Site icon TUNGATARANGA

ಗೋಪಾಲ್ ಯಡಗೆರೆ ನೇತೃತ್ವದಲ್ಲಿ ಶಿವಮೊಗ್ಗ ಕಾರ್ಯನಿರತ ಪತ್ರಕರ್ತರ ಸಂಘದ New Team

ಶಿವಮೊಗ್ಗ,ಜು 6:

ನೂತನವಾಗಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಗೌರವಾಧ್ಯಕ್ಷರಾಗಿ ಶಿವಮೊಗ್ಗ ಟೈಮ್ಸ್ ಸಂಪಾದಕ ಎಸ್. ಚಂದ್ರಕಾಂತ್, ಅಧ್ಯಕ್ಷರಾಗಿ ಗೋಪಾಲ್ ಯಡಗೆರೆ (ಕನ್ನಡಪ್ರಭ) ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಕಾಚಿನಕಟ್ಟೆ( ವಿಜಯಕರ್ನಾಟಕ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಸೋಮವಾರ ಪತ್ರಿಕಾ ಭವನದಲ್ಲಿ ನಡೆದ ಪತ್ರಕರ್ತರ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಳಿದಂತೆ ಉಪಾಧ್ಯಕ್ಷರಾಗಿ ಹಿರಿಯ ಪತ್ರಕರ್ತ ಕೆ. ತಿಮ್ಮಪ್ಪ (ಸಂಯುಕ್ತ ಕರ್ನಾಟಕ) ನಗರ ಕಾರ್ಯದರ್ಶಿಯಾಗಿ ಗೋ.ವ ಮೋಹನ್ ಕೃಷ್ಣ(ಪವರ್ ಟಿ.ವಿ.) ಖಜಾಂಚಿಯಾಗಿ ಹಿರಿಯ ಛಾಯಾಚಿತ್ರಕಾರ ಶಿವಮೊಗ್ಗ ನಂದನ್(ಇಂಡಿಯನ್ ಎಕ್‌ಸ್‌ಪ್ರೆಸ್) ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಮಚಂದ್ರ ವಿ. ಗುಣಾರಿ(ಇಂಡಿಯನ್ ಎಕ್‌ಸ್‌ಪ್ರೆಸ್), ವಿವೇಕ್ ಮಹಾಲೆ (ವಿಸ್ತಾರ ಟಿ.ವಿ. ಬ್ಯೂರೋ ಮುಖ್ಯಸ್ಥ) ಆರಗ ರವಿ,(ವಿಜಯಕರ್ನಾಟಕ ಸ್ಥಾನಿಕ ಸಂಪಾದಕ) ಶಿವಮೊಗ್ಗ ನಾಗರಾಜ್ (ಪ್ರಜಾವಾಣಿ) ಕಿರಣ್ ಕಂಕಾರಿ(ಈ ಟಿ.ವಿ. ಭಾರತ್) ಲಿಯಾಕತ್ (ಆಜ್ ಕಾ ಇನ್ ಕಿಲಾಬ್) ಡಿ. ಜಿ. ನಾಗರಾಜ್ (ಹಲೋ ಶಿವಮೊಗ್ಗ) ಭರತೇಶ್(ರಾಜಋಷಿ) ಮಂಜುನಾಥ್ ಎನ್( ಸಹ್ಯಾದ್ರಿ) ಸ್ಪಂದನ ಚಂದ್ರು (ವಿಜಯ ಕರ್ನಾಟಕ) ಜೋಸೆಫ್ ಟೆಲ್ಲಿಸ್ (ಎಚ್ಚರಿಕೆ) ಗಣೇಶ್ ತಮ್ಮಡಿಹಳ್ಳಿ, (ಕನ್ನಡಪ್ರಭ) ಶರತ್ ಮಳವಳ್ಳಿ (ವಾರ್ತಾಭಾರತಿ) ಶಶಿಧರ್ (ಪಬ್ಲಿಕ್ ಟಿ.ವಿ) ಆಯ್ಕೆಯಾದರು.

ನಾಮ ನಿರ್ದೇಶನ ಸದಸ್ಯರಾಗಿ ವಿ. ಜಗದೀಶ್ (ನಮ್ಮ ಟಿವಿ) ಯೋಗೀಶ್(ಕನ್ನಡ ಮೀಡಿಯಂ) ರಜಾಕ್( ಸಹರಾ) ಎಂ. ನಿಂಗನಗೌಡ (ಪಿಟಿಐ )ಆಯ್ಕೆಯಾದರೆ, ವಿಶೇಷ ಆಹ್ವಾನಿತರಾಗಿ ಶಿ. ಜು. ಪಾಶಾ (ಮಲೆನಾಡು ಎಕ್ಸ್‌ಪ್ರೆಸ್) ಸಾವಂತ್(ವಿಸ್ತಾರ ಟಿವಿ) ಮಹೇಶ್ (ಟಿವಿ -೫ ) ದತ್ತಾತ್ರೇಯ ಹೆಗಡೆ( ಕ್ರಾಂತಿದೀಪ) ಅವಿರೋಧವಾಗಿ ಆಯ್ಕೆಯಾದರು.

