Site icon TUNGATARANGA

ಭದ್ರಾವತಿ/ ಕಾಡಿಗೆ ಬಿಟ್ಟಾಕ್ಷಣ ಕುಣಿದಾಡುತ್ತಾ ಹೊರಟ ಚಿರತೆ

ಭದ್ರಾವತಿ, ಜೂ.24:
ಭದ್ರಾವತಿ ನಗರದಲ್ಲಿ ಆತಂಕ ಸೃಷ್ಟಿಸಿ, ಬೀದಿ ನಾಯಿಗಳನ್ನು ತಿಂದು, ಮಹಿಳೆಯ ಮೇಲೆ ಅಟ್ಯಾಕ್ ಮಾಡಿ ಗಾಯಗೊಳಿಸಿ ಅರವಳಿಕೆ ಮದ್ದಿಗೆ ಸಿಲುಕಿದ್ದ ಚಿರತೆಯನ್ನು ಇಂದು ಕಾಡಿಗೆ ಬಿಡಲಾಗಿದ್ದು, ಸಖತ್ ಕುಶಿಯಿಂದ ಕಾಡೊಳಗೆ ಓಡಿದ ದೃಶ್ಯದ ವೀಡಿಯೋ ಸಖತ್ ವೈರಲ್ ಆಗಿದೆ.


ಎರಡು ದಿನಗಳ ಹಿಂದೆ ಭದ್ರಾವತಿಯ ವಿಐಎಸ್ಎಲ್ ಕ್ವಾಟ್ರಸ್’ನಲ್ಲಿ ಸೆರೆಸಿಕ್ಕ ಚಿರತೆಯನ್ನು ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಸುರಕ್ಷಿತವಾಗಿ ಬಿಡಲಾಯಿತು. ವಿಐಎಸ್ಎಲ್ ಕ್ವಾಟ್ರಸ್’ನಲ್ಲಿ ಸೆರೆಸಿಕ್ಕ 5-6 ವರ್ಷದ ಚಿರತೆಯನ್ನು ಬೋನಿನಲ್ಲಿ ಬಂಧಿಸಿ ಇರಿಸಲಾಗಿತ್ತು. ತ್ಯಾವರೆಕೊಪ್ಪದ ಸಿಂಹಧಾಮದಲ್ಲಿ ಇರಿಸಲಾಗುತ್ತೆ ಎಂದು ಮೊದಲು ಹೇಳಲಾಗಿತ್ತು.

ಆದರೆ, ಚಿರತೆಗೆ ಯಾವುದೇ ತೊಂದರೆಯಾಗದಂತೆ ಶೆಟ್ಟಿಹಳ್ಳಿ ಅರಣ್ಯದಲ್ಲಿ ಬಿಡಲಾಗಿದೆ.
ಅದನ್ನು ಬಿಡುವ ವೇಳೆಯಲ್ಲಿ ಚಿರತೆ ಆರೋಗ್ಯವಾಗಿತ್ತು ಎಂದು ವರದಿಯಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಚಿರತೆಯನ್ನು ಅರಣ್ಯಕ್ಕೆ ಬಿಡಲಾಯಿತು. ಭದ್ರಾವತಿಯ ವಿಐಎಸ್ಎಲ್ ಕ್ವಾಟ್ರಸ್’ನಲ್ಲಿ ಈ ಸೆರೆಸಿಕ್ಕ ಚಿರತೆಯನ್ನು ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಸುರಕ್ಷಿತವಾಗಿ ಬಿಡಲಾಯಿತು.
ಎರಡು ದಿನಗಳ ಹಿಂದೆ ಭದ್ರಾವತಿಯ ವಿಐಎಸ್ಎಲ್ ಕ್ವಾಟ್ರಸ್’ನ ಜನವಸತಿ ಪ್ರದೇಶದಲ್ಲಿ ಮುಂಜಾನೆಯೇ ಚಿರತೆ ಕಾಣಿಸಿಕೊಂಡಿತ್ತು. ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಸತತ ನಾಲ್ಕೂವರೆ ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಸೆರೆ ಹಿಡಿಯಲಾಗಿತ್ತು.

Exit mobile version