Site icon TUNGATARANGA

ಹರ್ಷ ಕುಟುಂಬದವರು ಹೇಳಿದಂತೆ ಮಾಡಲಾಗೊಲ್ಲ: ಆರಗ ಜ್ಞಾನೇಂದ್ರ ಸಮಜಾಯಿಷಿ

ಶಿವಮೊಗ್ಗ, ಜು.08:
ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷ ಕುಟುಂಬಕ್ಕೆ ನನ್ನ ಮಾತು ಕೇಳುವ ವ್ಯವಧಾನ ಇಲ್ಲ, ಅವರು ಹೇಳಿದಂತೆ ನಾನು ಕೇಳಲು ಆಗುವುದಿಲ್ಲ, ನಾನು ಕಾನೂನು ಪ್ರಕಾರ ನಡೆದುಕೊಳ್ಳಬೇಕು ಎಂದು ಗೃಹ ಸಚಿವರಾದ ಅರಗ ಜ್ಞಾನೇಂದ್ರರವರು ತಿಳಿಸಿದ್ಧಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಮಾತನಾಡಿದ ಅರಗ ಜ್ಞಾನೇಂದ್ರ ಅವರು ಹರ್ಷ ಕುಟುಂಬದವರು ಹೇಳಿದ ರೀತಿಯಲ್ಲಿ ನಾನು ಮಾಡಲಿಕ್ಕೆ ಆಗೊಲ್ಲ, ಕಾನೂನು ಪ್ರಕಾರ ನಡೆದುಕೊಳ್ಳಬೇಕು. ಒಬ್ಬ ಗೃಹ ಸಚಿವನಾಗಿ ಆರೋಪಿಗಳನ್ನು ಎಳೆ ತಂದು ಅವರ ಮುಂದೆ ಹೊಡೆಯಲು ಆಗುತ್ತಾ ಅಥವಾ ಅವರ ಮೇಲೆ ಫೈರ್ ಮಾಡಲು ಆಗುತ್ತಾ?
ಹರ್ಷ ಕೊಲೆಯಿಂದ ಅವರ ಕುಟುಂಬಕ್ಕೆ ಎಷ್ಟು ನೋವಾಗಿದೆಯೋ ಅಷ್ಟೇ ನೋವು ನನಗೂ ಆಗಿದೆ. ಹರ್ಷ ಕುಟುಂಬದ ಎಲ್ಲರೂ ಸಾಂತ್ವನ ಹೇಳಿದ್ದೇವೆ, ತೀರಿಕೊಂಡ ಹರ್ಷನನ್ನು ಬದುಕಿಸಲು ಆಗುವುದಿಲ್ಲ. ಆದರೆ ಅವರ ಆತ್ಮಕ್ಕೆ ಶಾಂತಿ ಕೊಡಿಸಲು ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುತ್ತೇವೆ ಎಂದು ತಿಳಿಸಿದ್ದಾರೆ.


ನಾನು ಹರ್ಷ ಕುಟುಂಬ ಬೇಟಿ ಮಾಡಿಲ್ಲಾ ಅಂತಲ್ಲಾ, ನಾನು ಅವರ ಕುಟುಂಬದವರನ್ನು ಭೇಟಿ ಮಾಡಿದ್ದೇನೆ. ಭೇಟಿ ಮಾಡಿದಾಗ ಅವರು ಏನೇನೂ ಮಾತನಾಡುತ್ತಾರೆ. ಯಾವತ್ತು ಮಾಡುತ್ತಿರಿ, ಯಾವ ಕ್ಷಣದಲ್ಲಿ ಮಾಡುತ್ತೀರಿ ಅಂತೆಲ್ಲಾ ಕೇಳುತ್ತಾರೆ. ಹೀಗೆ ಮಾತನಾಡಿದ್ರೆ ನಾನು ಗ್ರಹ ಸಚಿವನಾಗಿ ಏನು ಮಾತನಾಡಲು ಸಾಧ್ಯ? ಹಾಗಾಗಿ ಜಾಸ್ತಿ ಮಾತನಾಡುವುದಿಲ್ಲ ಎಂದಿರುವೆ, ಸಮಾಧಾನವಾಗಿ ಮಾತನಾಡಿ ಎಂದರೆ ಕೂಗಿಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಕೊಲೆ ಆರೋಪಿಗಳು ಜೈಲಿನಲ್ಲಿ ಪೋನ್ ಬಳಕೆ ಮಾಡಿರುವುದು ಕಂಡು ಬಂದ ತಕ್ಷಣವೇ ಕ್ರಮ ತೆಗೆದುಕೊಂಡಿದ್ದೇವೆ. ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕಳುಹಿಸಿ ಇಡೀ ಜೈಲನ್ನು ಜಾಲಾಡಿದ್ದೇವೆ. ಮೊದಲು ಸೀಜ್ ಮಾಡುವ ಪ್ರಕ್ರಿಯೆ ಮಾತ್ರ ಇತ್ತು. ಈಗ ಅವರ ಮೇಲೆ ಹಾಗೂ ಮೊಬೈಲ್ ಒಳಗೆ ಬಿಟ್ಟ ಸಿಬ್ಬಂದಿಯ ಮೇಲೂ ಎಪ್.ಐ.ಆರ್. ಆಗಿದೆ. ತಪ್ಪು ಮಾಡಿದ ಸಿಬ್ಬಂದಿಯನ್ನು ಅಮಾನತ್ತು ಮಾತ್ರ ಮಾಡುವುದಿಲ್ಲ, ಅವರನ್ನು ಅದೇ ಜೈಲಿನಲ್ಲಿ ತಂದು ಕೂಡಿಸುವ ಕೆಲಸ ಮಾಡುತ್ತೇವೆ ಎಂದರು.

Exit mobile version