ಭದ್ರಾವತಿ,
ಬೀದಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಂಡು ಮನೆ ಆವರಣಕ್ಕೆ ಬಂದ ಜಿಂಕೆಯೊಂದನ್ನು ಪೊಲೀಸ್ ಸಿಬ್ಬಂದಿಯೊಬ್ಬರು ರಕ್ಷಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿರುವ ಘಟನೆ ಬುಧವಾರ ನಡೆದಿದೆ
.
ತಾಲೂಕಿನ ಹುಣಸೇಕಟ್ಟೆ ಜಂಕ್ಷನ್ ನಿವಾಸಿ, ಪೊಲೀಸ್ ಗುಪ್ತಚರ ಇಲಾಖೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಲ್ಲೇಶ್ ನಾಯ್ಕ ಅವರ ಮನೆ ಆವರಣಕ್ಕೆ ಬೆಳಿಗ್ಗೆ ೬ ಗಂಟೆ ಸಮಯದಲ್ಲಿ ಜಿಂಕೆಯೊಂದು ಬಂದಿದ್ದು,
ತಕ್ಷಣ ಮಲ್ಲೇಶ್ನಾಯ್ಕ ಅವರು ಅದನ್ನು ರಕ್ಷಿಸಿ ಉಂಬ್ಳೆಬೈಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಜಿಂಕೆಯನ್ನು ಪುನಃ ಅರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.