Site icon TUNGATARANGA

Shimoga/ ಗುರುಕುಲ ಮಾದರಿಯಲ್ಲಿ ಗುರುಪುರ ಬಿಜಿಎಸ್ ವಿದ್ಯಾಸಂಸ್ಥೆ


ರಾ.ಹ ತಿಮ್ಮೇನಹಳ್ಳಿ (ಶಿವಮೊಗ್ಗ)

ಶಿವಮೊಗ್ಗ ಜಿಲ್ಲೆ ಕೇವಲ ಸಮಾಜವಾದಿ ಚಳುವಳಿ ಕಾರ್ಮಿಕ ಚಳುವಳಿ ಹಾಗೂ ಸಾಂಸ್ಕೃತಿಕವಾಗಿ ಜೀವಂತವಾಗಿರುವ ಜಿಲ್ಲೆ, ಇಂಥಹ ಜಿಲ್ಲೆಯಲ್ಲಿ ಶಿಕ್ಷಣ ಮತ್ತು ಗುರುಕುಲ ಮಾದರಿಯಲ್ಲಿ ಅನೇಕ ಪ್ರತಿಭಾನ್ವಿತರನ್ನು ನೀಡುವಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥಯಾದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಠ್‌ನ ಸಂಸ್ಥೆಗಳಲ್ಲೊಂದು ಬಿಜಿಎಸ್ ವಿದ್ಯಾಸಂಸ್ಥೆ ಗುರುಪುರ. ಈ ಸಂಸ್ಥೆ ಶಿಕ್ಷಣ ರಂಗದಲ್ಲಿ ಉತ್ತಮ ಸಾಧನೆ ಮಾಡುವ ಉದ್ದೇಶದಿಂದ ಪ್ರಾರಂಭವಾದ ವಿದ್ಯಾಸಂಸ್ಥೆ.


ಪುರಾಣ ಪ್ರಸಿದ್ಧವಾದ ಪ್ರಾಚೀನ ಗುರು ಪರಂಪರೆಯ ಪುಣ್ಯಕ್ಷೇತ್ರವಾಗಿರುವ ಶ್ರೀ ಆದಿಚುಂಚನಗಿರಿಯ ನಾಥ ಸಂಪ್ರದಾಯದ ೧೯೭೪ ರಲ್ಲಿ ಶ್ರೀ ಮಠದ ಸಿದ್ಧ ಸಿಂಹಾಸನಾಧೀಶ್ವರರಾದ ಪರಮಪೂಜ್ಯರಾದ ಜನಸೇವೆಯನ್ನೇ ಈಶಸೇವೆಯೆಂದು ಭಾವಿಸಿದ ೭೧ ನೇ ಗುರುಗಳಾದ ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಪದ್ಮಭೂಷಣ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳವರ ಹಾಗೂ ೭೨ನೇ ಪೀಠಧಿಪತಿಗಳಾದ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಇಚ್ಛೆಯಂತೆ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಗುರುಪುರ /ಪುರಲೆ ಆದಿಚುಂಚನಗಿರಿ ಮಠದಲ್ಲಿ ೨೦೧೦-೧೧ನೇ ಸಾಲಿನಲ್ಲಿ ವಿದ್ಯಾಸಂಸ್ಥೆಯನ್ನು ಪ್ರಾರಂಭಿಸಿದ್ದು ಜಿಲ್ಲೆಯ ಜನತೆಗೆ ಉತ್ತಮ ಶಿಕ್ಷಣವನ್ನು ನೀಡಬೇಕೆಂಬ ಉದ್ದೇಶದಿಂದ ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದ ವಿದ್ಯಾಸಂಸ್ಥೆ ಜಿಲ್ಲೆಯಲ್ಲಿ ಒಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬೆಳೆದು ನಿಂತಿದೆ. ಶ್ರೀ ಆದಿಚುಂಚನಗಿರಿ ವಿದ್ಯಾಪೀಠವು ಇಂದು ದಶಮಾನೋತ್ಸವನ್ನು ಆಚರಿಸಲು ಸಜ್ಜಾಗಿ ನಿಂತಿರುವ ವಿದ್ಯಾಸಂಸ್ಥೆ. ನಗರದ ವಿವಿಧ ಕಡೆಗಳಲ್ಲಿ ತನ್ನದೇ ಆದ ಶಾಖೆಗಳನ್ನು ಹೊಂದಿ ಶಿಕ್ಷಣವನ್ನು ಪಸರಿಸುತ್ತಾ ಬಂದಿದೆ.

ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು


ವಿದ್ಯಾಸಂಸ್ಥೆ ಪ್ರಾರಂಭಗೊಂಡಾಗ ಇದ್ದದ್ದು ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ. ಆದರೆ ಇಂದು ಶಿವಮೊಗ್ಗದ ಗುರುಪುರದ ಶಾಲೆಯೊಂದರಲ್ಲಿಯೇ ಸುಮಾರು ೭೦೦ ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದಾರೆ ಎಂದರೆ ಅಚ್ಚರಿಯ ವಿಷಯವೇ ಆಗಿದೆ.
ಬಿಜಿಎಸ್ ಸಂಸ್ಥೆಯು ಉತ್ತಮ ಹಾಗೂ ಅನುಭವಿ ಶಿಕ್ಷಕರನ್ನು ಹೊಂದಿದ್ದು ಉತ್ತಮ ಪಾಠ ಪ್ರವಚನಗಳನ್ನು ಮಕ್ಕಳಿಗೆ ನೀಡುತ್ತಾ ಬಂದಿದೆ. ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ ಎಂಬ ವಿವೇಕಾನಂದರ ಕರೆಯನ್ನೇ ಸದಾ ತಮ್ಮ ಕಿವಿಯಲ್ಲಿ ಗುಯಗುನಿಕೊಳ್ಳುತ್ತಾ ವಿದ್ಯಾರ್ಥಿಗಳು ಹಿಂದೆ, ಗುರುವನ್ನು ಮುಂದೆ ಗುರುಯನ್ನಿಟ್ಟುಕೊಂಡು ಸಾಧನೆಗೆ ಸದಾ ಸನ್ನದ್ಧರಾಗಿರುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಪರಿಪೂರ್ಣ ಗುಣಗಳಿಂದ ರೂಪಿಸಿ ಆತನನ್ನು ಒಬ್ಬ ಪ್ರಜೆಯನ್ನಾಗಿ ಮಾಡುವುದೇ ವಿದ್ಯಾಭ್ಯಾಸದ ನಿಜವಾದ ಗುರಿ ಎಂಬುದು ಶಿಕ್ಷಣ ಸಂಸ್ಥೆಯ ಧ್ಯೇಯವಾಗಿದೆ. ಈ ವಿದ್ಯಾಸಂಸ್ಥೆಯ ವಿದ್ಯಾರ್ತಿಗಳು ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡುತ್ತಾ ಹೆಜ್ಜೆ ಹಾಕಿದೆ.


ಶಿಕ್ಷಣ ಕ್ಷೇತ್ರದಲ್ಲಂತೂ ಸದಾ ಮುಂದಿರುವ ಬಿಜಿಎಸ್ ಸಂಸ್ಥೆಯು ಪಠ್ಯೇತರ ಚಟುವಟಿಕೆಗಳಲ್ಲಿಯೂ ಅಷ್ಟೇ ಮುಂದು. ವಿದ್ಯಾಸಂಸ್ಥೆ ಪ್ರಾರಂಭಗೊಂಡು ಕಡಿಮೆ ಅವಧಿಯಲ್ಲಿಯೇ ನೂರಕ್ಕೆ ನೂರು ಫಲಿತಾಂಶ ಪಡೆದ ಶಾಲೆಯಾಗಿದೆ. ಕ್ರೀಡೆ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುತ್ತದೆ. ಏಕಾಂಗಿ ಬದುಕಿನಿಂದ ಹೊರತರುತ್ತದೆ. ಸೋಲು ಗೆಲುವನ್ನು ಏಕ ರೀತಿಯಲ್ಲಿ ಸ್ವೀಕರಿಸುವ ಗುಣ ಬೆಳೆಸುತ್ತದೆ ಎಂಬ ತತ್ವವನ್ನು ನಂಬಿರುವ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳನ್ನು ಈ ನಿಟ್ಟಿನಲ್ಲಿ ಸಿದ್ಧಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೈನಂದಿನ ಪಾಠದ ಭೋದನೆಯ ಜೊತೆಜೊತೆಯಲ್ಲಿಯೇ ಪಠ್ಯೇತರ ಚಟುವಟಿಕೆಯ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದ್ದು ಉತ್ತಮ ಹಂತವನ್ನು ತಲುಪುವಲ್ಲಿ ಸಫಲರಾಗಿದ್ದಾರೆ.


