Site icon TUNGATARANGA

shimoga/ಶಿಸ್ತು, ಬದ್ಧತೆ, ಕಾಯಕದಲ್ಲಿ ಪ್ರಾಮಾಣಿಕತೆ ಹೊಂದಿದ್ದರೆ ಗೆಲುವು ಸಾಧ್ಯ : ಕಿಮ್ಮನೇ ಗಾಲ್ಫ್ ರೆಸಾರ್ಟ್‌ನ ವ್ಯವಸ್ಥಾಪಕ ಜಯರಾಮ್ ಜಿ ಕಿಮ್ಮನೆ !…

ಶಿವಮೊಗ್ಗ,

ಶಿಸ್ತು, ಬದ್ಧತೆ, ಕಾಯಕದಲ್ಲಿ ಪ್ರಾಮಾಣಿಕತೆ ಹೊಂದಿರುವ ಯಾವುದೇ ವ್ಯಕ್ತಿ ನಿರೀಕ್ಷಿತ ಗುರಿ ತಲುಪಲು ಸಾಧ್ಯ ಎಂದು ಕಿಮ್ಮನೇ ಗಾಲ್ಫ್ ರೆಸಾರ್ಟ್‌ನ ವ್ಯವಸ್ಥಾಪಕ ಜಯರಾಮ್ ಜಿ ಕಿಮ್ಮನೆ ಅವರು ಹೇಳಿದರು.


ಅವರು ಇಂದು ಪ್ರೇರಣಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇ ತರ ಶಿಕ್ಷಣ ಪೂರ್ಣಗೊಳಿಸಿ, ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಉದ್ಯೋಗಾ ವಕಾಶದ ಪ್ರಮಾಣಪತ್ರ ವಿತರಣಾ ಸಮಾರಂಭ ದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.


ವಿದ್ಯಾರ್ಥಿಗಳು ಈ ದೇಶದ ಭವಿಷ್ಯ. ವಿದ್ಯಾ ರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳು ವಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದು. ಶಿಕ್ಷಣವಿಲ್ಲದ ವ್ಯಕ್ತಿ ಯಿಂದ ದೇಶದ ಭವಿಷ್ಯ ನಿರ್ಧರಿಸುವುದು ಕಷ್ಟ ಸಾಧ್ಯ ಮಾತ್ರವಲ್ಲ ತನ್ನ ಕೌಟುಂಬಿಕ ಬೆಳವ ಣಿಗೆಯೂ ಸಾಧ್ಯವಾಗದು ಎಂದವರು ನುಡಿದರು.


ವಿದ್ಯಾರ್ಥಿಯ ಗುರಿ ಖಚಿತವಾಗಿದ್ದು, ಮಾಡುವ ಚಿಂತನೆಗಳು ಸಕಾರಾತ್ಮಕವಾಗಿದ್ದಾಗ ನಿರೀಕ್ಷಿತ ಕೆಲಸ-ಕಾರ್ಯಗಳಲ್ಲಿ ಸಹಜವಾಗಿ ಗೆಲುವು ಸಾಧ್ಯವಾಗಲಿದೆ. ವ್ಯಕ್ತಿ ಪ್ರಾಮಾಣಿ ಕವಾಗಿದ್ದಾಗ ಸೋಲು ತಾತ್ಕಾಲಿಕವಾಗಿರಲಿದೆ. ಗೆಲವು ಖಚಿತವಾಗಿರಲಿದೆ. ಈ ವಿಷಯದಲ್ಲಿ ಎಲ್ಲರೂ ನಂಬಿಕೆ ಹೊಂದಿರಬೇಕೆಂದ ಅವರು, ತಮ್ಮ ವ್ಯಾವಹಾರಿಕ ಬೆಳವಣಿಗೆಯಲ್ಲಿನ ಘಟನಾವಳಿಗಳನ್ನು ಹಂಚಿಕೊಂಡರು. ತಮ್ಮ ಬೆಳವಣಿಗೆಯಲ್ಲಿ ಎಲ್ಲ ರೀತಿಯಲ್ಲೂ ಪ್ರೋತ್ಸಾಹಿಸಿದ ಪೋಷಕರನ್ನು ಗೌರವದಿಂದ ಕಾಣುವಂತೆ ಸಲಹೆ ನೀಡಿದರು.


