Site icon TUNGATARANGA

shimoga/ ಜು.21 : ರೈತರ ಬೃಹತ್ ಸಮಾವೇಶ :ಹಸಿರುಸೇನೆ ರಾಜ್ಯಾ ಧ್ಯಕ್ಷ ಹೆಚ್.ಆರ್. ಬಸವರಾಜಪ್ಪ !..

ಶಿವಮೊಗ್ಗ, ಜು.೧೩:
ನರಗುಂದ-ನವಲಗುಂದದ 42 ನೇ ವರ್ಷದ ಹುತಾತ್ಮರ ದಿನಾಚರಣೆ ಅಂಗವಾಗಿ ಜುಲೈ 21 ರಂದು ಮಧ್ಯಾಹ್ನ12 ಗಂಟೆಗೆ ನವಲಗುಂದದಲ್ಲಿ ರೈತರ ಬೃಹತ್ ಸಮಾವೇಶ ವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾ ಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಹೇಳಿದರು.
ಅವರು ಇಂದು ರೈತಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನರಗುಂದ ?ನವಲಗುಂದ ರೈತರ ಮೇಲೆ ಅಮಾನುಷ ದೌರ್ಜನ್ಯ ನಡೆದು ೪೨ ವರ್ಷಗಳಾಗಿವೆ.

ಇದರ ಅಂಗವಾಗಿ ರೈತರ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶದ ಮೂಲಕ ರೈತರ ಮೂರು ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಭೀಕರ ಅತಿವೃಷ್ಠಿ ಮತ್ತು ಅನಾವೃಷ್ಠಿಗೆ ಒಳಗಾದ ರೈತರಿಗೆ ಪರಿಹಾರ ನೀಡಬೇಕು. ಕೃಷಿ ಸಾಲ ಮನ್ನಾ ಮಾಡಬೇಕು. ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ನೀಡಬೇಕು. ಮಹಾದಾಯಿ ಕಳಸ ಬಂಡೂರಿ ಯೋಜನೆ ಜಾರಿ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.


ರೈತರ ಕಷ್ಟ ನಷ್ಟ ಸಂಕಷ್ಟಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಸರ್ಕಾರಗಳ ವಿರುದ್ಧ ಚಳವಳಿಯ ಮುಖಾಂತರ ಒತ್ತಾಯ ಮಾಡಿದರೂ ಎಲ್ಲಾ ಸರ್ಕಾರಗಳು ರೈತರನ್ನು ನಿರ್ಲಕ್ಷ್ಯ ಮಾಡಿವೆ. ರೈತರ ಮೇಲೆ ನಿರಂತರ ವಾದ ಶೋಷಣೆ ನಡೆಯುತ್ತಲೇ ಇದೆ. ಬಗರ್ ಹುಕುಂ ಸಾಗುವಳಿ ರೈತರಿಗೆ ಅನ್ಯಾಯವಾಗುತ್ತಲೇ ಇದೆ. ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ರೈತರಿಗೆ ಅನ್ಯಾಯ ಮಾಡುತ್ತಿರುವ ಸರ್ಕಾರಗಳ ವಿರುದ್ಧ ಮುಂದಿನ ಹೋರಾಟದ ತೀರ್ಮಾನಗಳನ್ನು ಈ ಸಮಾವೇಶದಲ್ಲಿ ತೆಗೆದುಕೊಳ್ಳಲಾಗುವುದು ಎಂದರು.


ಇಲ್ಲಿವರೆಗೆ ಸುಮಾರು ೧೫೩ ರೈತರನ್ನು ಪೊಲೀಸರು ಗುಂಡಿಟ್ಟು ಸಾಯಿಸಿದ್ದಾರೆ. ದೇಶದಲ್ಲಿ ಇತ್ತೀಚೆಗೆ ಗುಂಡು ಹಾರಿಸದೇ ೧೦ ಲಕ್ಷ ರೈತರನ್ನು ಕೊಲ್ಲಲಾಗಿದೆ. ಕರ್ನಾಟಕದಲ್ಲಿ ೪೦ ಸಾವಿರಕ್ಕೂ ಹೆಚ್ಚು ರೈತರನ್ನು ಕೊಲ್ಲಲಾಗಿದೆ. ಇದಕ್ಕೆ ಆತ್ಮಹತ್ಯೆ ಎಂದು ಹೆಸರುಕೊಟ್ಟು ಒಂದು ರೀತಿಯಲ್ಲಿ ಪ್ರಾಯೋಜಿತ ಕೊಲೆಗಡುಕತನದ ಕೆಸಲವನ್ನು ಸರ್ಕಾರಗಳು ಇಂದಿಗೂ ಮುಂದುವರೆಸುತ್ತಿವೆ ಎಂದು ಆರೋಪಿಸಿದರು.


ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಹಿಟ್ಟೂರು ರಾಜು, ಟಿ.ಎಂ. ಚಂದ್ರಪ್ಪ, ಈಶಣ್ಣ ಅರಬಿಳಚಿ, ಕೆ. ರಾಘವೇಂದ್ರ, ಡಿ.ಹೆಚ್. ರಾಮಚಂದ್ರಪ್ಪ, ಇ.ಬಿ. ಜಗದೀಶ್, ಎಸ್. ಶಿವಮೂರ್ತಿ, ರುದ್ರೇಶ್ ಮತ್ತಿತರರಿದ್ದರು.

Exit mobile version