Site icon TUNGATARANGA

shimoga/ಸ್ಮಾರ್ಟ್‌ಸಿಟಿ ವ್ಯವಸ್ಥಾಪಕರಿಗೆ ಪಾಲಿಕೆ ಸದಸ್ಯೆ ರೇಖಾರಂಗನಾಥ್ ಮನವಿ!..

ಶಿವಮೊಗ್ಗ,
ಬಸ್ ಶೆಲ್ಟರ್ ನಿರ್ಮಾಣ, ವಾಕಿಂಗ್ ಪಾತ್ ಗೆ ಎಸ್‌ಎಸ್ ರೈಲಿಂಗ್ಸ್ ನಿರ್ಮಾಣ ಹಾಗೂ ಸಿಸಿಟಿವಿ ಅಳವಡಿಕೆ ಕೋರಿ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಅವರು ಸ್ಮಾಟ್‌ಸಿಟಿಯ ವ್ಯವಸ್ಥಾಪಕ ಚಿದಾನಂದ ವಟಾರೆ ಅವರಿಗೆ ಮನವಿ ಸಲ್ಲಿಸಲಾಯಿತು.


ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿ ಸಂಪೂರ್ಣ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದು ಈಗಾಗಲೇ ರಸ್ತೆಗಳ ಟಾರ್, ಡ್ರೈನೇಜು, ಲಾಕಿಂಗ್ ಟೈಲ್ಸ್ ಫೇವರ್ಸ್ ಅಳವಡಿಕೆಯಾಗಿದ್ದು ಚಾನಲ್ ಬಲಭಾಗದ ರಸ್ತೆಯಲ್ಲಿ ದಿನನಿತ್ಯ ಶಾಲಾ-ಕಾಲೇಜುಗಳ ಬಸ್ಸು ವಿಪರೀತ ಓಡಾಡುತ್ತಿದ್ದು ಶಾಲಾ ಮಕ್ಕಳು ಪೋಷಕರು ಎಲ್ಲೆಂದರಲ್ಲಿ ನಿಲ್ಲುತ್ತಿದ್ದು ಸೂಕ್ತವಾದ ಸ್ಥಳವಿಲ್ಲದೆ ಟ್ರಾಫಿಕ್ ಸಮಸ್ಯೆಯೂ ಹೆಚ್ಚಾಗುತ್ತಿದ್ದು. ಈ ಭಾಗದ ವಿದ್ಯಾರ್ಥಿಗಳಿಗೆ ಪೋಷಕರಿಗೆ ಅನುಕೂಲಕ್ಕಾಗಿ ಸಾರ್ವಜನಿಕರ ಒತ್ತಾಯದ ಮೇರೆಗೆ ಬಸ್ ಶೆಲ್ಟರ್ ನಿರ್ಮಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.


ಚಾನಲ್ ಪಕ್ಕದಲ್ಲಿರುವ ಮಹಾ ನಗರಪಾಲಿಕೆ ವತಿಯಿಂದ ನಿರ್ಮಾಣಗೊಂಡಿರುವ ಪಾರ್ಕ್ ಹಾಗೂ ವಾಕಿಂಗ್ ಪಾತ್ ಒಳಗೆ ಹಾಗೂ ಹೊರಗೆ ಸಾರ್ವಜನಿಕರು ವಾಕಿಂಗ್ ಮಾಡಲು ಅನುಕೂಲಕ್ಕಾಗಿ ಎಸ್‌ಎಸ್ ರೈಲಿಂಗ್ಸ್ ನಿರ್ಮಿಸಿಕೊಡಬೇಕೆಂದು, ವಾರ್ಡಿನಲ್ಲಿರುವ ಹೊಸಮನೆ ಸರ್ಕಾರಿ ಶಾಲೆ ಮುಂಭಾಗದಲ್ಲಿ ಮಕ್ಕಳಿಗೆ

ಆಟವಾಡಲು ಯೋಗ್ಯಕರವಾಗಿ ಫೇವರ್ಸ್ ಅಳವಡಿಸಿ ಆಟದ ಮೈದಾನವನ್ನು ನಿರ್ಮಿಸಿ ಕೊಡಬೇಕೆಂದು ಹಾಗೂ ಬಡಾವಣೆಯಲ್ಲಿ ಕೆಲವು ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕಣ್ಗಾವಲು ಅಳವಡಿಸಿಕೊಡಬೇಕೆಂದು ಸ್ಮಾರ್ಟ್ ಹೊಸಮನೆ ಬಡಾವಣೆಯ ಎಲ್ಲಾ ನಾಗರಿಕರ ಒತ್ತಾಯದ ಮೇರೆಗೆ ನಿರ್ಮಿಸಿಕೊಡಬೇಕೆಂದು ಮನವಿ ಸಲ್ಲಿಸಿದ್ದಾರೆ.

Exit mobile version