Site icon TUNGATARANGA

ಸೂಡಾ ಅಧ್ಯಕ್ಷರಾಗಿ ಜ್ಯೋತಿ ಪ್ರಕಾಶ್


ಶಿವಮೊಗ್ಗ, ಆ.27:
ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಎಸ್.ಎಸ್. ಜ್ಯೋತಿ ಅವರನ್ನು ನೇಮಕ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರು, ಎಪಿಎಂಸಿ ಮಾಜಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಜ್ಯೋತಿ ಪ್ರಕಾಶ್ ಅವರ ಆಯ್ಕೆ ಮಾಡಲಾಗಿದೆ.


ನಿನ್ನೆ ಸಂಜೆ ನಗರಾಭಿವೃದ್ಧಿ ಇಲಾಖೆಯಿಂದ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿ ಜ್ಯೋತಿಪ್ರಕಾಶ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಉಳಿದಂತೆ ನಾಲ್ವರು ಪ್ರಮುಖರನ್ನು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಬಿಜೆಪಿ ಪ್ರಮುಖರಾದ ಗೋಪಾಳದ ಉಮಾಮೂರ್ತಿ, ಭದ್ರಾವತಿಯ ವಿ. ಕದಿರೇಶ್, ವಿದ್ಯಾನಗರದ ಎಸ್.ದೇವರಾಜ್ ಹಾಗೂ ಭದ್ರಾವತಿಯ ಬಿ.ಜಿ.ರಾಮಲಿಂಗಯ್ಯ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ಮುಖ್ಯಮಂತ್ರಿಯಾಗಿ ಒಂದು ವರ್ಷಗಳ ಹಿಂದೆಯೇ ಬಿಎಸ್ ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ್ದರು. ಆದರೆ, ಇಲ್ಲಿಯವರೆಗೂ ಅಕಾಲಿಕ ಮಳೆ, ಕೊರೊನಾ ಕಿರಿಕ್ ಸೇರಿದಂತೆ ಹಲವು ತೊಂದರೆಗಳಿಂದ ಅಧ್ಯಕ್ಷರ ಆಯ್ಕೆ ಆಗಿರಲಿಲ್ಲ. ಇತ್ತೀಚೆಗೆ ಎಂಎಡಿಬಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿತ್ತು.
ಪ್ರಾಮಾಣಿಕರು ನಿವೇಶನ ಬಳಸುವಂತಾಗಲಿ
ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಈಗಲೂ ಅತ್ಯಂತ ದೊಡ್ಡ ಸಮಸ್ಯೆಯಾಗಿರುವುದು ಹಿಂದಿನ ನಿವೇಶನಗಳ ಅಕ್ರಮ ಹಂಚಿಕೆ ಹಾಗೂ ಅದರ ಬಗ್ಗೆ ಇರುವ ಲೋಕಾಯುಕ್ತ ದೂರು ತಲೆ ನೋವಿನ ಸಂಗತಿಯಾಗಿದೆ. ಇದರ ಜೊತೆಗೆ ಪ್ರಾಮಾಣಿಕರು ಕೊಂಡ ನಿವೇಶನವನ್ನು ಬಳಸಲಾಗದ ಪರಿಸ್ಥಿತಿ ಎದುರಾಗಿದೆ. ಇದನ್ನು ಜ್ಯೋತಿಪ್ರಕಾಶ್ ಹೇಗೆ ತಾನೇ ಸರಿ ಪಡಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಪ್ರಾಮಾಣಿಕರ ವಾಜಪೇಯಿ ಲೇ ಔಟ್ ನಿವೇಶನದಾರರು ಮನೆ ಕಟ್ಟುವಂತಾಗಲಿ.

Exit mobile version