ಕೋವಿಡ್ ಸಂದರ್ಭದಲ್ಲಿ ವಿಶ್ವವೇ ಮೆಚ್ಚುವಂತೆ ಮೋದಿ ದೇಶಕ್ಕಾಗಿ ಕೆಲಸ ಮಾಡಿದ್ದಾರೆ. ದೇಶದ ಪ್ರತಿಯೋಬ್ಬ ಪ್ರಜೆಗೂ ಸಹ ಉಚಿತವಾಗಿ ವ್ಯಾಕ್ಸಿನ್ ಕೊಟ್ಟಿರುವುದು ಪ್ರಧಾನಿ ಮೋದಿ.
ಸಿದ್ದರಾಮಯ್ಯ ಮೋದಿ ವಿರುಧ್ದ ಇಲ್ಲ ಸಲ್ಲದ ಟೀಕೆ ಮಾಡುವುದರಲ್ಲೆ ಸಮಯ ಕಳೆಯುತ್ತಾರೆ ಟೀಕೆ ಮಾಡುವುದೇ ಇವರ ದಿನದ ಕೆಲಸ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನವರು ಸಿಧ್ದರಾಮಯ್ಯ ನವರ ವಿರುಧ್ದ ಕಿಡಿ ಕಾರಿದ್ದಾರೆ .
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಮೋದಿ ರಾಜ್ಯ ಭೇಟಿ ಬಗ್ಗೆ ಸಿದ್ದರಾಮಯ್ಯ ಟೀಕಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ , ನಾನು ಅವತ್ತೇ ಹೇಳಿದ್ದೆ ಸಿದ್ದರಾಮಯ್ಯನಿಗೆ ಹುಚ್ಚು ಹಿಡಿದಿದೆ ಈ ಹುಚ್ಚಿಗೆ ಬಿಡಿಸಲು ಪ್ರಪಂಚದಲ್ಲಿ ಎಲ್ಲಿಯೂ ಸಹ ಔಷಧಿ ಇಲ್ಲ, ಟೀಕೆ ಮಾಡುವ ಸಲುವಾಗಿಯೇ ಟೀಕೆ ಮಾಡಿದರೆ ನಮ್ಮ ದೇಶದಲ್ಲಿ ಅದಕ್ಕೆ ಔಷಧಿ ಇಲ್ಲ ಎಂದು ಹೇಳಿದರು.
ದೇಶದಲ್ಲಿ ಜನರೇ ಕಾಂಗ್ರೆಸ್ ನಾಯಕರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ರಾಜ್ಯದಲ್ಲೂ ಕೂಡ ಮುಂದಿನ ಬರುವ ಚುನಾವಣೆಯಲ್ಲಿಯೂ ಸಹ ಕಾಂಗ್ರೆಸ್‌ಗೆ ಪೂರ್ಣ ಔಷಧಿ ಕೊಟ್ಟು ದೇಶದಿಂದನೇ ಓಡಿಸುತ್ತಾರೆ ಇದರಲ್ಲಿ ಯಾವುದೇ ಸಂಶಯವಿಲ್ಲ . ಕಾಂಗ್ರೆಸ್ ಮುಟ್ಟಿದವರೆಲ್ಲಾ ನಾಶ ಆಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.