ಕ್ರೀಡಾ ಸಾಧನೆ


ಶ್ರೀ ಆದಿಚುಂಚನಗಿರಿ ವಿದ್ಯಾ ಸಂಸ್ಥೆಯೂ ಕೇವಲ ಶಿಕ್ಷಣ ರಂಗದಲ್ಲಿ ಅಷ್ಟೇ ಅಲ್ಲದೆ ಕ್ರೀಡಾ ರಂಗಲ್ಲಿಯೂ ಸಹ ತನ್ನ ಅದ್ವಿತೀಯ ಸಾಧನೆಯನ್ನು ಮೆರೆದಿದೆ. ಬರೀ ರಾಜ್ಯ ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ನೀಡುವಲ್ಲಿ ಹಿಂದೆ ಬಿದಿಲ್ಲ. ಷೆಟಲ್ ಬ್ಯಾಡ್ಮಿಂಟನ್‌ನಲ್ಲಿ ಪ್ರತಿಭಾವಂತ ಕ್ರೀಡಾಪಟುವಾದ ಸ್ನೇಹಾ ಎಸ್ ಮಹಾರಾಷ್ಟ್ರದಲ್ಲಿ ನಡೆದ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿರುತ್ತಾರೆ. ಅದೇ ರೀತಿ ಪವನ್, ಪುನೀತ್, ಸಚಿನ್, ಸಂಜಯ್ ಮತ್ತು ಸಾನಿಯಾ ಇನ್ನು ಮುಂತಾದ ಕ್ರೀಡಾ ಪಟುಗಳು ಭಾಗವಹಿಸಿರುತ್ತಾರೆ. ೨೦೧೮-೧೯ನೇ ಸಾಲಿನಲ್ಲಿ ನಡೆದ ಜಿಲ್ಲಾ ಹಾಗೂ ಬೆಂಗಳೂರು ವಿಭಾಗ ಮತ್ತು ರಾಜ್ಯ ಮಟ್ಟದ ಹ್ಯಾಂಡ್ ಬಾಲ್, ಥ್ರೋ ಬಾಲ್, ಬಾಸ್ಕೆಟ್ ಬಾಲ್, ವಾಲಿಬಾಲ್, ಕರಾಟೆ, ಚೆಸ್, ಅಥ್ಲೆಟಿಕ್ಸ್ ಮತ್ತು ಯೋಗಾಸನ ಕ್ರೀಡೆಗಳಲ್ಲಿ ಉತ್ತಮ ಸಾಧನೆಯೊಂದಿಗೆ ಕ್ರೀಡಾ ಪ್ರತಿಭೆಗಳಾಗಿ ಹೊರಹೊಮ್ಮಿದ್ದಾರೆ.
ಕರಾಟೆಯಲ್ಲಿ ಮಲ್ಲಿಕಾರ್ಜನ್ ಲಿಖಿತ್ ರಾಷ್ಟ್ರಮಟ್ಟದ ವಿವಿಧ ಕಡೆಗಳಲ್ಲಿ ಭಾಗವಹಿಸಿ ಉತ್ತಮ ಆಟದ ಪ್ರದರ್ಶನ ನೀಡಿ ಬಂಗಾರ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಸಂಸ್ಥೆಯ ಮಡಿಲಿಗೆ ತಂದುಕೊಟ್ಟಿರುತ್ತಾರೆ. ಚಂದನ್ ಎಸ್ ಗುಂಡು ಎಸೆತದಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟದಲ್ಲಿ ಭಾಗವಹಿಸಿರುತ್ತಾನೆ.
ಕ್ರೀಡೆ ಬೆಳೆಯಲು ಕಾರಣ
ಯುವ ಜನಾಂಗದಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಲು ಯೋಗ್ಯ ಮಾರ್ಗದರ್ಶನ ಮತ್ತು ತರಬೇತಿ ನೀಡಿ ಅವರ ಬದುಕನ್ನು ರೂಪಿಸುವ ಪ್ರಯತ್ನಕ್ಕಾಗಿ ಶಿವಮೊಗ್ಗ್ಗ ನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಪೂಜ್ಯರಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಶಿವಮೊಗ್ಗ ನಗರದ ಅನೇಕ ಸಂಸ್ಥೆಗಳ ಕ್ರೀಡಾ ತಜ್ಙರ ಮತ್ತು ತರಬೇತುದಾರರ ಒಂದು ತಂಡ ಅಸ್ತಿತ್ವಕ್ಕೆ ಬಂದಿರುವುದರಿಂದ ಇವತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ.


ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಯಲ್ಲೂ, ಸಂಗೀತ ಕ್ಷೇತ್ರಗಳಲ್ಲಿಯೂ ತುತ್ತತುದಿಗೆ ಏರಿದ್ದಾರೆ. ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಂಡಿದ್ದಾರೆ. ತಮ್ಮ ಮಕ್ಕಳ ಬಗ್ಗೆ ನೂರಾರು ಕನಸುಗಳನ್ನು ಹೊತ್ತ ಪೋಷಕರು ಬಿಜಿಎಸ್ ವಿದ್ಯಾಸಂಸ್ಥೆಯ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟುಕೊಂಡು ತಮ್ಮ ಮಕ್ಕಳನ್ನು ಸೇರಿಸಿ ಕೃತಾರ್ಥರಾಗಿದ್ದಾರೆ.
ವಿಶಾಲವಾದ ಮೈದಾನ, ಸುಂದರವಾದ ಹಚ್ಚ ಹಸಿರಿನಿಂದ ಕೂಡಿದ ಪರಿಸರದ ಮಧ್ಯ ವಿಶಾಲವಾದ ಸುಸಜ್ಜಿತವಾದ ಶಾಲಾ ಕಟ್ಟಡದಲ್ಲಿ ನುರಿತ ಶಿಕ್ಷಕರು ಮನೆ ಪಾಠದ ನಮೂನೆಯಲ್ಲೆ ಕಲಿಕೆಗೆ ಅನುಗುಣವಾಗಿ ಪ್ರತಿಯೊಬ್ಬರನ್ನು ವೈಯಕ್ತಿಕವಾಗಿ ಪರಿಗಣಿಸುವ ಶಿಕ್ಷಕರು ಶಾಲೆಯ ಪಠ್ಯ ಕ್ರಮಗಳ ಮರು ಭೋಧನೆಯಲ್ಲಿ ತೊಡಗುತ್ತಾರೆ. ಹಾಗೆಯೇ ಮುಂದುವರೆದು ಶಿಕ್ಷಕರು ಇಲ್ಲಿ ಸಂಜೆ ೬ ರಿಂದ ೭ ರವರೆಗೆ ವಿಶೇಷ ತರಗತಿಗಳನ್ನು ನೀಡುತ್ತಾರೆ.
ಮಗ್ಗಿ ಸರಳ ಬಾಷೆ ಕಲಿಕೆಗೆ ಮೊದಲಿನಿಂದಲೂ ಆದ್ಯತೆ ನೀಡುತ್ತಾ ಬರುವ ಇಲ್ಲಿನ ಶಿಕ್ಷಕರ ವರ್ಗ ಇಲ್ಲಿನ ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ದಿನೇ ದಿನೇ ಉತ್ತಮಗೊಸಿಸುವ ಮಹತ್ತರ ಜವಾಬ್ದಾರಿಯನ್ನು ಹೊಂದಿದ್ದಾರೆ. ವಿಶೇಷವಾಗಿ ಓದಿನ ಜೊತೆಗೆ ಶಿಸ್ತಿಗೆ ಬಹಳ ಪ್ರಾಮುಕೈತೆಯನ್ನು ಕೊಡುವ ಸಂಸ್ಥೆ. ಜಿಲ್ಲಾ ಮಟ್ಟದ ವಿವಿಧ ಕ್ರೀಡೆಗಳನ್ನು ನಡೆಸಿಕೊಟ್ಟು ಅದೇ ರೀತಿ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟ ಸಂಸ್ಥೆಯಾಗಿರುತ್ತದೆ.
ಪ್ರತಿಯೊಬ್ಬ ವಿದ್ಯಾರ್ಥಿಗೂ ಒಳ್ಳೆಯ ತಂದೆ ತಾಯಿ ಇದ್ದರೆ ಸಾಲದು, ಒಳ್ಳೆಯ ಗುರುಗಳು, ಒಳ್ಳೆಯ ಶಾಲೆ, ಒಳ್ಳೆಯ ವಾತಾವರಣ ಬೇಕೇ ಬೇಕು. ಒಳ್ಳೆಯ ಶಾಲೆಯ ಎಲ್ಲಾ ಗುಣಲಕ್ಷಣಗಳನ್ನು, ಸಂಪನ್ಮೂಲ ವ್ಯಕಿಗಳನ್ನು, ಅತ್ಯುತ್ತಮ ಉತ್ಸಾಹಿ ಶಿಕ್ಷಕ ವೃಂದ ಅದಕ್ಕೆ ಪೂರಕವಾದ ಆಡಳಿತ ಮಂಡಳಿಯ ಸಹಯೋಗದೊಂದಿಗೆ ಶಿವಮೊಗ್ಗೆಯ ತಪೋಭೂಮಿಯ ಸ್ಥಳದಲ್ಲಿ ಹುಟ್ಟಿಕೊಂಡ ಶಾಲೆಯೇ ಬಿಜಿಎಸ ವಿದ್ಯಾಲಯ.
ಪ್ರಾಥಮಿಕ ಶಾಲಾ ವಿಭಾಗದಿಂದ ಸಮಗ್ರ ಬೇಸಾಯ ಪದ್ಧತಿ ವಿಜ್ಙಾನ ವಸ್ತು ಪ್ರದರ್ಶನ ಮಾದರಿ ತಯಾರಿಕೆಯಲ್ಲಿ ಮತ್ತು ಪ್ರೌಢಶಾಲಾ ವಿಭಾಗದಿಂದ ಸ್ಮಾರ್ಟ್ ಸಿಟಿ ಎಂಬ ವಿಜ್ಙಾನ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡು ಜಿಲ್ಲೆಯಿಂದ ಆಯ್ಕೆಯಾಗಿ ರಾಜ್ಯಮಟ್ಟದಲ್ಲಿ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ತಮ್ಮ ಸಾಧನೆಯನ್ನು ಇಮ್ಮಡಿಗೊಳಿಸಿದ್ದಾರೆ.


