ಶಿವಮೊಗ್ಗ ತಾಲೂಕಿನಲ್ಲಿ ರೈತರು ಮೆಕ್ಕೆಜೋಳಕ್ಕೆ ಮೇಲು ಗೊಬ್ಬರವಾಗಿ ಯೂರಿಯಾ ಗೊಬ್ಬರವನ್ನು ಬಳಕೆ ಮಾಡುತ್ತಿದ್ದು, ಮಾರಾಟಗಾರರು ರೈತರಿಗೆ ಎಂ.ಆರ್.ಪಿ. ದರದಲ್ಲಿಯೇ ರಸಗೊಬ್ಬರ ಮಾರಾಟ ಮಾಡಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಶಿವರಾಜ್ ಕುಮಾರ್ ಎಚ್ಚರಿಕೆ ನೀಡಿರುತ್ತಾರೆ.
ಕೃಷಿ ಪರಿಕರ ಮಾರಾಟಗಾರರು ರಸಗೊಬ್ಬರಗಳ ದರಗಳನ್ನು ಮಾರ್ಗಸೂಚಿಯನ್ವಯ ಪ್ರದರ್ಶನ ಮಾಡಿ ನಿಗಿಧಿತ ನಮೂನೆಯಲ್ಲಿ ಬಿಲ್‌ಗಳನ್ನು ನೀಡಿ ಮಾರಾಟ ಮಾಡಲು ಸೂಚಿಸಿರುತ್ತಾರೆ.
ಹೆಚ್ಚಿನ ದರದಲ್ಲಿ ರಸಗೊಬ್ಬರ ಮಾರಾಟ ಮಾಡುವುದು ಅಥವಾ ಯೂರಿಯಾ ಗೊಬ್ಬರ ಇಲ್ಲವೆಂದು ಕೃತಕ ಅಭಾವ ಸೃಷ್ಠಿಸುವುದು ಕಂಡಬಂದಲ್ಲಿ ಅಂತಹ ಕೃಷಿ ಪರಿಕರ ಮಾರಾಟ ಮಳಿಗೆಗಳ ಪರವಾನಿಗೆಯನ್ನು ರದ್ದು ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿರುತ್ತಾರೆ.