ಕಾರ್ಯಕ್ರಮದಲ್ಲಿ ಪ್ರೊ.ಚೇತನಕುಮಾರ್, ಪ್ರೊ.ಗೌತಮ್, ಪ್ರೊ.ಸಾಯಿಲತಾ, ಡಾ|| ಅರುಣಾ, ಡಾ|| ನಾಗರಾಜ್ ಸೇರಿದಂತೆ ಪ್ರೇರಣಾ ತಾಂತ್ರಿಕ ಮತ್ತು ತಾಂತ್ರಿಕೇತರ ಶಿಕ್ಷಣ ಸಂಸ್ಥೆಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಉದ್ಯೋಗಾವಕಾಶವನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಪ್ರಮಾಣಪತ್ರ ವಿತರಿಸಲಾಯಿತು.

ಉದ್ಯೋಗಾವಕಾಶ ಒದಗಿಸುವ ಯತ್ನ ನಿರಂತರ: ರಾಘವೇಂದ್ರ
ದಶಕಗಳ ಹಿಂದೆ ಕೇವಲ ಮೆಟ್ರೋ ಪಾಲಿಟಿನ್ ಸಿಟಿಗಳು, ನಂ. ೦೧ – ೦೨ ಸಿಟಿಗಳಿಗೆ ಮಾತ್ರ ಸೀಮಿತವಾಗಿದ್ದ ಅರ್ಹ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಇಂತಹ ಸದವಕಾಶಗಳು ಶಿವಮೊಗ್ಗ ಜಿಲ್ಲಾ ಕೇಂದ್ರಗಳಿಗೂ ಇಂದು ಸಾಧ್ಯವಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸದ ಹಾಗೂ ಪ್ರೇರಣಾ ಟ್ರಸ್ಟ್‌ನ ವ್ಯವಸ್ಥಾಪಕ ಬಿ.ವೈ.ರಾಘವೇಂದ್ರ ಹೇಳಿದರು.
ಪ್ರೇರಣಾ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ೬೫೧ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ದೇಶದ ೭೫ಕ್ಕೂ ಹೆಚ್ಚಿನ ಪ್ರತಿಷ್ಠಿತ ಔದ್ಯೋಗಿಕ ಸಂಸ್ಥೆಗಳಲ್ಲಿ, ಅತ್ಯಂತ ಹೆಚ್ಚಿನ ವೇತನ ಶ್ರೇಣಿಯ ಉದ್ಯೋಗಾವಕಾಶಗಳು ಮಲೆನಾಡಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒದಗಿ ಬಂದಿದೆ. ಇವರಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಉನ್ನತ ಶ್ರೇಣಿಯ ಉದ್ಯೋಗ ದೊರೆತಿರುವುದು ಹರ್ಷದ ಸಂಗತಿಯಾಗಿದೆ. ಈ ಯಶಸ್ಸಿನ ಹಿಂದೆ ಶ್ರಮಿಸಿದ ಶಿಕ್ಷಣ ಸಂಸ್ಥೆಯ ಸಿಬ್ಬಂಧಿಗಳು, ಉದ್ಯೋಗದಾತರು ಹಾಗೂ ಈ ಸಂದರ್ಭದಲ್ಲಿ ಉದ್ಯೋಗಾವಕಾಶಕ್ಕೆ ಅರ್ಹರಾದ, ಸಂಸ್ಥೆಯ ಹಾಗೂ ನಗರದ ಕೀರ್ತಿ ಹೆಚ್ಚಿಸಿದ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದರು.
ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ನಿರುದ್ಯೋಗಿಗಳಿಗೆ ಉದ್ಯೋಗಾವ ಕಾಶಗಳನ್ನು ಒದಗಿಸುವ ಯತ್ನ ನಿರಂತರವಾಗಿರಲಿದೆ. ಸ್ಥಗಿತಗೊಂಡಿರುವ ಭದ್ರಾವತಿಯ ಅವಳಿ ಕಾರ್ಖಾನೆಗಳನ್ನು ಪುನರಾರಂಭಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದರು.

Exit mobile version