ಶಿಕ್ಷಣ ರಂಗದಲ್ಲಿ ಸಾಧನೆ


೨೦೧೫-೧೬ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಯಾದ ಅಭಿಲಾಷ್ ಹೆಚ್ ಎಂ ೬೦೮ ಅಂಕ ಪಡೆದು ಶಾಲೆಗೆ ಮೊದಲಿಗನಾಗಿರುತ್ತಾನೆ. ಶೇಕಡವಾರು ೯೮ ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ. ೨೦೧೬-೧೭ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿನಿಯಾದ ಪ್ರಿಯಾ ವಿ ೫೯೮ ಅಂಕ ಪಡೆದು ಶಾಲೆಗೆ ಮೊದಲಿಗನಾಗಿರುತ್ತಾನೆ. ಶೇಕಡವಾರು ೮೬.೪೮ ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ. ೨೦೧೭-೧೮ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿನಿಯಾದ ದೀಪಿಕಾ ಇ ೫೬೮ ಅಂಕ ಪಡೆದು ಶಾಲೆಗೆ ಮೊದಲಿಗನಾಗಿರುತ್ತಾನೆ. ಶೇಕಡವಾರು ೯೬.೫೫ ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ. ೨೦೧೮-೧೯ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಯಾದ ತರುಣ್ ಎಂ ೬೧೧ ಅಂಕ ಪಡೆದು ಶಾಲೆಗೆ ಮೊದಲಿಗನಾಗಿರುತ್ತಾನೆ. ಶೇಕಡವಾರು ೯೩.೫೪ ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತಂದ ಪ್ರತಿಭಾವಂತ ವಿದ್ಯಾರ್ಥಿಗಳಾಗಿರುತ್ತಾರೆ.


೨೦೧೯-೨೦ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿನಿಯಾದ ಶುಭಾ ಎಸ್ ೬೧೧ ಅಂಕ ಪಡೆದು ಶಾಲೆಗೆ ಮೊದಲಿಗಳಾಗಿರುತ್ತಾಳೆ. ಅದೇ ರೀತಿ ೧೨ ಜನ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, ೨೮ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, ದ್ವಿತೀಯ ದರ್ಜೆಯಲ್ಲಿ ಒಬ್ಬ ವಿದ್ಯಾರ್ಥಿ ತೇರ್ಗಡೆ ಹೊಂದಿದ್ದು, ಶೇಕಡಾ ೧೦೦ ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತಂದ ಪ್ರತಿಭಾವಂತ ವಿದ್ಯಾರ್ಥಿಗಳಾಗಿರುತ್ತಾರೆ.

