Site icon TUNGATARANGA

ಉದ್ದಿಮೆದಾರರು ಕಡ್ಡಾಯವಾಗಿ ಉದ್ದಿಮೆ ಪರವಾನಗಿ ಪಡೆದುಕೊಳ್ಳಬೇಕು:ಮೇಯರ್ ಸುನಿತಾ ಅಣ್ಣಪ್ಪ

ಶಿವಮೊಗ್ಗ,
ಎಲ್ಲಾ ವರ್ತಕರು, ಉದ್ದಿಮೆದಾರರು, ಹಾಗೂ ವೃತ್ತಿ ನಿರತರು ಕಡ್ಡಾಯವಾಗಿ ಉದ್ದಿಮೆ ಪರವಾನಗಿ(ಟ್ರೇಡ್ ಲೈಸೆನ್ಸ್) ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಮಹಾನಗರಪಾಲಿ ಕೆಯ ಮೇಯರ್ ಸುನಿತಾ ಅಣ್ಣಪ್ಪ ಹೇಳಿದರು.


ಅವರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆವರಣದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಯೋಗದೊಂದಿಗೆ ಎರಡು ದಿನಗಳು ಕಾಲ ನಡೆಯುತ್ತಿರುವ ಉದ್ದಿಮೆ ಪರವಾನಿಗೆ(ಟ್ರೇಡ್ ಲೈಸೆನ್ಸ್) ನೀಡುವ ಬೃಹತ್ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.


ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿಕಟಪೂರ್ವ ಸಧ್ಯಕ್ಷ ಜೆ.ಆರ್. ವಾಸುದೇವರವರು ಪ್ರಸ್ತಾವಿಕವಾಗಿ ಮಾತನಾಡು ತ್ತಾ, ನಾವು ಸಕಾರದ ಕಾನೂನುಕಟ್ಟಲೆಗಳನ್ನು ಗೌರವಿಸಬೇಕು. ಕೈಗಾರಿಕೆಗಳಿಗೆ ಟ್ರೇಡ್ ಲೈಸೆನ್ಸ್‌ನ್ನು ರದ್ದು ಮಾಡಿದ್ದು ನಾವು ವೃತ್ತಿ ತೆರಿಗೆಯನ್ನು ಕಟ್ಟುತ್ತಿ ರುವುದರಿಂದ ನಮಗೂ ರದ್ದುಮಾಡಬೇಕೆಂ ಬುದು ಸರ್ಕಾರಕ್ಕೆ ಮನವಿ ಮಾಡಿದರು. ಪ್ರತಿಯೊಬ್ಬರ ವ್ಯಾಪಾರದ ಗಾತ್ರ, ಸಿಬ್ಬಂದಿಗಳ ವಿವರ, ಹಣಕಾಸಿವ ವಹಿವಾಟುಗಳನ್ನು ಆದರಿಸಿ ಶುಲ್ಕ ದರ ನಿಗದಿಪಡಿಸಬೇಕು. ಅವೈಜ್ಞಾನಿಕವಾಗಿ ವಿಧಿಸಿರುವ ಶುಲ್ಕ್ಕವನ್ನು ಕೈಬಿಡಬೇಕೆಂದು ತಿಳಿಸಿದು. ಈ ಹಿಂದೆ ಉದ್ದಿಮೆ ಪರವಾನಿಗಿ ಪತ್ರ ಪಡೆಯುವುದು ತುಂಬಾ ಕ್ಲಿಷ್ಟವಾಗಿತ್ತು ಜಿಲ್ಲಾ ವಾಣಿಜ್ಯ ಸಂಘ ಹಾಗೂ ಹಲವಾರು ಸಂಘ-ಸಂಸ್ಥೆಗಳ ಸಾಮಾಹಿಕ ಹೋರಾಟಗಳ ಫಲವಾಗಿ ಸರಳೀಕೃತಗೊಳಿಸಲಾಗಿದೆ ಎಂದರು.


