ಶಿವಮೊಗ್ಗ, ಜು.೦೫:
ಬೀದಿ ಬದಿ ವ್ಯಾಪಾರಸ್ಥರು ಆಹಾರ ಗುಣ ಮಟ್ಟ ಕಾಯ್ದುಕೊಂಡು ತಾವು ವ್ಯಾಪಾರ ಮಾಡು ಸ್ಥಳದ ಶುಚಿತ್ವ ಕಾಪಾಡಿ ಕೊಳ್ಳಬೇ ಕೆಂದು ಜಿಲ್ಲಾ ಯೋಜನಾ ನಿರ್ದೇ ಶಕ ಎಂ.ಎಂ. ಕರಭೀಮಣ್ಣನವರ್ ಹೇಳಿದ್ದಾರೆ.
ಅವರು ಇಂದು ಶಿವಮೊಗ್ಗ ಮಹಾನಗರ ಪಾಲಿಕೆ ಕೌಶಾಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಶಿವಮೊಗ್ಗ, ಹಾಗೂ ನಾರಾಯಣ ತರಬೇತಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಡೇ ನಲ್ಮ್ ಯೋಜನೆಯಡಿಯಲ್ಲಿ ಬೀದಿ ಬದಿ ಆಹಾರ ಮಾರಾಟ ಮಾಡುವ ಬೀದಿ ವ್ಯಾಪಾರಿಗಳಿಗೆ ಆಹಾರ ಸುರಕ್ಷತೆ ಬಗ್ಗೆ ತರಬೇತಿ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೊರೊನಾ ನಂತರ ಸಾಂಕ್ರಾಮಿಕ ರೋಗ ಹರಡದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಒತ್ತಡದ ಜೀವನದ ನಡುವೆ ಸಾರ್ವಜನಿಕರು ಮತ್ತು ಉದ್ಯೋಗ ಸ್ಥರು ಕ್ಯಾಂಟೀನ್ ಹಾಗೂ ಬೀದಿ ಬದಿ ಆಹಾರಕ್ಕೆ ಹೆಚ್ಚಾಗಿ ಮೊರೆ ಹೋಗುತ್ತಿದ್ದಾರೆ. ಕಡಿಮೆ ದರದಲ್ಲಿ ಲಭ್ಯವಾಗುತ್ತದೆ ಎನ್ನುವ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಕರ್ಷಿತ ರಾಗುತ್ತಾರೆ. ಬೀದಿ ಬದಿ ವ್ಯಾಪಾರಸ್ಥರು ಸಾರ್ವ ಜನಿಕರ ಆರೋಗ್ಯವನ್ನು ಗಮನದಲ್ಲಿಟ್ಟು ಕೊಂಡು ಸ್ವಚ್ಛತೆ ಹಾಗೂ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಅತ್ಯಂತ ಅವಶ್ಯಕ. ಇಂದಿನ ತರಬೇತಿಯಲ್ಲಿ ಅತ್ಯುತ್ತಮವಾದ ತರಬೇತಿ ಸಂಸ್ಥೆಯಿಂದ ಕಾರ್ಯಾಗಾರ ಏರ್ಪ ಡಿಸಲಾಗಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ವಿನಂತಿಸಿದರು.
ಕೌಶಾಲ್ಯಾಭಿವೃದ್ಧಿ ಅಧಿಕಾರಿ ಸುರೇಶ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಅನೇಕ ಕಂಪನಿಗಳು ಆಹಾರ ತಯಾರಿಸುವಲ್ಲಿ ಬಳಸುವ ಪದಾರ್ಥಗಳನ್ನು ಕಡಿಮೆ ದರದಲ್ಲಿ ಕೊಡುವ ಪೈಪೋಟಿಗೆ ಕಳಪೆ ಗುಣಮಟ್ಟದ್ದನ್ನು ತಯಾರಿಸುತ್ತಾರೆ. ಬೀದಿ ಬದಿಯಲ್ಲಿ ಆಹಾರ ತಯಾರಿಸುವ ವ್ಯಾಪಾರಿಗಳು ಬೆಲೆ ಕಡಿಮೆ ಎಂದು ಇದನ್ನು ಬಳಸುತ್ತಾರೆ. ವಿಪರೀತ ಪ್ರಮಾಣದಲ್ಲಿ ರಾಸಾಯನಿಕ ಬೆರೆತ ಆಹಾರ ಪದಾರ್ಥಗಳನ್ನು ಕೂಡ ಬಳಸುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಕಟ್ಟ ಪರಿಣಾಮ ಬೀರುತ್ತದೆ ಎಂದರು.
ಆಹಾರ ತಯಾರಿಸುವಾಗ ಯಾವ ರೀತಿಯ ಗುಣಮಟ್ಟದ ಕಚ್ಚಾ ಪದಾರ್ಥಗಳನ್ನು ಬಳಸಬೇಕು. ಶುದ್ಧ ಆಹಾರ ನೀಡಲು ಮತ್ತು ಸ್ವಚ್ಛತೆ ಕಾಪಾಡಲು ಹಾಗೂ ಗುಣಮಟ್ಟ ಕಾಯ್ದುಕೊಳ್ಳಲು ಇಂದಿನ ಕಾರ್ಯಾಗಾರದಲ್ಲಿ ತರಬೇತಿ ನೀಡುವುದರ ಜೊತೆಗೆ ಪ್ರಮಾಣ ಪತ್ರ ನೀಡಲಾಗುವುದು. ಅದು ನಿಮಗೆ ಸ್ವಂತ ವ್ಯಾಪಾರಕ್ಕೆ ಸಹಾಯವಾಗಲಿದೆ ಎಂದರು.
ಪಾಲಿಕೆ ಡೇ ನಲ್ಮ್ ಯೋಜನಾಧಿಕಾರಿ ಅನುಪಮಾ ಮಾತನಾಡಿ, ನಗರದಲ್ಲಿ ೪೮೮೬ ಬೀದಿ ಬದಿ ವ್ಯಾಪಾರಸ್ಥರನ್ನು ಗುರುತಿಸಲಾ ಗಿದ್ದು, ಅದರಲ್ಲಿ ೨೪೬೩ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ನೀಡಲಾಗಿದೆ ಎಂದರು
ಪಾಲಿಕೆ ಸದಸ್ಯರಾದ ಸುವರ್ಣಾ ಶಂಕರ್, ಅನಿತಾ ರವಿಶಂಕರ್, ಪನ್ನೀರ್ ಸೆಲ್ವಂ, ಮೂರ್ತಿ, ಪಟ್ಟಣ ವ್ಯಾಪಾರ ಸಮಿತಿಯ ಅಧ್ಯಕ್ಷ ಚನ್ನವೀರಪ್ಪ ಗಾಮನಗಟ್ಟಿ, ಕಾರ್ಯದರ್ಶಿ ನಾರಾಯಣ ಮತ್ತಿತರರಿದ್ದರು.