.
ಹೊಸನಗರ:
ಸುಮಾರು14 ದಿನದ ಮಳೆಯಲ್ಲಿ ತಾಲ್ಲೂಕಿನಲ್ಲಿ ಬಾರೀ ಪ್ರಮಾಣದಲ್ಲಿ ಅತೀವೃಷ್ಠಿ ಉಂಟಾಗಿದ್ದು 14ದಿನಗಳಲ್ಲಿ 24 ಮನೆಗಳಿಗೆ ಹಾನಿಯಾಗಿದೆ ಹಾಗೂ13 ದನದ ಕೊಟ್ಟಿಗೆಗಳು ಹಾನಿಯಾಗಿದೆ ಎಂದು ತಹಶೀಲ್ದಾರ್ ರಾಜೀವ್‌ರವರು ತಿಳಿಸಿದ್ದಾರೆ.
ದಿನದಿಂದ ದಿನಕ್ಕೆ ಮಳೆಯ ಪ್ರಮಾಣ ಹೆಚ್ಚುತ್ತಿದ್ದು ಮುಂದಿನ ದಿನದಲ್ಲಿ ತಾಲ್ಲೂಕಿನ ಎಲ್ಲ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದರಲ್ಲದೇ 24 ಜಖಂಗೊಂಡ ಮನೆಗಳಲ್ಲಿ 3 ಮನೆಗಳು ಸಂಪೂರ್ಣ ಹಾನಿಯಾಗಿದ್ದು ಇವರಿಗೆ ಸರ್ಕಾರದ ಪರಿಹಾರ ರೂಪದಲ್ಲಿ ತಲಾ5 ಲಕ್ಷ ನೀಡಲಾಗುವುದು 15 ಮನೆಗಳು ಭಾಗಶ ಜಖಂಗೊಂಡಿದ್ದು ತಲ2.50 ಪರಿಹಾರ ನೀಡಲಾಗುವುದು ಇನ್ನೂ ಉಳಿದ ಮನೆಗಳು ಅಲ್ಪ-ಸ್ವಲ್ಪ ಹಾನಿಯಾಗಿದ್ದು ಹಾನಿಯ ಪ್ರಮಾಣ ನೋಡಿ ಪರಿಹಾರ ಘೋಷಿಸಲಾಗುವುದು ಎಂದು ಕೊಟ್ಟಿಗೆಗಳಿಗೆ ತಲಾ 2 ಸಾವಿರದ ಒಂದು ನೂರು ರೂಪಾಯಿಯ ಲೆಕ್ಕದಲ್ಲಿ ಪರಿಹಾರ ಸರ್ಕಾರ ಘೋಷಿಸಿದ್ದು ಅದರಂತೆ ನೀಡಲಾಗುವುದು ಎಂದರು.
ಅತೀವೃಷ್ಠಿಯ ಪರಿಣಾಮ ತಾಲ್ಲೂಕಿನಲ್ಲಿ ಒಂದು ಹಸು ನೀಗಿದ್ದು 10 ಸಾವಿರ ಪರಿಹಾರ ನಿಡಲಾಗಿದೆ ಹೊಸನಗರ ತಾಲ್ಲೂಕಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪುರಪೆಮನೆ ಪಂಚಾಯಿತಿ ವ್ಯಾಪ್ತಿಯ ಬಿಳಗೋಡು ಗ್ರಾಮದ ಗಣಪತಿಯವರು ಹಸು ನೀಗಿದ್ದು ಸರ್ಕಾರದ ಪರಿಹಾರ 5 ಲಕ್ಷ ಚಕ್ ವಿತರಿಸಲು ಸಿದ್ಧವಾಗಿದೆ ಎಂದರು.
ಹೊಸನಗರ ತಾಲ್ಲೂಕಿನಲ್ಲಿ ಮಳೆಗೆ ಸಾಕಷ್ಟು ಗದ್ದೆಗಳು ತೋಟಗಳಿಗೆ ಹಾನಿಯಾಗಿದ್ದು ವರದಿ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರೇಡ್೨ ತಹಶೀಲ್ದಾರ್ ರಾಕೇಶ್, ಶಿರಾಸ್ಥೆದಾರ್ ಸುಧೀಂದ್ರಕುಮಾರ್ ಪ್ರಥಮ ದರ್ಜೆ ಗುಮಾಸ್ಥರಾದ ಚಿರಾಗ್, ವಿನಯ್ ಎಂ ಆರಾದ್ಯ, ಆರ್.ಐ ವೆಂಕಟೇಶ್ ಮೂರ್ತಿಯವರು ಉಪಸ್ಥಿತರಿದ್ದರು.
ಚಿತ್ರ; ಹೊಸನಗರ ತಾಲ್ಲೂಕು ಯಾಡೂರು ಗ್ರಾಮದಲ್ಲಿ ಧರೆ ಕುಸಿತಗೊಂಡಿದ್ದು ತಹಶೀಲ್ದಾರ್ ರಾಜೀವ್‌ರವರ ನೇತೃತ್ವದ ತಂಡ ಬೇಟಿ ನೀಡಿ ಪರಿಶೀಲಿಸುತ್ತಿರುವುದು.