Site icon TUNGATARANGA

ಅಗ್ನಿಪಥ್ ಯೋಜನೆಗೆ ಯುವ ಕಾಂಗ್ರೆಸ್ ವಿರೋಧ ರೈಲು ತಡೆ ಚಳವಳಿ ನಡೆಸಿದ 40 ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಮುಖಂಡರ ಬಂಧನ

ಶಿವಮೊಗ್ಗ, ಜೂ
ದೇಶದ ಭದ್ರತೆಗೆ ಅಪಾಯ, ಯುವಜ ನರನ್ನು ನಿರುದ್ಯೋಗದ ಕೂಪಕ್ಕೆ ತಳ್ಳುತ್ತಿರುವ “ಅಗ್ನಿಪಥ್ “ಯೋಜನೆ ವಿರೋಧಿಸಿ ಇಂದು ಜಿಲ್ಲಾ ಯುವ ಕಾಂಗ್ರೆಸ್ ನಿಂದ ರೈಲು ತಡೆ ಚಳವಳಿ ನಡೆಸಿದ ೪೦ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ.


ದೇಶದ ಯುವಜನರನ್ನು ನಿರುದ್ಯೋ ಗದ ಕೂಪಕ್ಕೆ ತಳ್ಳುವ ಮತ್ತು ದೇಶದ ಭದ್ರತೆಗ ಅಪಾಯಕಾರಿಯಾಗಬಲ್ಲ ’ಅಗ್ನಿಪಥ್’ ಎಂಬ ಯೋಜನೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ತಕ್ಷಣ ರದ್ದುಪಡಿಸಬೇಕು. ಈಗಿರುವ ಯಥಾಸ್ಥಿತಿಯಲ್ಲಿಯೇ ಸೇನಾ ನೇಮಕಾತಿ ಯೋಜನೆಯಡಿಯಲ್ಲಿಯೇ ಸೈನಿಕರ ನೇಮಕಾತಿ ನಡೆಯಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದ್ದಾರೆ.


ಈಗಾಗಲೇ ಕರಾಳ ಕೃಷಿ ಕಾಯ್ದೆಗಳನ್ನು ತರಲು ಹೋಗಿ ದೇಶದ ಅನ್ನದಾತ ರೈತ ರನ್ನು ಬಲಿಕೊಡಲು ಹೊರಟಿರುವ ಜನವಿರೋಧಿ ಕೇಂದ್ರ ಬಿಜೆಪಿ ಸರ್ಕಾರ, ಈಗ ಸೇನಾ ನೇಮಕಾತಿಯಲ್ಲಿ “ಅಗ್ನಿಪಥ್” ಎಂಬ ಅವೈಜ್ಞಾನಿಕ ಯೋಜನೆಯನ್ನು ಘೋಷಿಸಿ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವದನ್ನು ಖಂಡನೀಯ ಎಂದರು.


ನಗರದ ರೈಲ್ವೆ ನಿಲ್ದಾಣದಲ್ಲಿ ರೈಲು ತಡೆ ಚಳವಳಿ ನಡೆಸಲಾಗಿದ್ದು, ಸಂದರ್ಭದಲ್ಲಿ40 ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಕಾರ್ಯ ಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.


ಈ ಸಂದರ್ಭದಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್, ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿಯ ವರೇ, ಉದ್ಯೋಗಾವಕಾಶದ ಬಾಗಿಲುಗಳನ್ನು ಒಂದೊಂದಾಗಿ ಮುಚ್ಚುತ್ತಾ ಇರುವ ನಿಮಗೆ ಪ್ರತಿವರ್ಷ ಎರಡು ಕೋಟಿ ನಿರುದ್ಯೋಗಿಗ ಳನ್ನು ಸೃಷ್ಟಿಸುವ ಗುಪ್ತಾ ಅಜೆಂಡಾ ಏನಾದರೂ ಇದೆಯೇ ಎಂದು ಪ್ರಶ್ನಿಸಿದರು.


ಉದ್ಯೋಗದ ಅಭದ್ರತೆ, ಭವಿಷ್ಯದ ಬಗೆಗಿನ ಭಯ ಮತ್ತು ವೃತ್ತಿ ಬಗೆಗಿನ ಅತೃಪ್ತಿಯನ್ನು ಹುಟ್ಟುಹಾಕಲಿರುವ ಯೋಜನೆಯಡಿ ನೇಮಕಗೊಂಡ ಸೈನಿಕರು ತಮ್ಮ ವೃತ್ತಿಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಲು ಸಾಧ್ಯವೇ? ಶತ್ರುಗಳ ಜೊತೆ ಕಾದಾಡಲಿರುವ ಸೈನಿಕರ ಈ ಮನಸ್ಥಿತಿ ಅಪಾಯಕಾರಿಯಲ್ಲವೇ ಎಂದು ಪ್ರಜ್ಞಾವಂತ ಯುವಕರು ಈ ಸರ್ಕಾರಕ್ಕೆ ಛೀಮಾರಿ ಹಾಕುತಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ವಿಧಾನಪರಿಷತ್ ನ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಪ್ರವೀಣ್ ಕುಮಾರ್, ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್, ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ. ಲೋಕೇಶ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ನ ಎಸ್. ಕುಮಾರೇಶ್, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಈ.ಟಿ. ನಿತಿನ್ ಭದ್ರಾವತಿ ಅಧ್ಯಕ್ಷ ವಿನೋದ್ ಕುಮಾರ್, ಪದಾಧಿಕಾರಿಗಳಾದ ಎಂ. ರಾಹುಲ್, ನದೀಮ್, ಎಂ. ರಾಕೇಶ್, ಇರ್ಫಾನ್, ಸದ್ದಾಮ್, ಚಿನ್ಮಯ್, ಮೋಹನ್ ಸೋಮಿನಕೊಪ್ಪ ಮತ್ತಿತರರಿದ್ದರು.

