ಶಿವಮೊಗ್ಗ, ಜೂ.26:
ಪ್ರೀತಿ ಪ್ರೇಮ ಪ್ರಣಯ ಓಕೆ. ಇದರಲ್ಲಿರಲಿ ಬದುಕಿನ ಜೋಕೆ ಎನ್ನೋ ಮಾತು ಬಹಳಷ್ಟು ಯುವ ಮನಸುಗಳಿಗೆ ಅರ್ಥವಾಗುತ್ತಿಲ್ಲ.
ಪ್ರೀತಿಸುತ್ತಿದ್ದ ಯುವತಿ ಮನೆಯವರ ವಿಚಾರ ಮುಂದಿಟ್ಟು ಅಂತರ ಕಾಯ್ದುಕೊಂಡ ಮೇಲೆಯೂ ಯುವತಿ ಊರಿಗೆ ಬಂದು ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ನಡೆದಿದೆ.
ಈತನ ಪ್ರೀತಿ ಮೇಲಿನ ಸಾವು ತ್ಯಾಗವಲ್ಲ. ಸಾಯುವ ಮುನ್ನ ಹುಡುಗಿನ ಜೊತೆಗಿನ ಚಿತ್ರ ವೀಡಿಯೋ ವೈರಲ್ ಮಾಡಿದ್ದಾನೆ. ಇದು ಪ್ರೀತಿನಾ? ತ್ಯಾಗನಾ?
ಈತ ದೂರದ ಜಿಲ್ಲೆಯಿಂದ ಬಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇದಾಗಿದದೆ. ಯುವಕ ಸೆಲ್ಫಿ ವಿಡಿಯೊ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಂಗಳೂರಿನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ ದಿಲೀಪ ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆಯವನು. ಬೆಂಗಳೂರಿನಲ್ಲಿ ಕುಟುಂಬಸ್ಥರೊಂದಿಗೆ ದಿಲೀಪ್ ಕೆಲಸಕ್ಕೆ ಹೋಗುತ್ತಿದ್ದನು. ಈ ಗಾರ್ಮೆಟ್ಸ್ ನಲ್ಲೇ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬೆಟ್ಟದಕೂರ್ಲಿಯ ಹುಡುಗಿ ಪರಿಚಯವಾಗುತ್ತಾಳೆ.
ದಿಲೀಪ್ ಮತ್ತು ಯುವತಿ ಇಬ್ಬರು ಸಹ ಕೆಲ ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ನಂತರದ ದಿನಗಳಲ್ಲಿ ಮನೆಯ ಕಾರಣ ನೀಡಿ ಯುವತಿ ಪ್ರೀತಿ ಮಾಡೋದಕ್ಕೆ ನಿರಾಕರಿಸಿದ್ದಾಳೆ. ಅಲ್ಲದೆ, ಅಂತರ ಕಾಯ್ದುಕೊಂಡಿದ್ದಾಳೆ. ಇದರಿಂದ ಮನನೊಂದು ದಿಲೀಪ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾನೆ.
ಯುವತಿ ವಾಸವಿರುವ ಸೊರಬ ತಾಲ್ಲೂಕಿನ ಬೆಟ್ಟದಕೂರ್ಲಿ ಗ್ರಾಮಕ್ಕೆ ತೆರಳಿ, ಅಲ್ಲಿನ ಕೆರೆ ಏರಿ ಮೇಲೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಲ್ಲಿನ ಸ್ಥಳಿಯರು ಆಕಸ್ಮಿಕವಾಗಿ ದಿಲೀಪ್ ಬಿದ್ದಿರುವುದನ್ನು ನೋಡಿದ್ದಾರೆ. ಪಕ್ಕದಲ್ಲೇ ವಿಷದ ಬಾಟಲಿಯನ್ನು ನೋಡಿ ತಕ್ಷಣ ದಿಲೀಪ್‌ನನ್ನು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರೂ ಆತ ಬದುಕುಳಿಯಲಿಲ್ಲ.
ಸದ್ಯ ಯುವಕ ರೆಕಾರ್ಡ್ ಮಾಡಿರುವ ಸೆಲ್ಫಿ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.