Site icon TUNGATARANGA

ಬಾಲಕಿ ಅತ್ಯಾಚಾರ, ಶಿವಮೊಗ್ಗದ ಸತ್ಯ ಘಟನೆ!

ಕಥೆಯಲ್ಲ ಹೇಳಲಾಗದ ಸತ್ಯ-1



ಇದು ಕಥೆಯಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಸತ್ಯ ಘಟನೆ. ಓದಿ, ನಮ್ಮ ನಡುವಿನ ಶೋಷಣೆ, ಮೋಸ, ಅತ್ಯಾಚಾರ ತಪ್ಪಿಸುವ ಜೊತೆಗೆ ವಿಕೃತ ಮನಸುಗಳಿಗೆ ಸರಿಯಾದ ಫಾಠ ಕಲಿಸುವೆಡೆ ನಾವು ಹೆಜ್ಜೆ ಹಾಕೋಣ.
ತಂದೆ-ತಾಯಿ ದುಡಿಯುವ ಬದುಕಿನ ನಡುವೆ ನಂಬಿಕೆಯ ಸಂಬಂಧಿಯನ್ನು ಮನೆಯಲ್ಲಿಟ್ಟುಕೊಂಡು ಆಗುವ ಅವಾಂತರ ನಿಮಗೆ ಗೊತ್ತೇ? ಶಿವಮೊಗ್ಗ ಜಿಲ್ಲೆಯಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಇದಕ್ಕೆ ಪೂರಕವಾಗಿ 13 ವರ್ಷದ ಬಾಲಕಿಯ ಮೇಲೆ ಸಂಬಂಧಿಯೇ ಹಲವು ಅಂದರೆ ತಾಯಿಯ ತಮ್ಮನೇ ಹಲವು ಬಾರೀ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಅಪ್ಪ-ಅಮ್ಮ ಇಬ್ಬರೂ ದುಡಿಯುತ್ತಾರೆ. ವಲಕೈತುಂಬಾ ವೇತನ. ಯಾವುದಕ್ಕೂ ಕೊರತೆಯಿಲ್ಲ. ಇವರಿಗೆ ಒಬ್ಬಳೇ ಮಗಳು. ಆಕೆಯೇ ಮುದ್ದು ಪುಟಾಣಿ. ಆಕೆ ಗೋಸ್ಕರ ದುಡಿಯುವ ತಂದೆತಾಯಿಗಳು ಆಕೆಯ ಎಲ್ಲಾ ಅಗತ್ಯಗಳನ್ನು ಪೂರೈಸುತ್ತಾರೆ. ಯಾವುದಕ್ಕೂ ಕೊರತೆ ಇರುವುದಿಲ್ಲ. ಆರೆ ಆಕೆಯೊಂದಿಗೆ ಹೆಚ್ಚು ಸಮಯ ಇರಲಾಗುತ್ತಿಲ್ಲವಲ್ಲ ಎಂಬ ಕೊರಗಿರುತ್ತದೆ. ಆಕೆ ಪ್ರತಿಷ್ಟಿತ ಎನ್ನುವ ಶಾಲೆಗೆ ಹೋಗುತ್ತಿದ್ದಾಳೆ. ಉತ್ತಮ ಶಿಕ್ಷಣ ಪಡೆಯುತ್ತಿದ್ದಾಳೆ. ಆಕೆಯೂ ಅಷ್ಟೆ ತುಂಬಾ ಚೆನ್ನಾಗಿ ಓದುತ್ತಿದ್ದಾಳೆ. ಚಂದದ ಸಂಸಾರ. ಇಬ್ಬರಿಗೂ ಜೀವಾಳದ ಜೀವೇ ಅವಳು. ಆದರೆ ಕೆಲಸದ ಒತ್ತಡದ ನಡುವೆ ಮಗಳನ್ನು ಗಮನಿಸಲು ಅಸಾಧ್ಯವಾಗುತ್ತದೆ.
