Site icon TUNGATARANGA

ಶಿಕ್ಷಣದ ಜೊತೆಗೆ ಅವಕಾಶಗಳನ್ನು ಬಳಸಿಕೊಳ್ಳಬೇಕು : ಗೃಹ ಸಚಿವ ಆರಗ ಜ್ಞಾನೇಂದ್ರ !..

ಶಿವಮೊಗ್ಗ,
ಯಾವುದೇ ಸಮಾಜ ಸಮುದಾಯ ಮುಖ್ಯವಾಹಿ ನಿಗೆ ಬರಬೇಕಾದರೆ ಶಿಕ್ಷಣದ ಜೊತೆಗೆ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.


ಒಕ್ಕಲಿಗರ ಯುವ ವೇದಿಕೆಯಿಂದ ಇಂದು ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋ ಜಿಸಿದ್ದ ಒಕ್ಕಲಿಗರ ಯುವ ಸಮಾವೇಶ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಮುಂದೆ ಇದ್ದೇವೆ. ಜಿಲ್ಲೆಯಲ್ಲಿ ಎರಡು ಪ್ರಮುಖ ಹಾಸ್ಟೆಲ್ ಗಳಿವೆ. ಇವುಗಳಿಂದ ಹೆಚ್ಚಿನ ಮಕ್ಕಳು ವಿದ್ಯಾಭ್ಯಾಸ ಮಾಡಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಇದು ಹೆಚ್ವಿನ ಅನುಕೂಲವಾಗಿದೆ. ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಶಿಕ್ಷಣ ಪಡೆದಿರುವುದು ಶ್ಲಾಘನೀಯ. ಜಿಲ್ಲೆ ಮಾತ್ರವಲ್ಲ, ಬೆಂಗಳೂರಿನಲ್ಲಿಯೂ ಅನೇಕರು ಇದ್ದಾರೆ ಎಂದರು.


ಅಡಿಕೆಗೆ ಬೆಲೆ ಬಂದಿದ್ದರಿಂದಾಗಿ ಒಕ್ಕಲಿಗ ಸಮು ದಾಯ ಸ್ವಲ್ಪ ಚೇತರಿಸಿಕೊಳ್ಳುವಂತಾಗಿದೆ. ತೀರ್ಥಹಳ್ಳಿ ಯಲ್ಲಿ ಅಗಲವಾಗಿರುವ ರಸ್ತೆ ಹೊಸ ಮಾಡೆಲ್ ಕಾರ್ ಗಳನ್ನು ನಿಲ್ಲಿಸಲು ಸಾಕಾಗುತ್ತಿಲ್ಲ. ಇದು ಒಂದು ಬೆಳೆಯ ಬೆಲೆಯಿಂದಾದ ಬದಲಾವಣೆ ಎಂದರು.


ಅಡಿಕೆ ಬೆಲೆಯಿಂದಾಗಿ ಕೆಲಸಗಾರರ ಬದುಕಿನಲ್ಲಿ ಯೂ ಬದಲಾವಣೆಯಾಗಿದೆ. ಉತ್ತಮ ಜೀವನ ನಡೆಸುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಡಾ.ರಂಗಪ್ಪ ಗೌಡರ ಪಾತ್ರ ಅತೀ ಮುಖ್ಯವಾಗಿದೆ. ಇಲ್ಲಿ ಆದಿಚುಂಚ ನಗಿರಿ ಶಾಖಾ ಮಠ ಅರಂಭವಾದ ಬಳಿಕ ಶಾಲೆಗಳು ಆರಂಭವಾಗಿ ವಿದ್ಯದಾನ ಮಾಡಲಾಗುತ್ತಿದೆ ಎಂದರು.
ಇಂದು ಗುರುವೂ ಇದ್ದಾರೆ. ಗುರಿಯೂ ಇದೆ. ಹೀಗಾಗಿ ಇಡೀ ಸಮುದಾಯ ವಿದ್ಯಾವಂತವಾಗಿ ಆರ್ಥಿಕವಾಗಿ ಸದೃಢವಾಗುತ್ತಿದ್ದಾರೆ. ಒಂದು ಸಮು ದಾಯ ಮೇಲೆ ಬರಬೇಕಾದರೆ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಬೇಕಿದೆ. ವಿವಿಧ ಕ್ಷೇತ್ರಗಳಲ್ಲಿ ಮಕ್ಕಳು ಸಾಧನೆ ಮಾಡುತ್ತಿದ್ದು, ಇನ್ನಷ್ಟು ಉತ್ತೇಜನನೀಡಬೇಕಿದೆ ಎಂದರು.


ಆದಿಚುಂಚನಗಿರಿ ಶಾಖಾ ಮಠದ ಶ್ರೀ ಪ್ರಸನ್ನನಾಥಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಯುವ ವೇದಿಕೆ ಅಧ್ಯಕ್ಷ ಕೆ. ಚೇತನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಕಾಡಾ ಅಧ್ಯಕ್ಷೆ ಪವಿತ್ರರಾಮಯ್ಯ, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಸಿರಿಬೈಲು ಧರ್ಮೇಗೌಡ, ಬಿ.ಎ. ರಮೇಶ್ ಹೆಗ್ಡೆ, ಹೆಚ್.ಎಸ್. ಸುಂದರೇಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಶ್ರೀಕಂಠ, ಪಾಲಿಕೆ ಸದಸ್ಯೆ ಸುವರ್ಣಾ ಶಂಕರ್ ಮೊದಲಾದವರು ಇದ್ದರು.

Exit mobile version