Site icon TUNGATARANGA

ಸಾಗರ ವಕೀಲ ಎನ್.ಜಿ. ಕನ್ನಪ್ಪನವರಿಗೆ ಕೊಲೆ ಬೆದರಿಕೆ:ಖಂಡಿಸಿ ಪ್ರತಿಭಟನೆ ನಡೆಸಿದ ವಕೀಲರು.

ಹೊಸನಗರ, ಜೂ.೧೭:
ಸಾಗರ ನ್ಯಾಯಾಲಯದ ವಕೀಲ ಎನ್.ಜಿ. ಕನ್ನಪ್ಪನವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಲಾಗಿದ್ದು, ಅದು ಅಲ್ಲದೇ ನ್ಯಾಯಾಧೀಶರ ವಿರು ದ್ದವೂ ಮಾತನಾಡಿದ್ದು, ಇದನ್ನು ಖಂಡಿಸಿ ಹೊಸನ ಗರದ ನ್ಯಾಯಾಲಯದ ನ್ಯಾಯವಾದಿಗಳು ಇಂದು ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.


ನಂತರ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ವಾಲೆಮನೆ ಶಿವಕುಮಾರ್, ಸಾಗರದ ವಕೀಲ ಎನ್.ಜಿ.ಕನ್ನಪ್ಪನವರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಲಾಗಿದೆ. ಸಾಗರದ ನ್ಯಾಯಾಲಯದಲ್ಲಿ ವೈವಾಹಿಕ ಜೀವನ ವಿಚಾರಕ್ಕೆ ಸಂಬಂದಿಸಿದಂತೆ ಮಹಿಳೆಯೊಬ್ಬಳು ಶಿವಮೊಗ್ಗದ ನಿವಾಸಿಯಾಗಿರುವ ಪತಿ ಎಂ.ಡಿ. ವಸಂತ್‌ಕುಮಾರ್ ಎಂಬಾತನಿಂದ ವಿಚ್ಛೆದನ ಕೋರಿನ ಅರ್ಜಿ ಸಲ್ಲಿಸಿದ್ದು, ಜೂನ್ ೨೭ಕ್ಕೆ ಮುಂದೂಡಲಾಗಿತ್ತು. ಮಹಿಳೆ ಪರ ವಕೀಲರಾಗಿರುವ ಕನ್ನಪ್ಪ ಅವರಿಗೆ ವಾಟ್ಸ್‌ಪ್ ಕುರಿತಂತೆ ಜಾಲ ತಾಣ ಗಳಲ್ಲಿ ಆವಹೇಳನಕಾರಿ ಮಾತಾನಾಡಿದ್ದಾರೆ ಜೊತೆಗೆ ಆವ್ಯಾಚ್ಛ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿ ರುತ್ತಾರೆ.


ಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಇಲ್ಲಿಯವರೆವಿಗೆ ಎಫ್‌ಐಆರ್ ಹಾಕಿಲ್ಲ ಇಂಥಹ ಘಟನೆಗಳು ಆಗಾಗ ಮರುಕಳುಹಿಸುತ್ತಿದೆ ನಾವು ನ್ಯಾಯವಾದಿಯಾಗಿ ಕೆಲಸ ಮಾಡುವುದೇ ಕಷ್ಟಕರವಾಗಿದೆ ನಮಗೆ ಸರ್ಕಾರ ಬೆಂಬಲ ನೀಡಬೇಕು. ಹಾಗೂ ನ್ಯಾಯವಾದಿಗಳ ಮೇಲೆ ದಬ್ಬಾಳಿಕೆ ಮಾಡು ವವರ ವಿರುದ್ಧ ಕ್ರಮ ಕೈಗೊಳಬೇಕೆಂದು ಆಗ್ರಹಿಸಿದರು.


ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯ ದರ್ಶಿ ಚಂದ್ರಪ್ಪ, ಖಾಜಾಂಚಿ ಗಗ್ಗ ಬಸವರಾಜ್, ವೈ.ಪಿ ಮಹೇಶ್, ಮುಕುಂದಚಂದ್ರ, ಮೋಹನಶೆಟ್ಟಿ, ಮಂಡಾಣಿ ಗುರು, ಈರಪ್ಪ ಮತ್ತಿತರಿದ್ದರು.

Exit mobile version