Site icon TUNGATARANGA

ನೈತಿಕ ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ:ಥಾವರ್ ಚಂದ್ ಗೆಹ್ಲೋಟ್

ಶಿವಮೊಗ್ಗ,
ನೈತಿಕ ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ ಸರ್ಕಾರ ಜಾರಿಗೆ ತರುವ ಯೋಜನೆಗಳಲ್ಲಿ ಯುವ ವಿದ್ಯಾರ್ಥಿಗಳ ಪಾತ್ರ ಇರಬೇಕು ಎಂದು ರಾಜ್ಯಪಾಲ ಹಾಗೂ ಕುವೆಂಪು ವಿವಿ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.


ಅವರು ಇಂದು ಕುವೆಂಪು ವಿವಿ ಆವರಣ ದಲ್ಲಿ ಆಯೋಜಿಸಿದ್ದ ೩೧, ೩೨ ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.
ನೀವೆಲ್ಲರೂ ಪದವಿ ಪಡೆಯುತ್ತಿರುವುದು ನನಗೆ ಹರ್ಷ ತಂದಿದೆ. ಪದವಿ ಪಡೆದ ವಿದ್ಯಾ ರ್ಥಿಗಳು ದೇಶದ ಹಿತಕ್ಕಾಗಿ ಕೆಲಸ ಮಾಡಬೇಕು. ಪದವಿ ಮುಗಿದ ಮೇಲೆ ಕೇವಲ ಕೆಲಸಕ್ಕಾಗಿ ಹುಡುಕಾಟ ನಡೆಸದೇ ಅಧ್ಯಯನಶೀಲರಾಗಿ ಆ ಮೂಲಕ ದೇಶದ ಅಭಿವೃದ್ಧಿಯಲ್ಲಿ ತೊಡಗಿ ಇದೆಲ್ಲಕ್ಕೂ ಗುಣಮಟ್ಟದ ನೈತಿಕ ಶಿಕ್ಷಣ ಬೇಕಾಗಿದೆ ಎಂದರು.


ರಾಷ್ಟ್ರಕವಿ ಕುವೆಂಪು ಹೆಸರೇ ವಿಶ್ವವಿದ್ಯಾ ಲಯಕ್ಕೆ ಪ್ರೇರಣಾ ಶಕ್ತಿಯಾಗಿದೆ. ಕುವೆಂಪು ವಿವಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯಮಟ್ಟದಲ್ಲಿ ಹೆಸರು ಮಾಡಿದೆ. ನಾನು ಕುವೆಂಪು ವಿವಿ ವಿದ್ಯಾರ್ಥಿ ಎಂದು ಹೇಳಿಕೊಳ್ಳುವುದೇ ಹೆಮ್ಮೆಯ ವಿಷಯ ಎಂದರು. ಹೊಸ ಶಿಕ್ಷಣ ನೀತಿ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಕ್ರಿಯಾಶೀಲತೆ, ಅಧ್ಯಯನ ಮನೋ ಭಾವಕ್ಕೆ ಹತ್ತಿರವಾಗುತ್ತದೆ. ಜೊತೆಗೆ ಭಾರತ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಇದು ಪ್ರೇರಕ ಮತ್ತು ಪೂರಕವಾಗುತ್ತದೆ ಎಂದರು.


ಅಂತರರಾಷ್ಟ್ರೀಯ ಮಟ್ಟಕ್ಕೆ ಹೋಲಿಸಿದರೆ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಸಾಧನೆ ಅಷ್ಟೊಂದು ತೃಪ್ತಿಕರವಾಗಿಲ್ಲ. ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕಗಳು ಕೂಡ ಸಿಗುತ್ತಿಲ್ಲ. ಆದರೆ, ದಿವ್ಯಾಂಗರ ಒಲಿಂಪಿಕ್ಸ್ ನಲ್ಲಿ ಹೆಚ್ಚಿನ ಪದಕಗಳು ಬರುತ್ತಿರು ವುದು ಸ್ವಾಗತದ ವಿಷಯವಾಗಿದೆ. ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.