೨೦೨೦-೨೧ರ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಪಡೆದ ಪ್ರತಿಭಾವಂತ ವಿದ್ಯಾರ್ಥಿನಿಯಾದ ಶೀಬಾ ಮರಿಯಂ೬೦೩ ಅಂಕ ಪಡೆದು ಶಾಲೆಗೆ ಮೊದಲಿಗಳಾಗಿರುತ್ತಾಳೆ.
ಅದೇ ರೀತಿ೧೫ ಜನ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, ೩೧ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ದ್ವಿತೀಯ ದರ್ಜೆಯಲ್ಲಿ ಒಬ್ಬ ವಿದ್ಯಾರ್ಥಿ ತೇರ್ಗಡೆ ಹೊಂದಿದ್ದು, ಶೇ.೧೦೦ ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತಂದ ಪ್ರತಿಭಾವಂತ ವಿದ್ಯಾರ್ಥಿಗಳಾಗಿರುತ್ತಾರೆ.
ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಸಾನಿಧ್ಯದಲ್ಲಿ ಭಜನೆ, ಪ್ರಾರ್ಥನೆ, ಧ್ಯಾನ, ಪೂಜೆ ಇತ್ಯಾದಿಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ವಿದ್ಯಾರ್ಥಿಗಳ ಓದು, ಕ್ರೀಡೆ, ಅವರ ಸಾಂಸ್ಕೃತಿಕ ಪ್ರತಿಭೆಗಳ ಹಿಂದೆ ಸ್ವಾಮೀಜಿಯವರು ಬೆನ್ನೆಲುಬಾಗಿ ನಿಂತಿರುವುದು ಈ ಶಾಲೆಯ ಒಂದು ವಿಶೇಷವೇ ಹೌದು.

೨೦೨೧-೨೨ರ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯೂ ಗ್ರಾಮೀಣ ಭಾಗದ ಮಕ್ಕಳನ್ನೊಳಗೊಂಡ ಶಾಲೆಗೆ ಶೇ.೧೦೦ ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಕುಳಿತ ೪೯ ವಿದ್ಯಾರ್ಥಿಗಳಲ್ಲಿ ೧೯ ಅತ್ಯುನ್ನತ ಶ್ರೇಣಿ, ೭ ಡಿಸ್ಟಿಂಕ್ಷನ್, ೨೦ ಪ್ರಥಮಶ್ರೇಣಿ, ೨ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೆರ್ಗಡೆಯಾಗಿದ್ದು, ಉತ್ತಮ ಸಾಧನೆ ಮಾಡಿದ್ದಾರೆ. ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ೧೦ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಅರಿಣಿ ಎಂ ೬೨೫ಕ್ಕೆ ೬೨೩ ಅಂಕ ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾಳೆ. ೬೦೦ಕ್ಕೂ ಹೆಚ್ಚು ಅಂಕ ಪಡೆದ ೯ ಜನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹೊರಹೊಮ್ಮಿರುವುದು ವಿಶೇಷ ಸಂಗತಿ.


ಮಗುವಿನ ಮನಸ್ಸು ಎಂತಹುದೇ ಆಗಿರಲಿ, ಅದನ್ನು ತಮ್ಮ ದಾರಿಗೆ ಸೆಳೆದಿಕೊಂಡು ಮಗುವಿನ ಮನಸ್ಸಿನಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರಗೆಳೆಯುವ ನಿಟ್ಟಿನಲ್ಲಿ ಬಿಜಿಎಸ ಸಂಸ್ಥೆ ಸಾಕಷ್ಟು ಮೇಲುಗೈ ಸಾಧಿಸಿದೆಎಂದರೆ ತಪ್ಪಾಗಲಿಕ್ಕಿಲ್ಲ. ಪೂಜ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಈ ಬಾರಿಯ ವಿದ್ಯಾರ್ಥಿಗಳಿಗೆ ಬೋಧನೆಯೊಳಗೆ ತೊಡಗಿಸಿಕೊಂಡಿದ್ದಾರೆ. ಅವರ ಕನಸು ನನಸಾಗಲಿ ಎಂಬುದೇ ನಮ್ಮ ಆಶಯ.

Exit mobile version