Site icon TUNGATARANGA

ಶಿವಮೊಗ್ಗ ಡಿಸಿಸಿ ಬ್ಯಾಂಕ್/ ರೈತರಿಗೆ ರಿಯಾಯಿತಿ ದರದಲ್ಲಿ ವಾಹನಸಾಲ, ಅವಧಿಯೊಳಗೆ ಅವಕಾಶ ಪಡೆಯಿರಿ

ಶಿವಮೊಗ್ಗ, ಜು.15:
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವತಿಯಿಂದ “ ಮಾನ್ ಸೂನ್ ರೈತ ವಾಹನ ಉತ್ಸವ-2022 “ ಎನ್ನುವ ವಿಶೇಷ ಸಾಲ ಯೋಜನೆಯನ್ನು ಜಿಲ್ಲೆಯ ರೈತರಿಗಾಗಿಯೇ ಜಾರಿಗೆ ತಂದಿದೆ ಎಂದು ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ ತಿಳಿಸಿದ್ದಾರೆ.


ಸದರಿ ಯೋಜನೆಯಲ್ಲಿ ನಾಲ್ಕು ಚಕ್ರದ ವಾಹನ ಖರೀದಿ ಸಾಲಕ್ಕೆ ಮಾಸಿಕ ಬಡ್ಡಿ ಕೇವಲ 0.75 ಪೈಸೆ, ದ್ವಿಚಕ್ರ ವಾಹನ ಖರೀದಿ ಸಾಲಕ್ಕೆ ಮಾಸಿಕ ಬಡ್ಡಿ ಕೇವಲ 0.79 ಪೈಸೆ ಮಾತ್ರ ಅನ್ವಯವಾಗುತ್ತದೆ. ಈ ಯೋಜನೆಯು ದಿನಾಂಕ: 01.07.2022 ರಿಂದ ಪ್ರಾರಂಭಗೊಂಡಿದ್ದು ದಿನಾಂಕ: 31.08.2022 ರವರೆಗೆ ಸೀಮಿತ ಅವಧಿಗೆ ಮಾತ್ರ ಜಾರಿಯಲ್ಲಿರುತ್ತದೆ. ಆದ್ದರಿಂದ ಜಿಲ್ಲೆಯ ರೈತ ಭಾಂಧವರು ಈ ಯೋಜನೆಯನ್ನು ಸದುಪಯೋಗಿಸಿಕೊಳ್ಳಬೇಕಾಗಿ ವೈಯುಕ್ತಿಕವಾಗಿ ಹಾಗೂ ಬ್ಯಾಂಕಿನ ಆಡಳಿತ ಮಂಡಳಿ ಪರವಾಗಿ ಈ ಮೂಲಕ ಕೋರಿದ್ದಾರೆ.

Exit mobile version