Site icon TUNGATARANGA

shimoga/ಕುರಿ/ಮೇಕೆ ಸಾಕಾಣಿಕೆ ಅರ್ಜಿ ಅಹ್ವಾನಿಸಲಾಗಿದೆ ಅಸಕ್ತರು ಕೂಡಲೇ ಅರ್ಜಿ ಸಲ್ಲಿಸಿ !..

ಜಿಲ್ಲೆಯಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ, ನಿಯಮಿತದ ವತಿಯಿಂದ ವಿಶೇಷ ಘಟಕ ಯೋಜನೆ/ಗಿರಿಜನ ಉಪಯೋಜನೆಗಳಡಿ ಕುರಿ/ಮೇಕೆ ಸಾಕಾಣಿಕೆ ಮಾಡಲು ಫಲಾನುಭವಿ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.


ನಿಗಮದ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕ ಸಹಕಾರ ಸಂಘಗಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ18 ರಿಂದ60 ವಯೋಮಿತಿಯ ಮಹಿಳಾ ಸದಸ್ಯರು ಅರ್ಜಿ ಸಲ್ಲಿಸಬಹುದು. ಮಹಿಳಾ ಸದಸ್ಯರು ಲಭ್ಯವಿಲ್ಲದಿದ್ದಲ್ಲಿ ಪುರುಷ ಸದಸ್ಯರು ಅರ್ಜಿ ಸಲ್ಲಿಸಬಹುದು. ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳು ಇಲ್ಲದೇ ಇರುವ ತಾಲ್ಲೂಕುಗಳಲ್ಲಿಯೂ ಸಹ ಕುರಿ ಸಾಕಾಣಿಕೆದಾರರು ಅರ್ಜಿ ಸಲ್ಲಿಸಬಹುದಾಗಿದ್ದು ಜುಲೈ 20 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ.


ಹೆಚ್ಚಿನ ಮಾಹಿತಿಗೆ ಆಯಾ ತಾಲ್ಳೂಕು ಸಹಾಯಕ ನಿರ್ದೇಶಕರ ಕಚೇರಿ/ಕುರಿಗಾರರ ಸಂಘದ ಕಚೇರಿಗಳನ್ನು ಸಂಪರ್ಕಿಸಬಹುದು. ಶಿವಮೊಗ್ಗ ತಾಲ್ಲೂಕು ಪಶು ವೈದ್ಯಾಧಿಕಾರಿ ಸಂಖ್ಯೆ 7406897075, ಶಿಕಾರಿಪುರ 9972957278 ಭದ್ರಾವತಿ  8722365101,, ಸಾಗರ 9481255897, ಸೊರಬ9900632880
ತೀರ್ಥಹಳ್ಳಿ08181-228521, ಹೊಸನಗರ 9449623236  ನ್ನು ಸಂಪರ್ಕಿಸಬಹುದೆಂದು ನಿಗಮದ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Exit mobile version