Site icon TUNGATARANGA

ಪ್ರಾಚೀನ ವಿದ್ಯೆಯಾದ ಯೋಗವು ಇಂದು ಇಡೀ ವಿಶ್ವವನ್ನು ಒಂದು ಮಾಡುತ್ತಿದೆ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ,
ಜಾತಿ, ವರ್ಗ, ಧರ್ಮ, ದೇಶಗಳಾಚೆ ಬೆಳೆದಿರುವ ನಮ್ಮ ಪ್ರಾಚೀನ ವಿದ್ಯೆಯಾದ ಯೋಗವು ಇಂದು ಇಡೀ ವಿಶ್ವವನ್ನು ಒಂದು ಮಾಡುತ್ತಿದೆ ಎಂದು ಶಾಸಕರಾದ ಕೆ.ಎಸ್.ಈಶ್ವರಪ್ಪ ನುಡಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಸರ್ಕಾರಿ ಆಯು ರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆ ಶಿವಮೊಗ್ಗ, ಮಹಾನಗರಪಾಲಿಕೆ ಶಿವಮೊಗ್ಗ, ಕೆಜಿಎಎಂಒಎ, ಎನ್‌ಐಎಂಎ ಮತ್ತು ಎಎಫ್‌ಐ ಶಿವಮೊಗ್ಗ ಇವರ ಸಂಯುಕ್ತಾಶ್ರ ಯದಲ್ಲಿ ಸರ್ಕಾರಿ ಆಯುರ್ವೇದ ವೈದ್ಯ ಕೀಯ ಮಹಾವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿದ್ದ 8 ನೇ ಅಂತರಾ ಷ್ಟ್ರೀಯ ಯೋಗ ದಿನಾಚರಣೆ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿರು.


ಯೋಗಾಭ್ಯಾಸದಿಂದ ಶಾರೀರಿಕ ಮತ್ತು ಮಾನಸಿಕ ನೆಮ್ಮದಿ ಲಭಿಸುತ್ತದೆ. ಇದು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲದ ಕಾರಣ ಎಲ್ಲರನ್ನು ಒಂದುಗೂಡಿಸುತ್ತಿದೆ. ಯೋಗಾಭ್ಯಾಸ ದಿಂದ ಎಲ್ಲರೂ ಸದೃಢರಾಗಬೇಕೆಂದು ವಿಶ್ವ ಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ ನಿರ್ಣಯ ಕೈಗೊಳ್ಳಲು ಕಾರಣಕರ್ತರಾದವರು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು. ಇಂದು ೧೯೦ ರಾಷ್ಟ್ರಗಳು ಯೋಗ ದಿನಾ ಚರಣೆ ಆಚರಿಸುತ್ತಿವೆ ಎಂದ ಅವರು ನಾವು ಪ್ರತಿ ದಿನ ಯೋಗಾಭ್ಯಾಸವನ್ನು ಮಾಡುವ ಮೂಲಕ ಸದೃಢರಾಗಿರಬೇಕೆಂದು ಆಶಿಸಿದರು.


ವಿಧಾನ ಪರಿಷತ್ ಶಾಸಕರಾದ ಆಯನೂರು ಮಂಜುನಾಥ್ ಮಾತನಾಡಿ, ಯೋಗ ನಮ್ಮ ದೇಶದ ಅತ್ಯಂತ ಪ್ರಾಚೀನ ಶಾಸ್ತ್ರ. ದೇಹ ಮತ್ತು ಮನಸ್ಸನ್ನು ಸುಸ್ಥಿತಿ ಯಲ್ಲಿಡುವ ಮಹಾನ್ ವಿದ್ಯೆ. ಇಂತಹ ಯೋಗ ದಿನಾಚರಣೆಯನ್ನು ಸರ್ಕಾರ ದಿಂದ ಆಯೋಜಿಸುತ್ತಿರುವುದು ವಿಶೇಷ ವಾಗಿದೆ. ಆಯುರ್ವೇದ ಕೂಡ ವಿಶ್ವದ ಮೊಟ್ಟ ಮೊದಲ ವೈದ್ಯಕೀಯ ಕ್ಷೇತ್ರ. ಧನ್ವಂತರಿ, ಆರ್ಯಭಟರಂತಹವರ ಮೂಲಕ ಅನೇಕ ಆದಿಗಳನ್ನು ಕೊಟ್ಟಂ ತಹ ದೇಶ ಮಧ್ಯದಲ್ಲಿ ಕಳೆದುಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದೆ. ಇಂತಹ ವೇಳೆ ಯಲ್ಲಿ ನಮ್ಮ ಪ್ರಧಾನಿಯವರು ಮತ್ತೆ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ್ದಾರೆ. ನಾವು ಬಹಳ ವಿಷಯದಲ್ಲಿ ಮೊದಲಿಗರಾಗಿದ್ದು ವಿಶ್ವಗುರು ಆಗುವ ಅರ್ಹತೆ ಇದೆ ಎಂದರು.


ಯೋಗ ದಿನಾಚರಣೆ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಸ ಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ಸಾಮಾನ್ಯ ಯೋಗ ಶಿಷ್ಟಾಚಾರದಂತೆ ಯೋಗ ತರಬೇತುದಾರ ಗೋಪಾಲಕೃಷ್ಣ ಎಸ್ ರವರು ಯೋಗಾಭ್ಯಾಸ ಮಾಡಿಸಿದರು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ, ಅಪರ ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಯೋಗಾಭ್ಯಾ ಸದಲ್ಲಿ ಪಾಲ್ಗೊಂಡಿದ್ದರು. ಈಶ್ವರೀಯ ಸಂಸ್ಥೆಯ ಮುಖ್ಯಸ್ಥೆ ಅನುಸೂಯಕ್ಕನವರು ಧ್ಯಾನದ ಮಹತ್ವ ತಿಳಿಸಿ, ಧ್ಯಾನ ಮಾಡಿಸಿದರು.


ಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಜಿ.ಪಂ ಮಾಜಿ ಸದಸ್ಯ ಕೆ.ಇ ಕಾಂತೇಶ್, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ, ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಎಂ.ಎಸ್.ದೊಡ್ಮನಿ, ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಈಶ್ವರೀಯ ಸಂಸ್ಥೆ ಸೇರಿದಂತೆ ವಿವಿಧ ಯೋಗ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.

Exit mobile version