ಇದರ ನಡುವೆ ಕೆಲಸ ಹುಡುಕಿಕೊಂಡು ಇಲ್ಲಿಗೆ ಬಂದ ತಾಯಿಯ ಸಹೋದರ ಈ ಮನೆಯಲ್ಲಿ ಟಿಕಾಣಿ ಹೂಡುತ್ತಾನೆ. ಆತನಿಗೆ ಆಸರೆ ನೀಡುವ ಜೊತೆಗೆ ಆತನ ಕೆಲಸಕ್ಕೆ ಹುಡುಕುತ್ತಾರೆ. ಈ ಅವಧಿಯಲ್ಲಿ ನಿತ್ಯ ಬಾಲಕಿಯನ್ನು ಶಾಲೆಯಿಂದ ಕರೆತರುವ ಕಳುಹಿಸುವ ಕಾಯಕದ ಜೊತೆ ಬಂದಾಗ ತಿಂಡಿ ಮಾಡಿಕೊಡುವ ಸಣ್ಣಪುಟ್ಟ ಕೆಲಸದ ಜವಾಬ್ದಾರಿಯನ್ನು ನೀಡುತ್ತಾರೆ. ಈ ಅವಧಿಯನ್ನು ದುರ್ಬಳಕೆ ಮಾಡಿಕೊಂಡ ಆ ವಿಕೃತ ಮನಸ್ಸಿನ ಯುವಕ ಆಮೇಲೆ ನಿರಂತರವಾಗಿ ಆಕೆಯ ಮೇಲೆ ಅತ್ಯಾಚಾರ ಮಾಡುತ್ತಾನೆ. ಅಲ್ಲಿ ಕೂಗಾಡಲೂ ಅವಕಾಶವಿಲ್ಲ. ಹೇಳಿದರೆ ಕೊಲೆ ಮಾಡುವ ಬೆದರಿಕೆ ಬೇರೆ.
ಚಂದ ಓದುತ್ತಿದ್ದ ಬಾಲೆ ಓದಿನ ಹವ್ಯಾಸವನ್ನು ಮರೆತುಬಿಡುತ್ತಾಳೆ. ಅಷ್ಟೇ ಅಲ್ಲ ಮಂಕು ಕವಿದ ಮನೋಸ್ಥಿತಿಯನ್ನು ತೋರ್ಪಡಿಸುತ್ತಾಳೆ. ಮನೆ ಅಷ್ಟೆ ಅಲ್ಲ ಶಾಲೆಯಲ್ಲೂ ಮಂಕಾಗಿರುತ್ತಾಳೆ. ಏಕೆ ಬದಲಾವಣೆ ಎಂಬುದು ಶಾಲಾ ಶಿಕ್ಷಕರಿಗೆ ಹಾಗೂ ಪೋಷಕರಲ್ಲಿ ಪ್ರಶ್ನೆಯಾಗಿ ಮೂಡುತ್ತದೆ. ಕಾಣದ ಕೈಗಳ ಆಟಕ್ಕೆ ಬ್ರೇಕ್ ಹಾಕುವವರು ಎಷ್ಟು ಕೇಳಿದರು ಏನೂ ಹೇಳದ ಬಾಲೆಯ ಸ್ಥಿತಿ ತಿಳಿಯುವುದೇ ಹೇಗೆ ಎಂಬ ಪ್ರಶ್ನೆ ಮೂಡುತ್ತದೆ.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸೇರಿದಂತೆ ಮಕ್ಕಳನ್ನು ಕಾಪಾಡುವ ಮನೋಸ್ಥಿತಿಯ ಎಲ್ಲರೂ ಸೇರಿ ಹೊಸ ಬಾಲೆಗೆ ಹೊಸ ಮನೋಸ್ಥೈರ್ಯ ನೀಡಿದ ಹಿರಿಮೆ ದೊರೆತಿದೆ. ಬಾಲಕಿಯನ್ನು ಸುಮಾರು ಮೂರು ಕೌನ್ಸಿಲಿಂಗ್ ಮೂಲಕ ಚರ್ಚಿಸಿ ಸತ್ಯ ತಿಳಿದ ಮೇಲೆ ತಂದೆ-ತಾಯಿ ಶಿಕ್ಷಕರು ಹಾಗೂ ಇತರನ್ನು ವಿಚಾರಿಸುತ್ತಾರೆ. ಆಗ ಸತ್ಯ ಗೊತ್ತಾಗುತ್ತದೆ. ನಿರಂತರವಾಗಿ ಆತ ಬೆದರಿಸಿ ಅತ್ಯಾಚಾರ ನಡೆಸುತ್ತಿದ್ದ ಘಟನೆ ಬೆಳಕಿಗೆ ಬರುತ್ತದೆ ಅಂತೆಯೇ ಮಕ್ಕಳ ಹಿತ ಕಾಪಾಡುವ ಮನಸ್ಥಿತಿಯ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಸಹಪಾಠಿಗಳು, ಪೋಷಕರು, ಮಕ್ಕಳ ರಕ್ಷಣಾ ಘಟಕ ಸೇರಿದಂತೆ ಎಲ್ಲರೂ ಸಾಮೂಹಿಕವಾಗಿ ಒಂದೆಡೆ ಕುಳಿತು ಚರ್ಚಿಸಿ ಹೊಸ ಮನೋಧೈರ್ಯ ತುಂಬುವ ಜೊತೆಗೆ ತಪ್ಪಿತಸ್ಥರನಿಗೆ ಕಾನೂನಾತ್ಮಕವಾಗಿ ಶಿಕ್ಷೆ ಕೊಡಿಸುವ ಕಾರ್ಯ ಮಾಡಿದ್ದಾರೆ.
ಇಲ್ಲಿ ಒಂದಂತೂ ಸತ್ಯ. ಹೈಕ್ಲಾಸ್ ಫ್ಯಾಮಿಲಿಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ಇಲ್ಲಿ ಆ ಯುವಕನ ಮೇಲೆ ಅಪರಾಧದ ಹಿನ್ನೆಲೆಯಲ್ಲಿ ಈ ದೂರು ದಾಖಲಾಗಿದೆ. ಬಡಕುಟುಂಬದ ಕೂಲಿ ಮಾಡುವ ಜನರ ಬದುಕಲ್ಲಿ ಸಂಭವಿಸುವ ಸಂಭವಿಸಬಹುದಾದ ಘಟನೆಗಳು ತುಂಬಾ ರಾಯಲ್ ಎಂದುಕೊಳ್ಳುವ ಕುಟುಂಬಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿರುವುದು ಆತಂಕದ ಸಂಗತಿ.
ಅಲ್ಲಿ ಒಂದೆಡೆ ಕಿತ್ತುತಿನ್ನುವ ಬಡತನ ಹಸಿವು, ಮುಖ್ಯವಾಗಿದ್ದರೆ ಇಲ್ಲಿ ಮಕ್ಕಳನ್ನೇ ಗಮನಿಸದ ಮನೋಸ್ಥಿತಿ ಗಂಭೀರವಾದ ಪರಿಸ್ಥಿತಿಗೆ ಕಾರಣವಾಗುತ್ತದೆ. ಇದು ಶಿವಮೊಗ್ಗದಲ್ಲಿ ನಡೆದ ಸತ್ಯ ಘಟನೆ. ಬಾಲಕಿಯೀಗ ತಂದೆ ತಾಯಿಯ ಆಸರೆಯಲ್ಲಿ ಎಲ್ಲವ ಮರೆತು ಎಂದಿನಂತಹ ಬದುಕು ಕಟ್ಟಿಕೊಳ್ಳಲು ತೊಡಗಿದ್ದಾಳೆ. ಆಕೆಗೆ ಆತ್ಮಸ್ಥೈರ್ಯ ತುಂಬಿದ ಎಲ್ಲಾ ಮನಸುಗಳಿಗೆ ತುಂಗಾತರಂಗ ವಿಶೇಷವಾಗಿ ಅಭಿನಂಧಿಸುತ್ತದೆ.
ತುಂಗಾತರಂಗ ಮೂಲದ ಸತ್ಯಘಟನೆಯ ಬರಹ: ಎಸ್.ಕೆ.ಗಜೇಂದ್ರ ಸ್ವಾಮಿ

Exit mobile version