ರಾಕೇಶ್ ಸೋಮಿನಕೊಪ್ಪ
ಶಿವಮೊಗ್ಗ, ಜೂ.೧೬:
ಶಿವಮೊಗ್ಗ ನಗರದ ವಾರ್ಡ್ ನಂ.01 ರ ಸೋಮಿನಕೊಪ್ಪ ಭೋವಿ ಕಾಲೋನಿಯಲ್ಲಿ ಸ್ಮಾರ್ಟ್‌ಸಿಟಿ ವತಿಯಿಂದ ನಡೆಯುತ್ತಿರುವ ಬಾಕ್ಸ್ ಚರಂಡಿ ಕಾಮಗಾರಿ ಕಳೆಪೆಯಿಂದ ಕೂಡಿದೆ ಎಂದು ವಾರ್ಡ್‌ನ ಜನರು ಆರೋಪಿಸಿದ್ದಾರೆ.
ವಾರ್ಡ್‌ನ ಜನರು ಮಾಹಿತಿ ನೀಡಿದ ಪ್ರಕಾರ ಹೇಳುವುದಾದರೆ ಒಂದು ತಿಂಗಳಿನಿಂದ ಬಾಕ್ಸ್ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಈ ಚರಂಡಿಗಳಿಗೆ ಕನಿಷ್ಠ 15 ದಿನ ವಾಟರ್ ಕ್ಯೂರಿಂಗ್ ಮಾಡದೆ ಇರುವುದರಿಂದ ಚರಂಡಿ ಕಾಮಗಾರಿ ತೀರಾ ಕಳಪೆಯಿಂದ ಕೂಡಿದ್ದು, ಈ ಬಗ್ಗೆ ಸ್ಮಾರ್ಟ್ ಸಿಟಿ ಎಂ.ಡಿ. ಚಿದಾನಂದ ವಟಾರೆ ಭೇಟಿ ನೀಡಿ ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಳ್ಳಬೇಕೆಂದಿದ್ದಾರೆ.
ಕ್ಯೂರಿಂಗ್ ಕಾಣದ ಬಾಕ್ಸ್ ಚರಂಡಿಗಳು:
ಈ ವಾರ್ಡ್‌ನಲ್ಲಿ ನಡೆಯುತ್ತಿರುವ ಬಾಕ್ಸ್ ಚರಂಡಿ ಕಾಮಗಾರಿಗಳಿಗೆ ನೀರು ಹಾಕ್ಕುತ್ತಾ ಕ್ಯೂರಿಂಗ್ ಮಾಡಬೇಕಾದುದು ಅತೀ ಅವಶ್ಯಕತೆ ಇರುತ್ತದೆ ಕಾರಣ ನೀರು ಕ್ಯೂರಿಂಗ್‌ದಿಂದ ಸಿಮೆಂಟ್ ಕಾಮಗಾರಿಗಳು ಸಾಕಷ್ಟು ಬಲಿಷ್ಠ ಹಾಗೂ ಉತ್ತಮ ಗುಣಮಟ್ಟ ಕಾಪಾಡಲು ಸಹಕಾರಿಯಾಗು ತ್ತದೆ. ಇದರಿಂದ ಸಿಮೆಂಟ್ ಕಾಮಗಾರಿಗಳ ಆಯಸ್ಸು ಸುಮಾರು ವರ್ಷಗಳ ಕಾಲ ಉಳಿಯುತ್ತದೆ. ಆದರೆ ಇಲ್ಲಿ ಚರಂಡಿಗಳು ಕಾಮಗಾರಿಗಳು ನೀರು ಕಾಣದೇ ಅಲ್ಲಿಲ್ಲಿ ಕಿತ್ತುಹೋಗಿರುವುದನ್ನು ಫೋಟೋದಲ್ಲಿ ಗಮನಿಸಬಹುದು.
ಎಇಇ ಹಾಗೂ ನಾನು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಕಾಮಗಾರಿ ಕಳೆಪೆಯಿಂದ ಕೂಡಿರುವುದು ಕಂಡುಬಂತು. ಇದನ್ನು ಸರಿಪಡಿಸುತ್ತೇವೆ. ಎಲ್ಲೆಲ್ಲ್ಲಿ ಕಳೆಪೆಯಾಗಿದೇಯೋ ಅಲ್ಲಿ ಸರಿಮಾಡಿಸುವೆ.
-ತ್ರಿವೇಣಿ, ಪಾಲಿಕೆ ಇಂಜಿನಿಯರ್