ಅಂತರ್ ಜಿಲ್ಲಾ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ ಸುಮಾರು 08,20,000/ರೂ ಮೌಲ್ಯದ ವಿವಿಧ ಮಾದರಿಯ ಕಳ್ಳತನವಾದ ಒಟ್ಟು 06 ದ್ವಿಚಕ್ರ ವಾಹನಗಳ ಜಪ್ತಿ. ಮಾಡಲಾಗಿದೆ.
ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿಗೆ ಬೈಕ್ ಕಳ್ಳತನ ಪ್ರಕರಣ ನಡೆದದ್ದರಿಂದ ಲಕ್ಷ್ಮೀ ಪ್ರಸಾದ್ ಐಪಿಎಸ್ ಜಿಲ್ಲಾ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಮತ್ತು ವಿಕ್ರಮ್ ಅಮತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ರವರು ಬೈಕ್ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚಲು ಆದೇಶಿಸಿದ ಮೇರೆಗೆ ರೋಹನ್ ಜಗದೀಶ್ ಐಪಿಎಸ್ ಸಹಾಯಕ ಪೊಲೀಸ್ ಅಧೀಕ್ಷಕರು ಸಾಗರ ಉಪ ವಿಭಾಗ ಸಾಗರ ಮತ್ತು ಕಾರ್ಗಲ್ ಸರ್ಕಲ್ ಪೊಲೀಸ್ ಇನ್ಸಪೆಕ್ಟರ್, ಪ್ರಭಾರ ಸಾಗರ ಟೌನ್ ಪೊಲೀಸ್ ಠಾಣೆ ಕೃಷ್ಣಪ್ಪ ಕೆ.ವಿ. ರವರ ಮಾರ್ಗದರ್ಶನದಲ್ಲಿ ಕಾರ್ಗಲ್ ಪೊಲೀಸ್ ಠಾಣೆಯ ಪಿಎಸ್‌ಐ ತಿರುಮಲೇಶ್ ಜಿ, ಮತ್ತು ಸಾಗರ ಟೌನ್ ಪೊಲೀಸ್ ಠಾಣೆಯ ಪಿಎಸ್‌ಐ ಟಿ.ಡಿ.ಸಾಗರ್ ಕರ್ ರವರ ನೇತೃತ್ವದಲ್ಲಿ ಸಾಗರ ಟೌನ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂಧಿಗಳಾದ ಹೆಚ್.ಸಿ. ಶ್ರೀ ರತ್ನಾಕರ್, ಸಿಪಿಸಿಗಳಾದ ಸಂತೋಷ್ ನಾಯ್ಕ, ಶ್ರೀಧರ್, ಯೋಗಿಶ್, ಲೋಕೇಶ್, ಮೈಲಾರಿ, ಭರತ್ ಕುಮಾರ್, ವಿಶ್ವನಾಥ್, ಮಂಜುನಾಥ್ ರವರನ್ನು ಒಳಗೊಂಡ ತಂಡವನ್ನ ರಚಿಸಲಾಗಿತ್ತು.
ನಿನ್ನೆ ಬೆಳಗಿನ ಜಾವ ಸಾಗರ ಪಟ್ಟಣದಲ್ಲಿ ಆರೋಪಿತರಾದ ಎl) ಸಮೀರ್ @ ಸೈಕ್ @ ಪ್ಯಾಟ್ರನ್ ತಂದೆ ಹಕೀಬ್ ಉಲ್ಲಾ,23 ವರ್ಷ, ಮುಸ್ಲಿಂ ಜಾತಿ, ಬೆಂಗಳೂರಿನಲ್ಲಿ ಸಿಗರೇಟ್ ಕಂಪನಿಯಲ್ಲಿ ಕೆಲಸ, ವಾಸ 4 ನೇ ತಿರುವು ಟ್ಯಾಂಕ್ ಮೊಹಲ್ಲ, ಶಿವಮೊಗ್ಗ, ಸ್ವಂತ ಮನೆ ಮಸೀದಿ ಎದುರು ಅಂಜನಾಪುರ ಶಿಕಾರಿಪುರ ತಾಲ್ಲುಕು ಶಿವಮೊಗ್ಗ ಜಿಲ್ಲೆ ಎ2) ಮಹ್ಮದ್ ಖಾದ್ರಿ @ ಸುಹೇಲ್ @ ಮಾಕೀ@ ಪಠಾಣ್, ತಂದೆ ಹುಸೇನ್ ಸಾಬ್ 19 ವರ್ಷ,ಮುಸ್ಲಿಂ ಜಾತಿ, ಕಾ ಮೆಕ್ಯನಿಕ್ ಕೆಲಸ ( ನವುಲೆಯಲ್ಲಿರುವ ಎಕ್ಸ್‌ಪೋರ್ಟ ಗ್ಯಾರೇಜ್‌ನಲ್ಲಿ), ವಾಸ ಶಾಂತಿನಗರ ಲಾಸ್ಟ ಬಸ್‌ನಿಲಾಣದ ಹತ್ತಿರ ಬೇಕರಿ ಪಕ್ಕ ಕಾಂಟೀನ್.ಶಿವಮೊಗ್ಗ 3) ಜುನೈದ್ ಖಾನ್ @ ಡಾನ್ ಡಾಲಿ ತಂದೆ ಅಜೀಜ್ ಪಾಠ, 20 ವರ್ಷ, ಮುಸ್ಲಿ ಜಾತಿ ಕೆಲಸ ಡ್ರೈವಿಂಗ್ ಕೆಲಸ ವಾಸ 5 ನೇ ತಿರುವು ಟ್ಯಾಂಕ್ ಮೊಹಲ್ಲಾ, ಶಿವಮೊಗ್ಗ ನಗರ ರವರನ್ನು ವಶಕ್ಕೆ ಪಡೆಯಲಾಗಿದೆ.
ವಿಚಾರಣೆ ಮಾಡಿದಾಗ, ಆರೋಪಿತರು ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣ, ಭದಾವತಿ, ಹರಿಹರ, ದಾವಣಗೆರೆ, ಹಾಸನ ಜಿಲ್ಲೆ, ಗಳಲ್ಲಿ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಗಳನ್ನು ಕಳ್ಳತನ ಮಾಡಿದ್ದಾಗಿ ಹೇಳಿಕೆ ನೀಡಿದ್ದರಿಂದ ಆರೋಪಿತರನ್ನು ದಸ್ತಗಿರಿ ಮಾಡಿ ಸುಮಾರು 8.20.000/ರೂ ಮೌಲ್ಯದ ವಿವಿಧ ಕಂಪನಿಯ 06 ಬೈಕ್‌ಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.