Site icon TUNGATARANGA

ಗುಪ್ತಾಂಗದಲ್ಲಿ ಖೈದಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಇಬ್ಬರು ಮಹಿಳೆಯರು ಸಿಕ್ಕಿಬಿದ್ದದ್ದೇಗೆ?

ಸಂಗ್ರಹ ಸುದ್ದಿ, ಕನ್ನಡ ದುನಿಯಾ ನ್ಯೂಸ್

ಶಿವಮೊಗ್ಗದ ಹರ್ಷ ಹತ್ಯೆ ಆರೋಪಿಗಳ ವೀಡಿಯೋ ವೈರಲ್ ಆದ ಮೇಲೆ ಪರಪ್ಪನ ಅಗ್ರಹಾರ ಜೈಲ್ ಬಗ್ಗೆ ಆಕ್ಷೇಪ ಕೇಳಿಬಂದ ಬೆನ್ನಲ್ಲಿ ಗೃಹ ಸಚಿವರು ಬೇಟಿ ನೀಡಿ ಪರಿಶೀಲಿಸಿದ ನಂತರ ಹೊಸಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಬ್ಬರು ಗಾಂಜಾ ಸರಬರಾಜು ಮಾಡುತ್ತಿದ್ದ ಮಹಿಳೆಯರನ್ನು ಇಂದು ಪತ್ತೆ ಹಚ್ಚಿ ಬಂಧಿಸಲಾಗಿದೆ. ದುರಂತವೆಂದರೆ ಇದರಲ್ಲಿ ಭದ್ರಾವತಿ ಮೂಲದ ಮಹಿಳೆಯೊಬ್ಬಳು ಸಿಕ್ಕಿ ಬಿದ್ದಿದ್ದಾಳೆ

ಜೈಲಿನಿಂದ ಇಬ್ಬರು ಕೈದಿಗಳ ಗೆಳತಿಯರು ಅವರಗಳಿಗೆ ಗಾಂಜಾ ಪೂರೈಸುವ ಸಲುವಾಗಿ ತಮ್ಮ ಗುಪ್ತಾಂಗದಲ್ಲಿ ಗಾಂಜಾ ಇಟ್ಟುಕೊಂಡು ಬಂದಿದ್ದು, ಇದೀಗ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ.


ಚಾಮರಾಜಪೇಟೆಯ ಸಂಗೀತಾ ಎಂಬಾಕೆ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ತನ್ನ ಗೆಳೆಯ ಲೋಹಿತ್ ಗೆ ಗಾಂಜಾ ನೀಡಲು ಗುಪ್ತಾಂಗದಲ್ಲಿ 220 ಗ್ರಾಂ ಅಶಿಶ್ ಎಣ್ಣೆ ಪ್ಯಾಕೆಟ್ ಅನ್ನು ಇಟ್ಟುಕೊಂಡು ಬಂದಿದ್ದಳು.
ಸಂದರ್ಶನದ ನೆಪದಲ್ಲಿ ಬಂದ ಆಕೆಯ ನಡಿಗೆ ಕುರಿತು ಅನುಮಾನಗೊಂಡ ಜೈಲಿನ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಮಹಿಳಾ ಪೊಲೀಸರ ಮೂಲಕ ತಪಾಸಣೆ ನಡೆಸಿದಾಗ ಇದು ಬೆಳಕಿಗೆ ಬಂದಿದೆ.
ಮತ್ತೊಂದು ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಛಾಯಾ ಎಂಬಾಕೆ ಜೈಲಿನಲ್ಲಿದ್ದ ಕಾಳಪ್ಪ ಎಂಬಾತನ ಭೇಟಿಗೆ ಬಂದಿದ್ದು, ತನ್ನ ಗುಪ್ತಾಂಗದಲ್ಲಿ 50 ml ಕೊಬ್ಬರಿ ಎಣ್ಣೆ ಬಾಟಲಿಯಲ್ಲಿ ಅಶಿಶ್ ಆಯಿಲ್ ತುಂಬಿ ಗೆಳೆಯನಿಗೆ ಕೊಡಲು ಮುಂದಾಗಿದ್ದಳು. ಈಕೆ ಕೂಡ ಈಗ ಸಿಕ್ಕಿಬಿದ್ದಿದ್ದಾಳೆ.

Exit mobile version