ಪತ್ರಕರ್ತರೆಲ್ಲರೂ ಒಂದಾಗಿ ಈ ಸಂಘಟನೆಯನ್ನು ಸ್ಥಾಪಿಸಿದ್ದಾರೆ. ಹೊಸ ಜವಾಬ್ದಾರಿ ವಹಿಸಿದ್ದಾರೆ. ಅವರ ಎಲ್ಲ ಆಶಯಗಳಿಗೆ ಸಂಘಟನೆ ಸ್ಪಂದಿಸುತ್ತದೆ. ಎಲ್ಲರನ್ನೂ ಒಂದಾಗಿ ಕರೆದೊಯ್ಯುತ್ತದೆ. ಇಲ್ಲಿ ಯಾವುದೇ ಜಾತಿ, ಧರ್ಮದ ಬೇಧವಿಲ್ಲ. ಪತ್ರಕರ್ತರು ಎಂಬುದೊಂದೇ ಇಲ್ಲಿನ ಮಾನದಂಡ. ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾ ಜೊತೆಯಾಗಿ ಮುನ್ನಡೆಯೋಣ ಎಂದರು. ಮುಂದಿನ ದಿನಗಳಲ್ಲಿ ತಾಲೂಕು ಮತ್ತು ಹೋಬಳಿ ಘಟಕಗಳು ರಚನೆಯಾಗಲಿದ್ದು, ಈಗಾಗಲೇ ಎಲ್ಲ ಕಡೆಯಿಂದಲೂ ಪ್ರತಿಕ್ರಿಯೆಗಳು ಬರುತ್ತಲಿದೆ. ಪತ್ರಕರ್ತರಿಗೆ ಆರೋಗ್ಯ ವಿಮೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕೊಡಿಸುವ ಯತ್ನ ನಡೆಯಲಿದೆ
-ಗೋಪಾಲ್ ಯಡಗೆರೆ, ಅಧ್ಯಕ್ಷರು, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ

ಸಭೆಯಲ್ಲಿ ಹಿರಿಯ ಪತ್ರಕರ್ತರಾದ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ವೈ. ಕೆ. ಸೂರ್ಯನಾರಾಯಣ, ಜೇಸುದಾಸ್, ವಿ. ಸಿ. ಪ್ರಸನ್ನ, ಗಿರೀಶ್ ಉಮ್ರಾಯ್, ಮುದಾಸೀರ್, ಶ್ರೀಕಾಂತ್, ಕೆ. ಮೋಹನ್, ರಾಕೇಶ್ ಡಿಸೋಜಾ, ಆತೀಶ್ ಬಿ. ಕನ್ನಾಳೆ, ಹೊನ್ನಾಳಿ ಚಂದ್ರಶೇಖರ್, ಕ್ಯಾಮರಾಮನ್ ಸತೀಶ್, ರಾಘವೇಂದ್ರ, ಭರತ್ ಮತ್ತಿತರರು ಇದ್ದರು. ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ ಮಾತನಾಡಿ ಸಮನ್ವಯತೆ ಮತ್ತು ಒಗ್ಗಟ್ಟು ನಮ್ಮ ಮೂಲಮಂತ್ರ. ಉತ್ತಮ ಕಾರ್ಯಕ್ರಮಗಳ ಮೂಲಕ ಪತ್ರಕರ್ತರ ಆಶಯಗಳಿಗೆ ಸ್ಪಂದಿಸೋಣ ಎಂದರು.
ಪ್ರೆಸ್‌ಟ್ರಸ್‌ಟ್ ಅಧ್ಯಕ್ಷ ಎನ್. ಮಂಜುನಾಥ್ ಮಾತನಾಡಿ ಸಂಘಟನೆಯ ಉದ್ದೇಶವನ್ನು ವಿವರಿಸಿದರು. ಹೊಸ ಸಂಘಟನೆ ಇಡೀ ರಾಜ್ಯಕ್ಕೆ ಮಾದರಿಯಾಗಲಿ. ಪ್ರೆಸ್‌ಟ್ರಸ್ಟ್ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಜೊತೆ ಜೊತೆಯಾಗಿ ಕೆಲಸ ಮಾಡಲಿದೆ ಎಂದು ಹೇಳಿದರು.

Exit mobile version