Site icon TUNGATARANGA

ಮಾರಣಾಂತಿಕ ಹಲ್ಲೆ ಮಾಡಿದ್ದ ಮೂವರಿಗೆ ಮೂರು ವರ್ಷ ಕಠಿಣ ಸಜೆ..,

ಶಿವಮೊಗ್ಗ, ಜು.07:
ಓರ್ವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿಗಳಿಗೆ ಮೂರುವರ್ಷ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾದೀಶರು ಆದೇಶಿಸಿದ್ದಾರೆ.


ಸಮಗ್ರ ವಿವರ:
ಕಳೆದ 12-08-2018 ರಂದು ರಾತ್ರಿ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಳ ಬಡಾವಣೆ ಶಿವಮೊಗ್ಗ ಟೌನ್ ನ ವಾಸಿಯಾದ ಶ್ರೀ ರಿಚರ್ಡ್ ಸಂತೋಷ್, 32 ವರ್ಷರವರು ಗೋಪಾಳದ ವನಸಿರಿ ಪಾರ್ಕ್ ನ ಹತ್ತಿರ ಹೋಗುತ್ತಿರುವಾಗ ಡಿಯೋ ಬೈಕ್ ನಲ್ಲಿ ಬಂದ ನಿತಿನ್, ದೀಕ್ಷಿತ್ ಮತ್ತು ಕಿರಣ್ ರವರುಗಳು ಭರ್ಜಿಯಿಂದ ರಿಚರ್ಡ್ ಸಂತೋಷ್ ರವರ ಕುತ್ತಿಗೆಗೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0727/20218 ಕಲಂ 307 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಆಗಿನ ತನಿಖಾಧಿಕಾರಿಗಳಾದ ಅಣ್ಣಯ್ಯ, ಕೆ. ಟಿ, ಪಿ.ಎಸ್.ಐ ತುಂಗಾನಗರ ಪೊಲೀಸ್ ಠಾಣೆರವರು ಪ್ರಕರಣದ ತನಿಖೆ ಕೈಗೊಂಡು ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.
ಶ್ರೀಮತಿ ರತ್ನಮ್ಮ, ಸರ್ಕಾರಿ ಅಭಿಯೋಜಕರವರು ಪ್ರಕರಣದ ವಾದ ಮಂಡಿಸಿದ್ದು, 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ನ್ಯಾಯಧೀಶರಾದ ಶ್ರೀ ಮಾನು ಕೆ. ಎಸ್ ರವರು ದಿನಾಂಕಃ- 06-07-2022 ರಂದು 1) ನಿತಿನ್, 22 ವರ್ಷ, ಗೋವಿಂದಪುರ ಪುರದಾಳ್, ಶಿವಮೊಗ್ಗ, 2) ಧೀಕ್ಷಿತ್, 21 ವರ್ಷ, ಶರಾವತಿ ನಗರ, ಶಿವಮೊಗ್ಗ ಮತ್ತು 3) ಕಿರಣ್, 23 ವರ್ಷ, ವಿನಾಯಕ ನಗರ, ನವುಲೆ, ಶಿವಮೊಗ್ಗ ಇವರುಗಳ ವಿರುದ್ಧ ಕಲಂ 307 ಐಪಿಸಿ ಅಡಿಯಲ್ಲಿ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ಸದರಿ 03 ಜನ ಆರೋಪಿತರಿಗೆ 03 ವರ್ಷಗಳ ಕಾಲ ಕಠಿಣ ಕಾರಾವಾಸ ಶಿಕ್ಷೆ ಮತ್ತು 5,000/- ರೂ ದಂಡ, ದಂಡವನ್ನು ಕಟ್ಟಲು ವಿಫಲರಾದರೆ ಹೆಚ್ಚುವರಿಯಾಗಿ 02 ತಿಂಗಳ ಕಾಲ ಸಾದಾ ಕಾರವಾಸ ಶಿಕ್ಷೆ ನೀಡಿ ಆದೇಶ ನೀಡಿರುತ್ತಾರೆ.

Exit mobile version