Site icon TUNGATARANGA

ಅಮರನಾಥ್ ಪ್ರವಾಸಕ್ಕೆ ಹೋಗಿದ್ದ ಶಿವಮೊಗ್ಗ ಮೂಲದ ಹದಿನಾರು ಗೆಳತಿಯರ ತಂಡ ಸೇಫ್

ಶಿವಮೊಗ್ಗ, ಜು.09:
ಅಮರನಾಥ್ ನಲ್ಲಿ ಮೇಘ ಸ್ಪೋಟದಿಂದ ಹಠಾತ್ ಪ್ರವಾಹ ಸಂಭವಿಸಿ ಹಲವರು ಸಾವು ಕಂಡ ಸ್ಥಳದ ಸನಿಹದಲ್ಲಿದ್ದ ಶಿವಮೊಗ್ಗ ಮೂಲದ ಹದಿನಾರು ಮಹಿಳಾ ಪ್ರವಾಸಿಗರ ತಂಡ ಸೇಫಾಗಿದೆ.
ಮೇಲಿನ ಅಮರ್ ನಾಥ್ ದರುಶನ ಪಡೆದು ಯಾತ್ರೆ ಪ್ರವಾಸವನ್ನು ಬದಲಿಸಿದ್ದಾರೆ.


ಅಲ್ಲಿಗೆ ತೆರಳಿದ್ದ ಶಿವಮೊಗ್ಗ ಮಹಾನಗರ ಪಾಲಿಕೆಯ ಉಪಮೇಯರ್ ಸುರೇಖಾ ಮುರುಳೀಧರ್ ಅವರ ಗೆಳತಿಯರ ತಂಡ ಸುರಕ್ಷಿತವಾಗಿದೆ.
ಮೇಘ ಸ್ಪೋಟದ ಕಾರಣ ಅಮರನಾಥ ಯಾತ್ರೆ ಸ್ಥಗಿತಗೊಂಡಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್ ಸುರೇಖಾ ಮುರುಳಿಧರ್, ಶುಭಾ ಚಿದಾನಂದ್, ಜಯಶ್ರೀ, ಮೃದುಲಾ ಸೇರಿದಂತೆ 16 ಮಹಿಳೆಯರ ಕಳೆದ ಜೂ.30 ರಂದು ಬೆಂಗಳೂರಿನಿಂದ ಜಮ್ಮುವರೆಗೆ ವಿಮಾನ ಯಾನ ಆರಂಭಿಸಿದ್ದರು. ನಂತರ ಟಿಟಿಯಲ್ಲಿ ವೈಷ್ಣೇವದೇವಿ ದರ್ಶನ ಮುಗಿಸಿ ಅಮರ್ ನಾಥ ಯಾತ್ರೆಗೆ ಹೋಗುವಾಗ ಮೇಘ ಸ್ಪೋಟಗೊಂಡು ಯಾತ್ರೆ ಸ್ಥಗಿತಗೊಂಡಿದೆ. ಅಲ್ಲಿ ಮೇಲೆ ಹೋಗಲಾಗಲಿಲ್ಲ.


ಅಮರನಾಥ ಬೇಸ್ ಕ್ಯಾಂಪ್ ನಲ್ಲಿದ್ದ ಈಗ ಅನತನಗರ್ ನಿಂದ ಶ್ರೀನಗರ ಕಡೆ ಪ್ರವಾಸ ಮುಂದುವರೆಸಿದ್ದಾರೆ.
ಇಂದು ಬೆಳಿಗ್ಗೆ 6 ಕ್ಕೆ ಬೇಸ್ ಕ್ಯಾಂಪ್ ನಿಂದ ಅಮರನಾಥ ದೇವಸ್ಥಾನಕ್ಕೆ ತೆರಳಬೇಕಿತ್ತು. ಮೇಘಸ್ಪೋಟದ ಹಿನ್ನೆಲೆ ಬೇಸ್ ಕ್ಯಾಂಪ್ ನಲ್ಲಿ ತಂಡ ಉಳಿದುಕೊಂಡಿದದ್ದ ತಂಡ ಅಮರನಾಥ ದರುಶನವನ್ನು ಕೆಳಗಷ್ಟೇ ನೋಡಿ ಕಾಶ್ಮೀರ ಕಡೆ ಪ್ರಯಾಣ ಬೆಳೆಸಿದೆ. ಎಲ್ಲರಿಗೂ ಪ್ರಯಾಣ ಸುಖಕರವಾಗಿರಲಿ.

Exit mobile version