Site icon TUNGATARANGA

ಹತ್ಯೆಯಾಗಿದ್ದ ಹರ್ಷನ ಸಹೋದರಿಗೆ ಗೃಹ ಸಚಿವರು ಗದರಿದ್ದಾದರೂ ಏಕೆ? ಏನಿದು ವಿಡಿಯೋ ಆಟ….!

ಬೆಂಗಳೂರು,ಜು.8:
ಶಿವಮೊಗ್ಗದಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತ ಹರ್ಷನ ಸಹೋದರಿ ಗೃಹಸಚಿವರನ್ನು ಭೇಟಿ ಮಾಡಿದ ವೇಳೆ ನಡೆದ ಚರ್ಚೆಯಲ್ಲಿ ಗೃಹ ಸಚಿವರು ಗಧರಿಸಿ ಕಳುಹಿಸಿರುವ ವಿಡಿಯೋ ವೈರಲ್ ಆಗಿದೆ.


ವೈರಲ್ ವಿಡಿಯೋದಲ್ಲಿ ಗೃಹ ಸಚಿವ ಆರಗಜ್ಞಾನೇಂದ್ರ ಹರ್ಷನ ಸಹೋದರಿಗೆ ಗಧರಿಸುವುದು ಕೇಳಿ ಬಂದಿದೆ. ಬಳಿಕ ಹರ್ಷನ ಸಹೋದರಿ ಅಶ್ಬಿನಿ‌ ಮಾತನಾಡುತ್ತಾ, ನನಗೆ ಕಿಂಚಿತ್ತೂ ಮರ್ಯಾದೆ ಕೊಡದೆ ಜೋರು ಮಾಡಿ‌ ಕಳುಹಿಸಿದ್ದಾರೆ. ನಾವಿಲ್ಲಿ ಏನು‌ ನಡೆಯುತ್ತದೆ ಎಂದು ಕೇಳುವುದು ತಪ್ಪಾ? ನ್ಯಾಯ ಕೇಳುವುದು ತಪ್ಪಾ? ಎಲ್ಲೂ‌ ನ್ಯಾಯ ಸಿಗಲ್ಲ ಎಂದು ನನಗೆ ಗೊತ್ತಾಗಿ ಹೋಗಿದೆ. ನಮಗೆ ಮರ್ಯಾದೆ ಕೊಡದೆ, ರೆಸ್ಪಾನ್ಸ್ ಕೊಡದೆ ಜೋರು ಮಾಡಿ ಕಳುಹಿಸುವುದು ಎಷ್ಟು ಸರಿ ಎಂದು ಹರ್ಷನ ಸಹೋದರಿ ಹೇಳಿರುವ ವೀಡಿಯೋ ವೈರಲ್ ಆಗಿದೆ.
ಈ ವೇಳೆ ವ್ಯಕ್ತಿಯೋರ್ವ ಸಾಹೇಬರ Appointment ಬೇಕಾ ಎಂದು ಕೇಳುತ್ತಾರೆ. ಈ ವೇಳೆ ಹರ್ಷನ ಸಹೋದರಿ ನನಗೆ ಬೇಡ, ನನಗೆ ಗೊತ್ತಾಗೋಯ್ತು ಎಂದು ಹೇಳಿ ತೆರಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

Exit mobile version