Site icon TUNGATARANGA

20 ಪ್ರಭಾವಿ ಸಂಘ ಸಂಸ್ಥೆಗಳಿಗೆ ಅಂತಿಮ ನೋಟೀಸ್!

ಶಿವಮೊಗ್ಗ, ಆ.24:

ಸಹಕಾರ ಸಂಘಗಳ ನೋಂದಣಿ ಕಾಯ್ದೆಯನ್ವಯ 5 ವರ್ಷಗಳಿಗೆ ಮೀರಿ ತಹಲ್‌ವರೆವಿಗೂ ವಾರ್ಷಿಕ ದಾಖಲೆಗಳನ್ನು ಸಂಘಗಳ ನೋಂದಣಾಧಿಕಾರಿಗಳ ಕಚೇರಿಗೆ ಸಲ್ಲಿಸದೆ ಇರುವ ಸಂಘಗಳ ನೋಂದಣಿ ರದ್ಧತಿಗೆ ಕ್ರಮ ಕೈಗೊಳ್ಳಲಾಗಿದೆ.
ಶಿವಮೊಗ್ಗದ ಬಾಹುಸಾರ ಕ್ಷತ್ರೀಯ ಮಹಾಜನ ಸಮಾಜ, ಜಿಲ್ಲಾ ಪ್ರಾಥಮಿಕ ಶಾಲಾ ಉಪಾಧ್ಯಾಯರ ಸಂಘ, ದಿ ಗ್ರೈನ್ ಮರ್ಚೆಂಟ್ಸ್ ಅಸೋಸಿಯೇಷನ್, ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ, ಲೇಬರ್ ಅಸೋಸಿಯೇಷನ್, ದಿ ಸ್ಟಾರ್ ಆಫ್ ಇಂಡಿಯಾ ರಿಕ್ರಿಯೇಷನ್ ಕ್ಲಬ್ ಮತ್ತು ಫ್ರೀ ರೀಡಿಂಗ್ ರೂಂ ಆಂಡ್ ಲೈಬ್ರರಿ. ಭದ್ರಾವತಿಯ ಲೇಬರ‍್ಸ್ ಯೂನಿಯನ್, ಶ್ರೀ ಮಂಜುನಾಥ ಕ್ಲಬ್, ಭಾರತ್ ಸೊಸೈಟಿ, ಶ್ರೀ ಟೌನ್ ಕ್ಲಬ್, ಶ್ರೀ ವೆಂಕಟೇಶ್ ಕ್ಲಬ್, ಶ್ರೀ ಮಾರುತಿ ಕ್ಲಬ್, ಒಕ್ಕಲಿಗರ ಸಂಘ ಮತ್ತು ಲಕ್ಷ್ಮೀ ಸೊಸೈಟಿ. ಸಾಗರದ ವೀರಶೈವ ಹಾಸ್ಟೇಲ್ ಸಂಘ, ದಿ ಫ್ರೆಂಡ್ಸ್ ಯೂನಿಯನ್ ಮತ್ತು ಮರ್ಚೆಂಟ್ಸ್ ಕ್ಲಬ್. ಸೊರಬದ ಅಖಿಲ ಮೈಸೂರು ಗುಡಿಗಾರ ಸಮಾಜ. ಹಾಗೂ ತೀರ್ಥಹಳ್ಳಿಯ ದಿ ಮಲೆನಾಡು ಟೆನೆಂಟ್ಸ್ ಅಸೋಸಿಯೇಷನ್ ಸೇರಿದಂತೆ ಜಿಲ್ಲೆಯ ೨೦ ಸಂಘ ಸಂಸ್ಥೆಗಳನ್ನು ರದ್ದು ಪಡಿಸುವ ಸಲುವಾಗಿ 2020ರ ಜೂನ್ ಮಾಹೆಯಲ್ಲಿ ನೋಟೀಸ್ ಕಳುಹಿಸಲಾಗಿತ್ತು.
ಮೇಲ್ಕಂಡ 20 ಸಂಘ ಸಂಸ್ಥೆಗಳು ನೋಟೀಸ್ ತಲುಪಿದ 7 ದಿನಗಳೊಳಗಾಗಿ ನೋಂದಣಾಧಿಕಾರಿಗಳ ಕಚೇರಿಯಲ್ಲಿ ತಮ್ಮ ಆಕ್ಷೇಪಣೆಗಳನ್ನು ಮಾಹಿತಿಯೊಂದಿಗೆ ಸಲ್ಲಿಸದಿರುವುದರಿಂದ ಈ ಎಲ್ಲಾ ಸಂಘಗಳು ಅಸ್ತಿತ್ವವಿಲ್ಲವೆಂದು ಭಾವಿಸಿ ನೋಂದಣಿಯನ್ನು ರದ್ಧುಪಡಿಸಿ ಶಿವಮೊಗ್ಗ ಜಿಲ್ಲಾ ಸಂಘಗಳ ನೋಂದಣಾಧಿಕಾರಿಗಳು, ಸಹಕಾರ ಸಂಘಗಳ ಉಪನಿಬಂಧಕರು ಆದೇಶಿಸಿದ್ದಾರೆ ಎಂದು ಸಹಕಾರ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ನೋಟೀಸ್ ಪಡೆದ ಪ್ರಮುಖ ಸಂಘಗಳು
ಶಿವಮೊಗ್ಗದ ಬಾಹುಸಾರ ಕ್ಷತ್ರೀಯ ಮಹಾಜನ ಸಮಾಜ,
ಜಿಲ್ಲಾ ಪ್ರಾಥಮಿಕ ಶಾಲಾ ಉಪಾಧ್ಯಾಯರ ಸಂಘ,
ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ,
ಲೇಬರ್ ಅಸೋಸಿಯೇಷನ್,
ಒಕ್ಕಲಿಗರ ಸಂಘ ಮತ್ತು ಲಕ್ಷ್ಮೀ ಸೊಸೈಟಿ
ಸೊರಬದ ಅಖಿಲ ಮೈಸೂರು ಗುಡಿಗಾರ ಸಮಾಜ

Exit mobile version