Site icon TUNGATARANGA

ಬಾರೀ ಮಳೆಗೆ ಆಗುಂಬೆ ಘಾಟಿಯ ಗುಡ್ಡ ಕುಸಿತ/ ರಸ್ತೆ ಸಂಚಾರ ಬಂದ್

ಶಿವಮೊಗ್ಗ, ಜು. 10:
ಶಿವಮೊಗ್ಗ ಮತ್ತು ಉಡುಪಿ, ದ.ಕ ಜಿಲ್ಲೆಗೆ ಸೇರಿಸುವ ಆಗುಂಬೆ ಘಾಟಿಯಲ್ಲಿ ಇಂದು ಮುಂಜಾನೆ ಗುಡ್ಡಕುಸಿದಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಸೋಮೇಶ್ವರದಿಂದ ಆಗುಂಬೆ ಕಡೆ ಬರುವ ನೂರನೇ ತಿರುವಿನಲ್ಲಿ ಇಂದು ಮುಂಜಾನೆ ಗುಡ್ಡ ಕುಸಿದಿದೆ.
ಇಲ್ಲಿಯವರೆಗೂ ರಸ್ತೆಯ ಸಂಚಾರ ಅಸ್ತವ್ಯಸ್ತವಾಗಿದೆ.
ಆಗುಂಬೆಯಲ್ಲಿ ಸತತವಾಗಿ 8 ದಿನದಿಂದ ಭಾರಿ ಮಳೆಯಾಗುತ್ತಿದ್ದು, ಇಂದು ಗುಡ್ಡಕುಸಿದಿದೆ.
ಈ ಪ್ರದೇಶ ಉಡುಪಿ ಜಿಲ್ಲಾಡಳಿತಕ್ಕೆ ಸೇರಿದರೂ ಸಹ ಭಾನುವಾರವಾದುದರಿಂದ ಈ ರಸ್ತೆಯಲ್ಲಿ ಸಂಚರಿಸುವವರು ಪರ್ಯಾಯ ಮಾರ್ಗ ಹುಡುಕುತ್ತಾ ಹೊಸ ಮಾರ್ಗ ಹಿಡಿದಿದ್ದಾರೆ.
ಈ ನಡುವೆ ಹೊನ್ನೇತಾಳು ಗ್ರಾಮಪಂಚಾಯಿತಿಯ ನೆಂಟೂರು ಗ್ರಾಮ ಬೆಳ್ಳೂರು ಎಂಬ ಹಳ್ಳಿಯಲ್ಲಿ ಅಧಿಕ ಮಳೆಯಿಂದಾಗಿ ಮೂರು ಎಮ್ಮೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಈ ಮೂರು ಎಮ್ಮೆಗಳು ಸಚಿನ್ ಎಂಬುವರವರಿಗೆ ಸೇರಿದ್ದಾಗಿದೆ. ಅವರು ಆಗುಂಬೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Exit mobile version