Site icon TUNGATARANGA

ತಾಯಿಯ ಶವ ಮನೆಯಲ್ಲಿದ್ದರು ಪರೀಕ್ಷೆ ಬರೆದು ಅಂತ್ಯಕ್ರಿಯೆಗೆ ಬಂದ ಪುತ್ರಿ ಎಲ್ಲಿ ಗೊತ್ತಾ ? ನೀವೇ ನೋಡಿ !..

ರಿಪ್ಪನ್‌ಪೇಟೆ, ಜು.೧೩:
ತಾಯಿಯ ಶವ ಮನೆಯಲ್ಲಿದ್ದರೂ ಪದವಿ ಪಡೆಯಬೇಕೆಂಬ ಹೆಬ್ಬಯಕೆಯ ಪುತ್ರಿಯೊಬ್ಬರು ಪ್ರವೇಶ ಪರೀಕ್ಷೆಗೆ ಹಾಜರಾಗಿ ನಂತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಘಟನೆ ಸಮೀಪದ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಂತಪುರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.


ಗ್ರಾಮದ ನಾಗರಾಜ್ ಎಂಬುವವರ ಪತ್ನಿ ಅನೂರಾಧ (೪೫) ಶಿವಮೊಗ್ಗದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಸಂಜೆ ಅವರ ಪಾರ್ಥಿವ ಶರೀರವನ್ನು ಮನೆಗೆ ತಂದು ಮಂಗಳವಾರ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿತ್ತು. ಬೆಳಿಗ್ಗೆ ಅವರ ಪುತ್ರಿ ಸ್ಫೂರ್ತಿ ಅವರ ಬಿಎಸ್‌ಸಿ ಕೃಷಿ ಪದವಿಗೆ ಪ್ರವೇಶ ಪರೀಕ್ಷೆ ನಿಗದಿಯಾಗಿತ್ತು.

ಪುತ್ರಿಯು ಹಿರಿಯರ ಅನು ಮತಿ ಪಡೆದು ನೋವಿನಲ್ಲೇ ಪರೀಕ್ಷೆ ಬರೆದು ಬಂದ ಮೇಲೆ ಸಂಜೆ ಅಂತ್ಯಸಂಸ್ಕಾರ ನೆರವೇರಿ ಸಲಾಯಿತು. ಶಿವಮೊಗ್ಗದ ಮಹೇಶ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇಕಡ ೯೦ ಅಂಕ ಪಡೆದಿರುವ ಸ್ಫೂರ್ತಿ, ಕೃಷಿ ಪದವಿಯ ಕನಸಿನೊಂದಿಗೆ ನೋವಿನಲ್ಲೂ ಪರೀಕ್ಷೆ ಬರೆದು ಯುವಜನತೆಗೆ ಮಾದರಿಯಾಗಿದ್ದಾರೆ.

Exit mobile version