ಶಿವಮೊಗ್ಗ: ಪೊಲೀಸರ ಚಾಕು ಚಕ್ಯತೆಯಿಂದಾಗಿ ನಡೆಯ ಬೇಕಾಗಿದ್ದ ಮತ್ತೋರ್ವ ರೌಡಿ ಶೀಟರ್ನ ಕೊಲೆಯೊಂದು ತಪ್ಪಿ ಹೋಗಿದೆ. ಹಂದಿ ಅಣ್ಣಿ ಸಹಚರ ಅನಿಲ್ ಯಾನೆ ಅಂಬು ಕೊಲೆಗೆ ಸ್ಕೆಚ್ ಹಾಕಿದ್ದ ಇಬ್ಬರು ಯುವಕರು ಈಗ ದೊಡ್ಡಪೇಟೆ ಠಾಣೆಯ ಪೊಲೀಸರ ಅತಿಥಿಗಳಾಗಿದ್ದಾರೆ.
ರೌಡಿ ಶೀಟರ್ ಬಂಕ್ ಬಾಲು ಕೊಲೆ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿದ್ದ ಅನಿಲ್ ಯಾನೆ ಅಂಬುನನ್ನ ಕೊಲೆ ಮಾಡಲು ಸ್ಕೆಚ್ ಹಾಕಿದ್ದ ಚಂದನ್, ಕಿರಣ್ ವಿಘ್ನೇಶ್ನ ವಿರುದ್ಧ ಪ್ರಕರಣ ದಾಖಲಾಗಿದ್ದು, ಕಿರಣ್ ಯಾನೆ ಕುಟ್ಟಿ ಮತ್ತು ವಿಘ್ನೇಶ್ ಯಾನೆ ಜಿಂಕೆ ಎಂಬುವರನ್ನು ಪೊಲೀಸರನ್ನು ಬಂಧಿಸಿದ್ದು, ಚಂದನ್ ತಲೆ ಮರೆಸಿಕೊಂಡಿದ್ದಾನೆ.
ಬುದ್ದನಗರದ ವಿಘ್ನೇಶ್ ಯಾನೆ ಜಿಂಕೆಯ ಮನೆಯಲ್ಲಿ ಪಿಐ ರವಿಕುಮಾರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಆಯುಧಗಳು ಪತ್ತೆೆಯಾಗಿದೆ. ಈ ಸಂಬಂಧ ವಿಘ್ನೇಶ್ ಮತ್ತು ಕಿರಣ್ ಯಾನೆ ಕುಟ್ಟಿಿಯನ್ನ ಬಂಧಿಸಲಾಗಿದೆ. ತಿಂಗಳ ಹಿಂದೆ ಬಂಕ್ ಬಾಲ ಹತ್ಯೆೆಯ ಪ್ರಮುಖ ಆರೋಪಿಯಾಗಿರುವ ಅನಿಲ ಅಂಬುನನ್ನು ಹತ್ಯೆ ಮಾಡುವ ಉದ್ದೇಶದಿಂದ ಆಯುಧಗಳನ್ನು ಖರೀದಿಸಿ ಇಟ್ಟಿದ್ದಾಾಗಿ ಆರೋಪಿಗಳು ಬಾಯಿ ಬಿಟ್ಟಿದ್ದಾಾರೆ.