ಸದೃಡ ಸಮಾಜ ನಿರ್ಮಾಣ ಮಾಡುವಲ್ಲಿ ಉದ್ದಿಮೆದಾರರ ವರ್ತಕರ ಸಹಕಾರ ಅತೀ ಮುಖ್ಯ ಹಾಗೂ ಪ್ರತಿಯೊಬ್ಭರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವಂತಹ ಉದ್ದಿಮೆದಾರರು, ವರ್ತಕರು ಪರವಾನಗಿ ಪಡೆಯುವುದಲ್ಲದೆ ತಮ್ಮ ಅಕ್ಕಪಕ್ಕದ ವ್ಯಾಪರಸ್ತರಿಗೆ ಮಾಹಿತಿ ನೀಡಿ ಪಡೆಯುವಂತೆ ಪ್ರೋತ್ಸಾಹಿಸಬೇಕು ಎಂದರು.


ಸಂಘದ ಅಧ್ಯಕ್ಷರು ಮಾತನಾಡಿ, ಸರ್ಕಾರದ ಉದ್ದಿಮೆ ಪರವಾನಿಗಿಯನ್ನು ಪಡೆದುಕೊಳ್ಳಲು ಉದ್ದಿಮೆದಾರರಿಗೆ ಅನುಕೂಲವಾಗುವ ನೆಲೆ ಯಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾ ರಿಕಾ ಸಂಘದಿಂದ ಇಂತಹ ಮೇಳವನ್ನು ಎರಡು ದಿನಗಳ ಕಾಲ ಆಯೋಜಿಸಲಾಗಿದ್ದು ಮಾನ್ಯ ಸದಸ್ಯರು ಇದರ ಸದುಪಯೋಗಪಡಿಸಿಕೊಳ್ಳ ಬೇಕೆಂದು ತಿಳಿಸಿದರು. ಮೇಳವನ್ನು ಆಯೋಜಿ ಸಲು ಸಹಕರಿಸಿದ ಮಹಾನಗರಪಾಲಿಕೆಯ ಅಧಿ ಕಾರಿಗಳಿಗೂ ಹಾಗೂ ಸಿಬ್ಬಂದಿಗಳಿಗೂ ಧನ್ಯವಾದ ಗಳನ್ನು ತಿಳಿಸಿದರು.


ಈ ಎರಡು ದಿನಗಳ ಮೇಳದಲ್ಲಿ ಉಪಾಧ್ಯಕ್ಷ ಬಿ. ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹಕಾರ್ಯದರ್ಶಿ ಜಿ. ವಿಜಯ ಕುಮಾರ್, ಮೂಲಭೂತ ಸೌಕರ್ಯ ಮತ್ತು ಗ್ರಿವೆನ್ಸ್ ಕಮಿಟಿ ಛೇರ‍್ಮನ್‌ರಾದ ಕೆ.ಎಸ್. ಸುಕು ಮಾರ್ ನಿದೇಶಕರುಗಳಾದ ಇ. ಪರಮೇಶ್ವರ, ಪ್ರದೀಪ್ ವಿ. ಯಲಿ, ಸಂಯೋಜಿತ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮಹಾನಗರಪಾಲಿ ಕೆಯ ಅಧಿಕಾರಿಗಳು, ಸಂಘದ ಸದಸ್ಯರು, ಸಿಬ್ಬಂದಿವರ್ಗದರು ಜನಸಾಮಾನ್ಯರು ಹಾಜರಿದ್ದರು. ಉಪಾಧ್ಯಕ್ಷ ಬಿ. ಗೋಪಿನಾಥ್ ಸ್ವಾಗತ ಕೋರಿದರು ಕಾರ್ಯದರ್ಶಿ ವಸಂತ್ ಹೋಬಳೀದಾರ್ ವಂದನಾರ್ಪಣೆ ಸಲ್ಲಿಸಿದರು.

Exit mobile version