Site icon TUNGATARANGA

ಮಕ್ಕಳ ಒತ್ತಡ ನಿರ್ವಹಣೆಗೆ ಪಠ್ಯೇತರ ಚಟುವಟಿಕೆಗಳು ಪೂರಕ:ಡಾ.ಕೆ.ಎಸ್.ಪವಿತ್ರಾ

ಶಿವಮೊಗ್ಗ,
ಮಕ್ಕಳ ಒತ್ತಡ ಮತ್ತು ಸಮಯ ನಿರ್ವಹಣೆಗೆ ಪಠ್ಯೇತರ ಚಟುವಟಿಕೆಗಳು ಪೂರಕವಾಗಿರುವುದರಿಂದ ಪ್ರತಿ ಶಾಲೆಗಳೂ ಪಠ್ಯದಜೊತೆಗೆ ಬೇರೆ ಬೇರೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಿ ಮಕ್ಕಳು ಪಾಲ್ಗೊಳ್ಳು ವಂತೆ ಮಾಡಬೇಕು ಎಂದು ಡಾ.ಕೆ.ಎಸ್.ಪವಿತ್ರಾ ಹೇಳಿದರು.


ಹೊಳೆಹೊನ್ನೂರು ಸಮೀಪದ ಜಾವಳ್ಳಿಯ ಜ್ಞಾನದೀಪ ಶಾಲೆಯಲ್ಲಿ ಆಯೋಜಿಸಲಾಗಿದ್ದ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ‍್ಯಕ್ರಮದಲ್ಲಿ ಮಾತನಾಡಿದರು.


ಪ್ರತಿಯೊಬ್ಬರೂ ಮಕ್ಕಳ ಅಭಿಪ್ರಾಯಗಳಿಗೆ ಮನ್ನಣೆ ನೀಡಿಬೇಕು. ಮಕ್ಕಳು ಕೂಡಾ ಯಾವುದೇ ಕಾರ‍್ಯ ಮಾಡಲು ಸಮಯವಿಲ್ಲ ಎಂದು ದೋಷಿಸದೇ, ಧನಾ ತ್ಮಕ ದೃಷ್ಠಿಯಿಂದ ನೋಡುತ್ತಾ ಇಷ್ಟಪಟ್ಟು ಆಸಕ್ತಿಯಿಂದ ಓದು ಬರಹ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.


ಜ್ಞಾನದೀಪ ಶಾಲೆಯ ಪ್ರಾಚಾರ‍್ಯ ಶ್ರೀಕಾಂತ ಎಂ ಹೆಗಡೆ ಮಾತನಾಡಿ. ಚಟುವಟಿಕೆಗಳ ಉದ್ದೇಶಗಳನ್ನು ಸ್ಪಷ್ಟಪಡಿಸುತ್ತಾ, ಚಟುವಟಿಕೆಗಳಿಂದಲೇ ಮಕ್ಕಳು ವಿವಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯ. ನಮಗಾಗಿ ಅವಕಾಶಗಳು ಸದಾ ತೆರೆದಿರುತ್ತವೆ. ಯಾರು ಅವಕಾಶಗಳನ್ನು ಬಳಸಿಕೊಳ್ಳವರೋ, ಮಾದರಿಯಾಗುವ ಕಾರ‍್ಯ ಮಾಡುವರೋ, ಉದ್ದೇಶಪೂರಕವಾಗಿ ಪಾಲ್ಗೊಳ್ಳುವರೋ ಅವರು ಅತ್ಯುತ್ತಮ ನಾಯಕನಾಗಿ ಬೆಳೆಯುತ್ತಾರೆ ಎಂದರು.


ಕಾರ‍್ಯಕ್ರಮದ ಅಂಗವಾಗಿ ಮಕ್ಕಳಿಗೆ ದೇಶಭಕ್ತಿ ಗೀತೆ ಮತ್ತು ದಾಸರ ಪದ ಹಾಡುವ ಸಮೂಹಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ‍್ಯಕ್ರಮದಲ್ಲಿ ಜ್ಞಾನದೀಪ ಶಾಲೆಯ ಉಪಪ್ರಾಂಶುಪಾಲರಾದ ಡಾ ರೆಜಿ ಜೋಸೇಫ್ ಸ್ವಾಘತಿಸಿದರು. ಮುಖ್ಯೋಪಾಧ್ಯಾಯಿನಿ ವಾಣಿಕೃಷ್ಣಪ್ರಸಾದ್ ವಂದಿಸಿದರು.

Exit mobile version