Site icon TUNGATARANGA

ಡ್ರಗ್ಸ್ ಜಾಗೃತಿಗಾಗಿ ಶಿವಮೊಗ್ಗ ನಗರದಲ್ಲಿ 15 ಕಿ ಮೀ ಓಡಿದ ಡಾ.ಮೋಹನ್ ಕುಮಾರ್ ದಾನಪ್ಪ

ಶಿವಮೊಗ್ಗ: ಜೂ26: ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಡ್ರಗ್ಸ್ ಜಾಗೃತಿ ಕುರಿತು ಬೆಂಗಳೂರಿನ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಡಾ.ಮೋಹನ್ ಕುಮಾರ್ ದಾನಪ್ಪನವರು ಶಿವಮೊಗ್ಗ ನಗರದಲ್ಲಿ 15 ಕಿಲೋ ಮೀಟರ್ ಮ್ಯಾರಥಾನ್ ಮಾಡುವ ಮೂಲಕ ಜಾಗೃತಿ ಮೂಡಿಸಿದರು!

ವಿನೋಬಾ ನಗರ ಪೊಲೀಸ್ ಚೌಕಿಯಿಂದ- ಉಷಾ ನರ್ಸಿಂಗ್ ಹೋಂ- ನೆಹರೂ ಕ್ರೀಡಾಂಗಣ- ಮಹಾವೀರ ವೃತ್ತ- ಕೆಇಬಿ ವೃತ್ತ-ಸಂಗೊಳ್ಳಿ ರಾಯಣ್ಣ ವೃತ್ತ- ಶಂಕರ್ ಮಠ ವೃತ್ತ- ಬಿ ಹೆಚ್ ರಸ್ತೆ- ಶಿವಪ್ಪ ವೃತ್ತ- ಅಮೀರ್ ಅಮ ವೃತ್ತ- ಕೆ ಎಸ್ ಆರ್ ಟಿಸಿ ಬಸ್ ಸ್ಟಾಂಡ್- ಎಸ್ಪಿ ಕಚೇರಿ- ಮೆಗ್ಗಾನ್ ಆಸ್ಪತ್ರೆ- ಮಾನಸ ನರ್ಸಿಂಗ್ ಹೋಂ- ಜೈಲ್ ರೋಡ್- ಗೋಪಿ ವೃತ್ತ- ಗಾಂಧಿ ಪಾರ್ಕ್-ಎಪಿಎಂಸಿ- ಅಲ್ಕೊಳ ವೃತ್ತ- ಕಾಶೀಪುರವರೆಗೂ ಮ್ಯಾರಥಾನ್ ನಡೆಸಿದರು ನಂತರ “ರಾಜ್ಯದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ವ್ಯಾಪಕವಾಗಿರುವ ಡ್ರಗ್ಸ್ ದೇಹಕ್ಕೆ, ಆರೋಗ್ಯಕ್ಕೆ ಮಾರಕ ದೇಶವನ್ನೇ ಡ್ರಗ್ಸ್ ನಿಂದ ನಿರ್ಮೂಲನೆ ಮಾಡಬೇಕೆಂದು ಹೇಳುವುದಕ್ಕಿಂತ ತಮ್ಮ ತಮ್ಮ ಕುಟುಂಬದ ಸದಸ್ಯರ ಮೇಲೆ ನಿಗಾ ವಹಿಸುವಂತೆ” ಕರೆ ನೀಡಿದರು,
ಜಾಗೃತಿ ಓಟದ ಸಂಪೂರ್ಣ ಯಶಸ್ಸನ್ನು ಸುಪ್ರೀಂ ಕೋರ್ಟಿನ ಎಎಸ್ಜಿ ಕೆ.ಎಂ.ನಟರಾಜ್ ಅವರಿಗೆ ಸಮರ್ಪಿಸಿದರು!

Exit mobile version