ಶಿವಮೊಗ್ಗ,
ರಂಗೋಲಿ ಎನ್ನುವುದು ನಮ್ಮ ದೇಶದ ಸಂಸ್ಕಾರ ಮತ್ತು ಸಂಸ್ಕೃತಿಯ ಪ್ರತೀಕ ಎಂದು ಮಹಾನಗರ ಪಾಲಿಕೆ ಸದಸ್ಯೆ ಸುರೇಖಾ ಮುರಳೀಧರ್ ಹೇಳಿದ್ದಾರೆ.
ಅವರು ವಿನೋಬನಗರದ ಶಿವಾಲಯದಲ್ಲಿ ಜಿಲ್ಲಾ ಬೇಡಜಂಗಮ ಸಮಾಜ ಮಹಿಳಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಂಗೋಲಿ ಎನ್ನುವುದು ಭಾರತೀಯ ಕಲೆಯಾಗಿದ್ದು, ಅನಾದಿ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿ ಬಂದಿದೆ. ಎಲ್ಲಾ ಶುಭ ಕಾರ್ಯಗಳು ರಂಗೋಲಿಯಿಂದಲೇ ಪ್ರಾರಂಭವಾಗುತ್ತವೆ. ರಂಗೋಲಿಗೆ ವೈಜ್ಞಾನಿಕ ಹಿನ್ನಲೆಯೂ ಇದೆ. ರಂಗೋಲಿ ಹಾಕುವಾಗ ಕೈಯಲ್ಲಿನ ಬೆರಳುಗಳ ನಡುವೆ ಉಂಟಾಗುವ ತರಂಗಗಳು ಮತ್ತು ಮುದ್ರೆ ದೇಹ ಹಾಗೂ ಪರಿಸರದ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬೇಡ ಜಂಗಮ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಸುನಂದಾ ವಿಜಯಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಜಯ ಪ್ರಸಾದ್, ಸುಜಾತಾ ನಾಗರಾಜ್, ಗಿರಿಜಮ್ಮ ಮೊದಲಾದವರಿದ್ದರು.