ಪೌರಕಾರ್ಮಿಕರು ರಾಜ್ಯದ್ಯಂತ ೧ ಜುಲೈ ರಿಂದ ಸ್ವಚ್ಛತಾ ಕಾರ್ಯ ಸ್ಥಗಿತ ಮಾಡಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು ಈ ಮುಷ್ಕರದಿಂದ ರಾಜ್ಯದ ಎಲ್ಲಾ ನಗರ ಪ್ರದೇಶಗಳಲ್ಲಿ ನಾಲ್ಕು ದಿನಗಳಿಂದ ಕಸ ವಿಲೇವಾರಿಯಾಗದೆ ಕಸದ ರಾಶಿಗಳು ತುಂಬಿದ್ದು ನಗರವು ಗಬ್ಬು ನಾರುತ ಸಾರ್ವಜನಿಕರಿಗೆ
ತೊಂದರೆಯಾಗುತ್ತಿದೆ. ಸರ್ಕಾರ ಈಗಾಗಲೇ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ ಮಾತನ್ನು ತಪ್ಪಿ ಪೌರಕಾರ್ಮಿಕರು ಅನಿರ್ದಿಷ್ಟ ಕಾಲ ಮುಷ್ಕರ ನಡೆಸುತ್ತಿರುವ ಈ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಪೌರಕಾರ್ಮಿಕರ ಸಮಸ್ಯೆಯನ್ನು ಹಾಲಿಸದೆ ಸಾರ್ವಜನಿಕರಿಗೂ ತೊಂದರೆ ನೀಡುತ್ತಾ ಈ ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಬಿಜೆಪಿ ಪಕ್ಷದ ಸಭೆಯಲ್ಲಿ ನಿರತರಾಗಿರುವುದು ನೋಡಿದರೆ ಈ ಜನವಿರೋಧಿ ಬಿಜೆಪಿ ಸರ್ಕಾರಕ್ಕೆ ಜನರ ಸಮಸ್ಯೆ ಬಗ್ಗೆ ಕಿಂಚಿತ್ತು ಅರಿವಿಲ್ಲ ಎಂಬುದು ಎದ್ದು ಕಾಣುತ್ತಿದೆ
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ ೬೮೦ ಜನ ಪೌರಕಾರ್ಮಿಕರಿದ್ದು ಅದರಲ್ಲಿ ೨೦೦ ಜನ ಖಾಯಂ ಪೌರಕಾರ್ಮಿಕರಾಗಿದ್ದು ಉಳಿದ ಎಲ್ಲಾ ೪೦೦ಕ್ಕೂ ಹೆಚ್ಚು ಪೌರಕಾರ್ಮಿಕರು ಪ್ರತಿಭಟನೆಯಲ್ಲಿ ನಿರತರಾಗಿದ್ದು ಶಿವಮೊಗ್ಗ ನಗರದಲ್ಲಿ ಪ್ರತಿದಿನ ೧೭೫ ಟನ್ ಕಸ ವಿಲೇವಾರಿ ಆಗುತ್ತಿತ್ತು ಆದರೆ ಈಗ ಪೌರಕಾರ್ಮಿಕರು ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿರುವ ಕಾರಣ ಲೋಡ್ ಗಟ್ಟಲೆ ಕಸದ ರಾಶಿಗಳು ರಸ್ತೆಗಳಲ್ಲಿ ತುಂಬಿದ್ದು, ಚರಂಡಿಗಳು, ಒಳಚರಂಡಿಗಳು ಬ್ಲಾಕ್ ಆಗಿದ್ದು, ಶವಸಂಸ್ಕಾರದ ವಾಹನಗಳ ಇಲ್ಲದೆ ಜನರಿಗೆ ತೀವ್ರ ಅನಾನುಕೂಲವಾಗಿದ್ದು ಕೂಡಲೇ ಪೌರಕಾರ್ಮಿಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸಿ ರಾಜ್ಯಾದ್ಯಂತ ಪೌರಕಾರ್ಮಿಕರು ತಮ್ಮ ಕಾರ್ಯಗಳಿಗೆ ಹಿಂತಿರುಗಿಲು ಸರ್ಕಾರ ಮುಂದಾಗಬೇಕು ಇಲ್ಲವಾದಲ್ಲಿ ಈ ಬಂಡತನದ ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ಧ ಸಾರ್ವಜನಿಕರು ರಸ್ತೆಗಳಿದ್ದು ಉಗ್ರವಾದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಈ ಮೂಲಕ ಯುವ ಕಾಂಗ್ರೆಸ್ ಎಚ್ಚರಿಸುತ್ತಿದೆ
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್ , ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್ , ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ಲೋಕೇಶ್ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಎಸ್ ಕುಮಾರೇಶ್ , ಗ್ರಾಮಾಂತರ ಅಧ್ಯಕ್ಷ ಈಟಿ ನಿತಿನ್ , ಮಹಿಳಾ ಕಾಂಗ್ರೆಸ್ ಮುಖಂಡರಾದ ಸುವರ್ಣ ನಾಗರಾಜ್ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪಕ್ ಕುಮಾರ್, ಎಂ ರಾಕೇಶ್, ಇರ್ಫಾನ್, ಸಂದೀಪ್ ಸುಂದರಾಜ್, ಇಮ್ರಾನ್ ಶಮೀರ್ ಖಾನ್, ಕೆ ಎಲ್ ಪವನ್ , ಮೊಹಮ್ಮದ್ ಫೈರೋಜ್, ಮೋಹನ ಸೋಮಿನಕೊಪ್ಪ, ಸೈಯದ್ ಜಮೀಲ್, ಸುಹಾಸ್ ಗೌಡ, ರಾಜೀವ್ ರಾಯ್ಕರ್, ಶ್ರೀನಿವಾಸ್ , ಪೂರ್ವಿಕ್,ಕಿರಣ್ ಕುಮಾರ್, ಅಬಿತ್ ಗೌಡ, ಗೋಪಿನಾಥ್, ರಾಕೇಶ್ ಇತರರು ಇದ್ದರು