Site icon TUNGATARANGA

ಆರು ಸಾವಿರದತ್ತ ಸೊಂಕಿತರು..! ಗಾಬರಿ ಬೇಡ, ಶಿವಮೊಗ್ಗ ಥಂಡಾ ಅಷ್ಟೇ!

ಶಿವಮೊಗ್ಗ, ಆ.25:
ಶಿವಮೊಗ್ಗದಲ್ಲಿ ಮಾಮೂಲಿ ಆಗೋಗ್ತಿದೆಯಲ್ಲ. ದಿನಕ್ಕೆ ಕನಿಷ್ಡ ಇನ್ನೂರು ಸಾಮಾನ್ಯ ಎನ್ನುವಂತಾಗುತ್ತಿದೆ. ಇವತ್ತೂ ಸಹ ಜಿಲ್ಲೆಯಲ್ಲಿ ಇಂದು 209 ಜನರಲ್ಲಿ ಪಾಸಿಟಿವ್ ಕಂಡುಬಂದಿದೆ. ಜಿಲ್ಲೆಯಲ್ಲಿ ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 6200 ಎಂದು ಜಿಲ್ಲಾ ಹೆಲ್ತ್ ಬುಲಿಟಿನ್ ಪ್ರಕಟಿಸಿದೆ.
ಇಂದು ಸೋಂಕಿನಿಂದ 5 ಜನ ಸಾವು ಕಂಡಿದ್ದು, ಜಿಲ್ಲೆಯಲ್ಲಿನ ಈ ಬಗೆಗಿನ ಒಟ್ಟು ಸಾವಿನ ಸಂಖ್ಯೆ 107 ಕ್ಕೇರಿದೆ. ಇಂದು 1375 ಜನರಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, 904 ಜನರಿಗೆ ನೆಗೆಟಿವ್ ಎಂದು ವರದಿ ಬಂದಿದೆ. 6200 ಜನರಿಗೆ ಕೊರೋನ ಪಾಸಿಟಿವ್ ಎಂದು ವರದಿ ಪ್ರಕಟವಾಗಿದೆ. ಇಂದು 600 ಜನ ಸೋಂಕಿನಿಂದ ಗುಣಮುಖರಾಗಿ ಮೆಗ್ಗಾನ್ ಮತ್ತು ಕೋವಿಡ್ ಕೇರ್ ಸೆಂಟರ್ ನಿಂದ ಬಿಡುಗಡೆಗೊಂಡಿದ್ದಾರೆ.
ಇದರಿಂದ ಒಟ್ಟು ಗುಣಮುಖರಾಗಿರುವ ಸಂಖ್ಯೆಯೂ ಸಹ 4574 ಕ್ಕೇರಿದೆ. 138 ಜನ ಕೊರೋನ ಸೋಂಕಿತರು ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 272 ಜನ ಕೊರೋನ ಕೇರ್ ಸೆಂಟರ್ ನಲ್ಲಿ, 277 ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ, 738 ಜನ ಮನೆಯಲ್ಲಿ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಯುರ್ವೇದಿಕ್ ಕಾಲೇಜಿನ ಆಸ್ಪತ್ರೆಯಲ್ಲಿ 51 ಜನ ಚಿಕಿತ್ಸೆ ಪಡೆಯುತ್ತಿದ್ದು ಒಟ್ಟು ಸಕ್ರಿಯೆಗೊಂಡ ಕೊರೋನ ಪಾಸಿಟಿವ್ ಸಂಖ್ಯೆ 1476 ಎಂದು ಬುಲಿಟಿನ್ ತಿಳಿಸಿದೆ.
ಸೋಂಕಿನ ಹೆಚ್ಚಳದಿಂದಾಗಿ ಕಂಟೈನ್ಮೆಂಟ್ ಜೋನ್ ಗಳು ಸಹ ಹೆಚ್ಚಾಗಿವೆ. ನಿನ್ನೆಯವರೆಗೆ 2475 ಕಂಟೈನ್ಮೆಂಟ್ ಜೋನ್ ಗಳಿದ್ದ ಜಿಲ್ಲೆಯಲ್ಲಿ ಇಂದು 2572 ಕ್ಕೇರಿದೆ. 841 ಡಿನೋಟಿಫೈಡ್ ಕಂಟೈನ್ಮೆಂಟ್ ಜೋನ್ ಗಳು 867 ಎಂದು ಬುಲಿಟಿನ್ ಪ್ರಕಟಿಸಿವೆ.
ತಾಲೂಕವಾರು ವಿವರ
ಶಿವಮೊಗ್ಗ -138

ಭದ್ರಾವತಿ-38,
ಶಿಕಾರಿಪುರ-16,

ತೀರ್ಥಹಳ್ಳಿ-07,
ಸಾಗರ 08,
ಹೊಸನಗರ -01
ಸೊರಬ- 03
ಇತರೆ ಜಿಲ್ಲೆ- 6

ರಾಜ್ಯ ವರದಿಯಲ್ಲಿ ಮತ್ತದೇ ರಾಗ…
ಇವತ್ತಿನ ಕೊರೊನಾ ಕುರಿತ ರಾಜ್ಯ ವರದಿಯಲ್ಲಿ ಮತ್ತದೇ ರಾಗ. ಭಗವಂತನೇ ಕಾಪಾಡಬೇಕು. ಒಂದು ನೀಟಾಗಿ ವರದಿ ಕೊಡಲಾಗೊಲ್ಲ ಎಂದರೆ ಇಂತಹ ವ್ಯವಸ್ಥೆಯನ್ನು ಹೇಗೆ ಹೇಳಬೇಕು. ಛೇ…, ಜನ ಯಾವ ಸುದ್ದಿ ನಂಬಬೇಕು. ಅದರ ಪ್ರತಿಯನ್ನೂ ಇಲ್ಲಿ ಹಾಕಿದ್ದೇವೆ. ಓದುಗರೆ ಇಲ್ಲಿ ನಿರ್ಧಾರಕರು..

Exit mobile version