್ದಪ್ಪರವರೇ, ನಿಮಗೊಂದಿಷ್ಟು ಪ್ರಶ್ನೆಗಳಿವೆ ಇವಕ್ಕೆ ಉತ್ತರಿಸಿ ಸಾಕು.
- ಆ ವಿದ್ಯಾರ್ಥಿನಿ ದೂರು ನೀಡಿದ್ದು ನಿಜವಲ್ವೇ? ಅದು ನಿಮಗೆ ಸಿಕ್ಕದ್ದು ತುಂಬಾ ತಡವಾಗಿ ಅಂತೀರಿ. ದೂರು ನೀಡಿದವರು ಚಿಕ್ಕ ಮಗುನಾ? ತಪ್ಪುಗ್ರಹಿಕೆಯಿಂದ ದೂರು ನೀಡಿದ್ದಾ?
- ಮಕ್ಕಳನ್ನು ಬಿಟ್ಟು ಇರುವ ಪೋಷಕರು ಹೇಗೆ ತಾನೇ ನೆಮ್ಮದಿಯಿಂದ ಇರಲು ಸಾಧ್ಯ?
- ಆ ವೈದ್ಯ ಎಂಬ ಯಜಮಾನ, ಗುರುವಾಗಬೇಕಿದ್ದ ಮನುಷ್ಯ ಇಲ್ಲಿ ಏನೂ ತಪ್ಪು ಮಾಡಿಲ್ವಾ?
- ತುಂಗಾತರಂಗ ಈ ಸುದ್ದಿ ಬಹಿರಂಗ ಪಡಿಸದಿದ್ದರೆ ಇಡೀ ವಿಷಯಕ್ಕೆ ಅಂದೇ ಪೋಸ್ಟ್ ಮಾರ್ಟಮ್ ಮಾಡುತ್ತಿದ್ದೀರಾ?
- ಇಂತಹ ಒಂದೂ ಪ್ರಕರಣ ನಡೆದೇ ಇಲ್ವಾ ಅಥವಾ ನಿತ್ಯಾ ಇದೇ ಕೇಸಾ? ನಿಮಗಿದು ಮಾಮೂಲಿನಾ?
- ಆ ವಿದ್ಯಾರ್ಥಿಗೆ ಮುಂದಿನ ಬದುಕಿನ ಬಗ್ಗೆ ಕಥೆ ಕಟ್ಟಿ ಬೆದರಿಸಿದವರಾರು?
- ತಪ್ಪು ಮಾಡಿ ವೈದ್ಯ ಮಹಾಶಯ ವಿದ್ಯಾರ್ಥಿನಿ ಕಾಲಿಗೆ ಬಿದ್ದು ಕ್ಷಮೆ ಕೇಳಿದರಾ? ಪಾಪ ಅನಿಸುತ್ತಲ್ವೇ?
- ದೊಡ್ಡ ಮನುಷ್ಯರು ಎಂತಹ ತಪ್ಪು ಬೇಕಾದರೂ ಮಾಡಬಹುದಾ?
- ಸಿಮ್ಸ್ ಟೆಂಪರವರಿ ನೌಕರರ ಅದರಲ್ಲೂ ಆಯಾ ಹಾಗೂ ನರ್ಸ್ ಗಳ ಕಥೆ ಏನು?