Site icon TUNGATARANGA

ನೀರಿನ ಸಮಸ್ಯೆ ಜೊತೆಗೆ ಸಿಬ್ಬಂಧಿಗಳ ಕೊರತೆ ಸರಿಪಡಿಸಿ: ರೇಖಾ ರಂಗನಾಥ್ ಖಡಕ್ ಎಚ್ಚರಿಕೆ

ಶಿವಮೊಗ್ಗ,
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನನಿತ್ಯ ನೀರಿನ ಸಮಸ್ಯೆ ಜೊತೆಗೆ ಸಿಬ್ಬಂದಿಗಳ ಕೊರತೆ ಯಿಂದ ನಗರದಲ್ಲಿ ನೀರಿಗೆ ಸಾರ್ವಜನಿಕರು ಹಾಹಾಕರಿಸುತ್ತಿದ್ದು,

ಜನ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ದಿನನಿತ್ಯ ಜನ ಶಾಪ ಹಾಕುವಂ ತಾಗಿದೆ. ನೀರು ಸರಬರಾಜು ಮಂಡಳಿಯ ದಿವ್ಯ ನಿರ್ಲಕ್ಷತನ ಸಮರ್ಪಕವಾಗಿ ನೀರು ಕೊಡದೆ ಹಾಗೂ ಪ್ರತಿ ವಾರ್ಡುಗಳಲ್ಲಿ ದುರಸ್ತಿ ಕಾರ್ಯ ಮಾಡದೆ ನುಣುಚಿಕೊಳ್ಳುವ ಅಧಿಕಾರಿಗಳು, ಕಾರಣ ಕೇಳಿದರೆ, ನಮ್ಮಲ್ಲಿ ಸಿಬ್ಬಂದಿ ಕೊರತೆಯಿದೆ, ಆದರಿಂದ ದುರಸ್ತಿ ಕಾರ್ಯ ಮಾಡಿಸಿಕೊಡಲು ಹಲವು ಸಮಯ ಹಿಡಿಯುತ್ತದೆ ಎಂದು ಹಾರಿಕೆ ಉತ್ತರ ನೀಡುವ ಅಧಿಕಾರಿಗಳು


ಉದಾಹರಣೆಗೆ ಹೊಸಮನೆ ಬಡಾವಣೆಯ ೩ ಮತ್ತು ೪ನೇ ಮುಖ್ಯ ರಸ್ತೆಯಲ್ಲಿ ಕೊಳೆ ನೀರು ಬರುತ್ತಿದೆ, ಒಂದೆಡೆ ನೀರೇ ಏರು ತ್ತಿಲ್ಲ ಎಂದು ಹೇಳಿ 10 ದಿನ ಕಳೆದರೂ ನೀರಿನ ಸಮಸ್ಯೆ ಬಗೆಹರಿಸದ ಅಧಿಕಾರಿ ಗಳು ಖುದ್ದು ಬಂದು ವೀಕ್ಷಿಸಿದ್ದರು. ದುರಸ್ತಿ ಮಾಡುವ ಕೆಲಸಗಾರರು ಇಲ್ಲದೇ ಸುಳ್ಳು ಹೇಳುವುದು ಇವರಿಗೆ ಪರಿಪಾಠ ವಾಗಿದೆ.


ನೀರು ಸರಬಾರಾಜು ಮಂಡಳಿಯಲ್ಲಿ ಎಲ್ಲ ಸ್ತರದ ಅಧಿಕಾರಗಳಿದ್ದು, ಈಗಾಗಲೇ ದುರಸ್ತಿ ಕೆಲಸಕ್ಕೆ ಗುತ್ತಿಗೆದಾರರಿಂದ ಮಾನವ ಸಂಪನ್ಮೂಲ ಪಡೆದು ಅವರ ಕೆಲಸ ಮುಗಿದ ಮೇಲೆ ಬಿಲ್ಲು ಪಾವತಿಸದೇ ಇರುವುದರಿಂದ ಯಾವೊಬ್ಬ ಗುತ್ತಿಗೆದಾರರೂ ಮಂಡಳಿ ಕೆಲಸವೆಂದರೆ ಓಡಿ ಹೋಗುವ ಪರಿಸ್ಥಿತಿ ಬಂದೊದಗಿದೆ.

ಇತ್ತ ಸಂಬಂಧಪಟ್ಟ ಅಧಿಕಾರಿಗಳು ಏಜೆನ್ಸಿ ಮುಖಾಂ ತರ ಹೊರಗುತ್ತಿಗೆ ಆಧಾರದ ಮೇಲೆ ಕೆಲಸಗಾರ ರನ್ನು ನೇಮಿಸಿಕೊಳ್ಳದೆ ಸಮರ್ಪಕವಾಗಿ ನೀರನ್ನು ಹಾಗೂ ದುರಸ್ತಿ ಕಾರ್ಯವನ್ನು ಸಾರ್ವಜನಿಕರಿಗೆ ನೀಡದೇ ಇರುವುದರಿಂದ ನಗರವ್ಯಾಪ್ತಿ ನೀರಿನ ಸಮಸ್ಯೆ ಉಲ್ಬಣವಾಗಿದ್ದು, ಕೂಡಲೇ ಮಾನ್ಯ ಜಿಲ್ಲಾಧಿಕಾರಿಗಳೇ ನೇರವಾಗಿ ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊ ಳ್ಳುತ್ತೇನೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಉಗ್ರ ಪ್ರತಿಭಟನೆ ಮಾಡಬೇಕಾದೀತೆಂದು ಎಚ್ಚರಿಸಿದ್ದಾರೆ.

Exit mobile version