ಮೂರ್ಖ ಯೋಜನೆ: ಮಾಜಿಶಾಸಕ ಕೆ.ಬಿ.ಪ್ರಸನ್ನಕುಮಾರ್
ಶಿವಮೊಗ್ಗ, ಜೂ
ದೇಶದ ಯುವ ಜನತೆಗೆ ದೇಶ ಸೇವೆಯ ಅವಕಾಶದ ಜೊತೆಗೆ ಉದ್ಯೋಗದ ಅವಕಾಶವನ್ನು ಕಲ್ಪಿಸಿ ಕೊಡುತ್ತಿದ್ದ ಮಿಲಿಟರಿ ನೇಮಕಾತಿಯನ್ನು ಗುತ್ತಿಗೆ ನೌಕರ ನೇಮಕಾತಿ ಮಟ್ಟಕ್ಕೆ ಇಳಿಸಿ ಅಗ್ನಿಪಥ ಯೋಜನೆ ಜಾರಿಗೊಳಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ಕ್ರಮ ಖಂಡನೀಯವಾಗಿದ್ದು, ಇದು ದೇಶದ ಸೈನ್ಯವನ್ನು ದುರ್ಬಲಗೊಳಿಸುವ ಮತ್ತು ನಿರುದ್ಯೋಗವನ್ನು ಹೆಚ್ಚಿಸುವ ಮೂರ್ಖ ಯೋಜನೆಯಾಗಿದೆ ಎಂದು ಮಾಜಿ ಶಾಸಕ, ಕೆ.ಬಿ. ಪ್ರಸನ್ನಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಕ್ಷಣ ಸರ್ಕಾರ ಅಗ್ನಿಪಥಕ್ಕೆ ಅಗ್ನಿವೀರರನ್ನು ಆಯ್ಕೆ ಮಾಡುವ ಕ್ರಮವನು ಕೈಬಿಟ್ಟು ಮೊದಲಿನಂತಯೇ ಸೈನಿಕರ ನೇಮಕಾತಿ ಮಾಡುವುದರ ಮೂಲಕ ದೇಶದ ಯುವಕರ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಾಲ್ಕು ವರ್ಷಗಳ ಕಾಲ ಸೈನಿಕರನ್ನು ದುಡಿಸಿಕೊಂಡು ನಂತರ ಅವರನ್ನು ಯಾವುದೇ ಜೀವನ ಭದ್ರತೆಯಿಲ್ಲದೆ ಬೀದಿಗೆ ತಳ್ಳುವುದು ನಿರ್ಲಜ್ಜತನದ ಯೋಜನೆಯಾಗಿದೆ. ಅಗ್ನಿವೀರರಿಗೆ ಬಿಜೆಪಿ ಕಛೇರಿಯಲ್ಲಿ ವಾಚ್ ಮನ್ ಕೆಲಸ ಕೊಡುವುದಾಗಿ ಕೇಂದ್ರ ಸಚಿವರೇ ಹೇಳುತ್ತಿರುವುದನ್ನು ಗಮನಿಸಿದರೆ ಅಧಿಕಾರದ ಲೋಲುಪತೆಯಲ್ಲಿ ಮರೆಯುತ್ತಿರುವ ಪ್ರಧಾನಿ ಮೋದಿ, ಗೃಹಮಂತ್ರಿ ಅಮಿತ್ ಶಾ ಜೋಡಿ ದೇಶವನ್ನು ಅನಾಹುತದ ಅಂಚಿಗೆ ತಂದು ನಿಲ್ಲಿಸುತ್ತಿರುವುದು ಖಾತ್ರಿಯಾಗಿದೆ ಎಂದರು.
ದೇಶದ ಭಧ್ರತೆಯನ್ನು ಅಪಾಯಕ್ಕೆ ಒಡ್ಡುತ್ತಿರುವ ನೀಚತನದ ಕೆಲಸ ಇದಾಗಿದೆ. ಈಗಾಗಲೇ ಸಾಂವಿಧಾನಿಕ ಸಂಸ್ಥೆಗಳನ್ನೆಲ್ಲ ಹಾಳುಗೆಡವಿರುವ, ಸರ್ಕಾರಿ ಸಂಸ್ಥೆಗಳನ್ನೆಲ್ಲ ಮೂರು ಕಾಸಿಗೆ ಮಾರಾಟ ಮಾಡಿರುವ ಬಿಜೆಪಿ ಸರ್ಕಾರ ಇದೀಗ ದೇಶದ ಹೆಮ್ಮೆಯ ಸೈನ್ಯ ವರ್ಚಸ್ಸಿಗೆ ಧಕ್ಕೆ ತರುತ್ತಿರುವುದು ಖಂಡನಾರ್ಹ ಎಂದು ಪ್ರಸನ್ನಕುಮಾರ್ ತಿಳಿಸಿದ್ದಾರೆ.

Exit mobile version