ಶಿವಮೊಗ್ಗ
ವಿದ್ಯಾರ್ಥಿಗಳಲ್ಲಿ ಓದುವುದು, ಅಂಕ ಪಡೆಯುವುದು, ಉತ್ತಮ ಹುದ್ದೆ ಹೊಂದುವುದು ಮಾತ್ರ ಗುರಿಯಲ್ಲ. ಗೊತ್ತಿಲ್ಲದ ಹಾಗೆ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುವ ಸಂಭವವಿ ರುತ್ತದೆ. ಈ ಬಗ್ಗೆ ತಿಳುವಳಿಕೆಯನ್ನು ಹೊಂದ ಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ರಾಜಣ್ಣ ಸಂಕಣ್ಣನವರ್ ಹೇಳಿದ್ದಾರೆ.
ಅವರಿಂದು ನಗರದ ಕಟೀಲು ಅಶೋಕ್ ಪೈ ಸ್ಮಾರಕ ಕಾಲೇಜಿನ ಸಭಾಂಗಣದಲ್ಲಿ ಮಾನಸ ಟ್ರಸ್ಟ್, ಕಟೀಲು ಅಶೋಕ್ ಪೈ ಸ್ಮಾರಕ ಕಾಲೇಜು, ಐಕ್ಯೂಎಸಿ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕ, ಸುರಭಿ ಮಹಿಳಾ ಮಂಡಳಿ, ವ್ಯಸನಮುಕ್ತಿ ಹಾಗೂ ಪುನರ್ ವಸತಿ ಕೇಂದ್ರ, ಜಿಲ್ಲಾ ಕಾನೂನುಗಳ ಸೇವಾ ಪ್ರಾಧಿಕಾರ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಂತರ್ ರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರ ಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಾದಕ ವಸ್ತುಗಳ ಸೇವನೆ ೨ ತಿಂಗಳ ಬಳಿಕವೂ ಕೂಡ ಪತ್ತೆ ಹಚ್ಚುವ ಸಾಧನಗಳಿವೆ. ಹಾಗಾಗಿ ಮದ್ಯಪಾನ, ಗಾಂಜಾ, ಡ್ರಗ್ಸ್ ಯಾವುದೇ ಮಾದಕವಸ್ತುಗಳಿರಲಿ ಸೇವಿಸಿದರೆ ಅದು ವ್ಯಕ್ತಿಯ ವ್ಯಕ್ತಿತ್ವಕ್ಕೆ ಒಂದು ಕಪ್ಪು ಚುಕ್ಕೆ. ನಮ್ಮ ಜಿಲ್ಲೆಯೊಂದರಲ್ಲೇ ಇತ್ತೀಚೆಗೆ ೧೯೩ ಕೆ.ಜಿ. ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು. ಹಾಗಾದರೆ ರಾಜ್ಯ ಮತ್ತು ದೇಶದಲ್ಲಿ ಎಷ್ಟಿರಬ ಹುದು.
ಇದರ ಸರ್ವನಾಶಕ್ಕೆ ಜಿಲ್ಲಾಡಳಿತ ಮತ್ತು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದೆ. ವಿದ್ಯಾರ್ಥಿ ಜೀವನದಲ್ಲಿ ಕಾನೂನಿನ ಸರಪಳಿಗೆ ಒಂದುಬಾರಿ ಸಿಕ್ಕಿದರೆ ಆತನ ಜೀವನವೇ ನಾಶವಾದಹಾಗೆ. ಆತನಿಗೆ ಎಲ್ಲ ರೀತಿಯ ನಿರಾಸಕ್ತಿ ಉಂಟಾಗುತ್ತದೆ. ಇಡೀ ಕುಟುಂಬದ ಆರ್ಥಿಕ ಸ್ಥಿತಿ ಹದಗೆಡುತ್ತದೆ. ಸಮಾಜಕ್ಕೆ ಕಪ್ಪು ಚುಕ್ಕಿಯಾಗುತ್ತಾರೆ. ನಾವಷ್ಟೇ ನಾಶವಾಗುವುದ ಲ್ಲದೇ ಇಡೀ ವ್ಯವಸ್ಥೆ ಮೇಲೆ ಕೆಟ್ಟಪರಿಣಾಮ ಬೀರುತ್ತದೆ. ಯುವಕರು ದೇಶದ ಆಸ್ತಿಯಾಗಿದ್ದು, ಜಾಗೃತಿ ಮೂಡಿಸುವುದು ಸಮಾಜದ ಕರ್ತವ್ಯ. ಆದ್ದರಿಂದ ಮಾದಕ ಚಟಗಳಿಗೆ ಬಲಿಯಾಗಬೇಡಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಎಎಸ್‌ಪಿ ವಿಕ್ರಂ ಹಂಪೆ, ಪ್ರಾಂಶುಪಾಲೆ ಡಾ. ಸಂಧ್ಯಾ ಕಾವೇರಿ, ಪ್ರೊ. ರಾಜೇಂದ್ರ ಚೆನ್ನಿ, ಸುರಭಿ ಮಹಿಳಾ ಮಂಡಳಿಯ ನಿರ್ದೇಶಕರಾದ ರೇಖಾ ಮೊದಲಾದವರಿದ್ದರು.