Site icon TUNGATARANGA

ಅನ್ನದಾತನ ಅಳಲು ಕೇಳದ ಭದ್ರಾವತಿ ವೈದ್ಯ: ಗ್ರಾಮಾಂತರ ಪೊಲೀಸರು ಬಿಗಿಯಾಗದಿದ್ದರೆ ಭದ್ರತೆ ಕಷ್ಟವಂತೆ….!

ಶಿವಮೊಗ್ಗ, ಜು.05:


ಕಳೆದ ಕೆಲ ತಿಂಗಳ ಹಿಂದಷ್ಟೆ ಭದ್ರಾವತಿ ತಾಲ್ಲೂಕು ಹುಣಸೆಕಟ್ಟೆ ಜಂಕ್ಷನ್‌ನಲ್ಲಿ ಜಮೀನು ಖರೀದಿಸಿ ಅಡಿಕೆ ಬೆಳೆಯಲು ಮುಂದಾಗಿರುವ ಭದ್ರಾವತಿ ಲಕ್ಷ್ಮೀ ನರ್ಸಿಂಗ್ ಹೋಂನ ವೈದ್ಯ ಡಾ. ರಾಮಕೃಷ್ಣ ಅವರು ಅಲ್ಲಿಯೇ ಬದುಕಿ ಬಾಳುತ್ತಾ ಬದುಕು ಕಟ್ಟಿಕೊಂಡಿರುವ ರೈತನ ಜಮೀನಿನ ರಸ್ತೆಯನ್ನೂ ಕಬಳಿಸಿರುವ ಗಂಭೀರ ಆರೋಪ ಕೇಳಿಬಂದ ಬೆನ್ನಲ್ಲಿ ನಿನ್ನೆ ನಡೆದ ಘಟನೆ ನಾಳೆ ಅಥವಾ ಮರುದಿನದ ಹೊತ್ತಿಗೆ ಬಾರೀ ಗಲಾಟೆ ಉಂಟು ಮಾಡುವ ಎಲ್ಲಾ ಸಂಭವವಿದೆ.
ಈ ವೈದ್ಯರು ಬಗರ್ ಹುಕುಂ ಜಮೀನಿಗೆ ಬೇಲಿ ಹಾಕುವ ಹೊತ್ತಿನಲ್ಲಿ ಪಕ್ಕದ ಅನ್ನದಾತನ ಅಳಲನ್ನು ಆಲಿಸಬೇಕಿತ್ತು.

ಕನಿಷ್ಟ 15 ಅಡಿ ರಸ್ತೆ ಅದೂ ತಮಗೆ ಬಕ್ಷೀಸಾಗಿ ಸಿಕ್ಕ ಭೂಮಿಯಲ್ಲಿನ ಜಾಗ ಬಿಡಬಹುದಿತ್ತು.

ಅದನ್ನೂ ಮಾಡದೇ, ನಿನ್ನೆ ತುಂಗಾತರಂಗ ಈ ಸುದ್ದಿಯ ವರದಿ ಪ್ರಕಟಿಸುವ ಮುನ್ನ ಪೈಪ್ ಕಳವಿನ ಆರೋಪದ ದೂರನ್ನು ಅನ್ನದಾತ ರಾಮಕೃಷ್ಣ ಅವರು ಭದ್ರಾವತಿ ಗ್ರಾಮಾಂತರ ಪೊಲೀಸರಿಗೆ ನೀಡುವ ಮುನ್ನ ಸಮಸ್ಸೆ ಬಗೆಹರಿಸಿಕೊಳ್ಳುವ ಬದಲು ಮತ್ತೆ ಇಟಾಚಿ ತರಿಸಿ ಅಲ್ಲಿ ಗುಂಡಿ ತೋಡುವ ಅಗತ್ಯವಾದರೂ ಏನಿತ್ತು?
ಈ ಭಾಗದ ಜನರ ಒತ್ತಾಸೆಯಂತೆ ಯಾರ ರಸ್ತೆ ಅಥವಾ ಯಾರಿಗೋ ಜಾಗ ನೀಡುವ ಬದಲು ಸರ್ಕಾರದ ಈ ಭೂಮಿಯನ್ನು ಯಾವುದಾದರೂ ಸರ್ಕಾರಿ ಶಿಕ್ಷಣ ವ್ಯವಸ್ಥೆ ನಿರ್ಮಿಸಲು ಒತ್ತಾಯಿಸುತ್ತಿದ್ದಾರೆ. ಈ ಜಾಗದ ವಿಚಾರವಾಗಿ ದೊಡ್ಡ ಮಟ್ಟದ ಗಲಾಟೆ ನಡೆಯುವ ಸಾದ್ಯತೆ ಇದೆ ಎನ್ನಲಾಗಿದೆ.
ನಿನ್ನೆ ಕೇವಲ ಪೊಲೀಸರೊಬ್ಬರನ್ನು ಕಳಿಸಿ ಪೋಟೋ ತೆಗೆದು ಕೊಂಡು ಹೋಗಿರುವ ಗ್ರಾಮಾಂತರ ಪೊಲೀಸರು ಇಂದಿನಿಂದ ಅಲಾರ್ಟ್ ಆಗದಿದ್ದರೆ ಕಷ್ಟವೆಂದು ಸ್ಥಳೀಯರು ಆರೋಪಿಸಿದ್ಸಾರೆ.

ನಿನ್ನೆ ದೂರು ನೀಡಲು ಬಂದ ರೈತನಿಗೆ ನೆಪ ಮಾತ್ರದ ಕಾರಣ ನೀಡಿ ಮನೆಗೆ ಕಳಿಸುವ ಬದಲು ಕಾನೂನಾತ್ಮಕವಾಗಿ ಹೇಳಬಹುದಿತ್ತು.
ಪಿಎಸ್ ಐ ಇಲ್ಲ., ದೂರು ದಾಖಲಾಗೊಲ್ಲ ಎಂದರೆ ಪೊಲೀಸರು!

Exit mobile version