Site icon TUNGATARANGA

ಕೊರೊನಾ ಚೆಕಪ್ ಏಕೇ..ಏನಕ್ಕೆ?, ಇಂದಿನ ವರದಿ ಇಲ್ಲಿದೆ

ಶಿವಮೊಗ್ಗ, ಆ.25:
ಶಿವಮೊಗ್ಗದಲ್ಲಿ ಮಾಮೂಲಿ. ಒಂಚೂರು ಜ್ವರ, ಕೆಮ್ಮು, ಶೀತ, ಕೈಕಾಲ್ಲೊಂದು ಗಾಯ ಇದ್ದರೆ ಸಾಕು. ಅವರಿಗೆ ಕೊರೊನಾ.
ಅದರ ಟ್ರೀಟ್ ಮೆಂಟ್ ಕೊಡುವ ಸೀವಿಯರ್ ನ ಮೆಗಾನ್ ಆಸ್ಪತ್ರೆ, ಸ್ವಲ್ಪ ಸೀವಿಯರ್ ಗೆೆ ಸುಬ್ಬಯ್ಯ, ಲಕ್ಷಣಗಳಿಲ್ಲದ ಗಾಜನೂರು ತುಂಬಾ ವಿಚಿತ್ರವಾಗಿ ಕಾಣ್ತಿವೆ.
ರೆಕಮೆಂಡ್ ಹೊಡೆಯೋ ಜನರಿಂದ, ಅದಕ್ಕೆ ಹೇಳೋ ಜನಪ್ರತಿನಿಧಿಗಳಿಂದ ತಪ್ಪಿಸಿಕೊಂಡು ಓಡಾಡುವ ಸ್ಥಿತಿಗೆ ಅಧಿಕಾರಿಗಳು ತಲುಪಿದ್ದಾರೆಂದರೆ ಅದರರ್ಥೇನು?
ಗೊತ್ತಾಗದ ಸತ್ಯ ಕಥೆ ಬಿಚ್ಚಿಡುವ ಪ್ರಯತ್ನ ನಿಮ್ಮ ತುಂಗಾತರಂಗ ದಿನಪತ್ರಿಕೆಯದು.
ಇಂದಿನ ವರದಿ;
ದಿನಕ್ಕೆ ಕನಿಷ್ಡ ಇನ್ನೂರು ಸಾಮಾನ್ಯ ಎನ್ನುವಂತಾಗುತ್ತಿದೆ. ಇವತ್ತೂ ಸಹ ಜಿಲ್ಲೆಯಲ್ಲಿ ಇಂದು 219 ಜನರಲ್ಲಿ ಪಾಸಿಟಿವ್ ಕಂಡುಬಂದಿದೆ. ಜಿಲ್ಲೆಯಲ್ಲಿ ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 6419 ಕ್ಕೆ ಏರಿಕೆಯಾಗಿದೆ.
ಇಂದು ಸೋಂಕಿನಿಂದ 04 ಜನ ಸಾವುಕಂಡಿದ್ದು, ಜಿಲ್ಲೆಯಲ್ಲಿನ ಈ ಬಗೆಗಿನ ಒಟ್ಟು ಸಾವಿನ ಸಂಖ್ಯೆ 111 ಕ್ಕೇರಿದೆ. ಇಂದು 1352 ಜನರಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, 1024 ಜನರಿಗೆ ನೆಗೆಟಿವ್ ಎಂದು ವರದಿ ಬಂದಿದೆ ಎಂದು ಜಿಲ್ಲಾ ಹೆಲ್ತ್ ಬುಲೇಟಿನ್ ನಲ್ಲಿ ತಿಳಿಸಿದೆ.
ಇಂದು 220 ಜನ ಸೋಂಕಿನಿಂದ ಗುಣಮುಖರಾಗಿ ಮೆಗ್ಗಾನ್ ಮತ್ತು ಕೋವಿಡ್ ಕೇರ್ ಸೆಂಟರ್ ನಿಂದ ಬಿಡುಗಡೆಗೊಂಡಿದ್ದಾರೆ.
ಇದರಿಂದ ಒಟ್ಟು ಗುಣಮುಖರಾಗಿರುವ ಸಂಖ್ಯೆಯೂ ಸಹ 4794 ಕ್ಕೇರಿದೆ.
ತಾಲೂಕುವಾರು ವಿವರ
ಶಿವಮೊಗ್ಗ -106 ಭದ್ರಾವತಿ-33,
ಶಿಕಾರಿಪುರ-35, ತೀರ್ಥಹಳ್ಳಿ-13,
ಸಾಗರ 18
ಹೊಸನಗರ -04
ಸೊರಬ- 09
ಇತರೆ ಜಿಲ್ಲೆ- 1
ರಾಜ್ಯ ವರದಿ ಎಂದಿನಂತೆ ಅದೇ ಆಟ. ಯಾವತ್ತೂ ಸರಿಯಾಗೊಲ್ಲ. ಈ ಕ್ಷಣದ ತನಕ ಬಂದಿಲ್ಲ.

Exit mobile version