Site icon TUNGATARANGA

ಭದ್ರಾವತಿ/ಕೊನೆಗೂ ಬೋನಿಗೆ ಬಿದ್ದ ಚಿರತೆ!

ಭದ್ರಾವತಿ,
ಇಲ್ಲಿನ ವಿಐಎಸ್‌ಎಲ್ ಕ್ವಾಟ್ರಸ್ ಪ್ರದೇಶ ದಲ್ಲಿ ಚಿರತೆಯೊಂದು ಪ್ರತ್ಯಕ್ಷಗೊಂಡಿದ್ದು, ಸ್ಥಳೀಯರಲ್ಲಿ ಆತಂಕಗೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳು ನಡೆಸಿದ2 ಗಂಟೆಗಳ ನಿರಂತರ ಕಾರ್ಯಚರಣೆಯಲ್ಲಿ ಕೊನೆಗೂ ಚಿರತೆ ಸೆರೆಸಿಕ್ಕಿದೆ.


ಮುಂಜಾನೆ ಇಲ್ಲಿನ ವಿಐಎಸ್‌ಎಲ್ ಆಸ್ಪತ್ರೆ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಇದನ್ನು ಗಮನಿಸಿರುವ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ದ್ದಾರೆ. ಮಾಹಿತಿ ತಿಳಿದಾಕ್ಷಣ ಸ್ಥಳಕ್ಕೆ ದೌಡಾ ಯಿಸಿರುವ ಇಲಾಖೆ ಸಿಬ್ಬಂದಿಗಳು ಈ ಪ್ರದೇ ಶದಲ್ಲಿ ಚಿರತೆಗಾಗಿ ಹುಡುಕಾಟ ನಡೆಸುತ್ತಿದ್ದರು.
ಈ ಹಿಂದೆ ಕೆಲವು ಬಾರಿ ಕಾರ್ಖನೆಯ ಹಿಂಭಾಗ ಹಾಗೂ ಖಾಲಿ ಇರುವ ಕ್ವಾಟ್ರಸ್ಗಳಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಈಗ ಸದ್ಯ ಖಾಲಿ ಇರುವ ಕ್ವಾಟ್ರಸರ್ ಮನೆಗಳ ಪ್ರದೇಶದಲ್ಲಿ ಇದು ಕಾಣಿಸಿಕೊಂಡಿತ್ತು.


ಈ ಪ್ರದೇಶದಲ್ಲಿ ಸಾವಿರಾರು ಮಂದಿ ವಾಸಿಸುತ್ತಿದ್ದು, ಅಂಗಡಿ ಮುಂಗಟ್ಟು, ಶಾಲೆ, ದೇವಾಲಯ ಸಹ ಇದೆ. ಇಂತಹ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿರುವುದು ಆತಂಕಕ್ಕೆ ಕಾರಣವಾಗಿದ್ದು, ಸದ್ಯ ಇಡಿಯ ಪ್ರದೇಶದಲ್ಲಿ ಹುಡುಕಾಟ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಈ ಪ್ರದೇಶದಲ್ಲಿರುವ ಶಾಲೆಗೆ ರಜೆ ಘೋಷಣೆ ಮಾಡಲಾಗಿತ್ತು.


ಇನ್ನು, ಸ್ಥಳದಲ್ಲಿ ನೂರಾರು ಮಂದಿ ದೊಣ್ಣೆಗಳನ್ನು ಹಿಡಿದುಕೊಂಡು ಜಮಾಯಿಸಿದ್ದು, ಅರಣ್ಯ ಇಲಾಖೆಯ ಕಾರ್ಯಚರಣೆಯೂ ಸಹ ಮುಂದುವರೆದಿದೆ.

Exit mobile version