ಗೌರವ ಡಾಕ್ಟರೇಟ್ ಪದವಿ ಪಡೆದವರು ಆಯಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿ ದ್ದಾರೆ. ಈ ಸಾಧನೆ ವ್ಯರ್ಥವಾಗಬಾರದು. ಮುಂದಿನ ದಿನಗಳಲ್ಲಿ ಅವರು ಮತ್ತಷ್ಟು ಸಾಧನೆ ಮಾಡಬೇಕು. ಅವರ ತಿಳಿವಳಿಕೆ ಜ್ಞಾನ ಯುವ ಪೀಳಿಗೆಗೆ ಪ್ರೇರಣೆಯಾಗಿರಬೇಕು. ಪದವಿ ಪಡೆದ ರ‍್ಯಾಂಕ್ ಪಡೆದ ಎಲ್ಲಾ ವಿದ್ಯಾರ್ಥಿ ಗಳಿಗೂ ಅಭಿನಂದನೆಗಳು ಎಂದರು.


ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ, ಕುಲಸಚಿವರುಗಳಾದ ಜಿ. ಅನುರಾಧ, ಪ್ರೊ. ನವೀನ್ ಕುಮಾರ್ ಇದ್ದರು.
ನಾವಿಂದು ಸವಾಲಿನ ಯುಗದಲ್ಲಿ ಜೀವಿಸುತ್ತಿದ್ದೇವೆ: ಡಾ.ಶ್ರೀದೇವಿ

ವಿಶೇಷವಾಗಿ ಯುವತಿಯರು ಎಂದೂ ಸೋಲನ್ನು ಒಪ್ಪಿಕೊಳ್ಳಬೇಡಿ. ನಿಮ್ಮ ನಿರ್ಧಾರ ಗಟ್ಟಿಯಾಗಿರಲಿ. ಸೋತರು ಕೂಡ ಮರು ಪ್ರಯತ್ನ ಮಾಡಿ ಎಂದು ಸಲಹೆ ನೀಡಿದರು.
ದೇಶದ ಬೆನ್ನೆಲುಬಾದ ಕೃಷಿಯನ್ನೇ ಶೇ.೬೦ರಷ್ಟು ಜನ ಅವಲಂಬಿಸಿದ್ದಾರೆ. ಕೃಷಿಯೊಂದಿಗೆ ಉಪ ಉತ್ಪನ್ನಗಳ ಉತ್ಪಾದನೆ ಹೆಚ್ಚಾಗಬೇಕಿದೆ. ಕೃಷಿಯೊಂದಿಗೆ ಉಪಕಸುಬು ಗಳನ್ನು ಅಳವಡಿಸಿಕೊಂಡಾಗ ಕೃಷಿಕರ ಜೀವನ ಮಟ್ಟದ ಜೊತೆಗೆ ದೇಶದ ಆರ್ಥಿಕತೆಯೂ ಅಭಿವೃದ್ಧಿ ಹೊಂದಲಿದೆ. ನಾವು ಪೌಷ್ಠಿಕ ಸುರಕ್ಷತೆ ಮತ್ತು ಜನರ ಆರೋಗ್ಯದ ಕಡೆ ಗಮನ ಹರಿಸಬೇಕಾಗಿದೆ. ಜಾಗತಿಕ ಆಹಾರಕ್ಕೆ ಸಂಬಂ ಧಪಟ್ಟ ಸವಾಲುಗಳನ್ನು ಅರಿತುಕೊಳ್ಳಬೇಕು. ವ್ಯವಸಾಯದ ಹೆಜ್ಜೆಗಳು ಪರಿಸರ ನಾಶಕ್ಕೆ ಕಾರಣವಾಗಬಾರದು ಎಂದರು.
ಕೋವಿಡ್ ಸಾಂಕ್ರಮಿಕ ಸಂದರ್ಭದಲ್ಲೂ ನಿಮ್ಮ ಪರಿಶ್ರಮ, ಸಾಧನೆ ಗಣನೀಯವಾದದ್ದು. ಇದಕ್ಕೆ ಕಾರಣರಾದ ನಿಮ್ಮ ಪೋಷಕರು, ಅಧ್ಯಾಪಕರ ಬದ್ಧತೆ ಶ್ಲಾಘನೀಯ. ನಿಮ್ಮ ಕನಸುಗಳು ಸಾಕಾರವಾಗಲಿ. ಯುವ ಪದವೀಧರರಾಗಿ ವಾಸ್ತವ ಜಗತ್ತಿಗೆ ಕಾಲಿಟ್ಟಿದ್ದೀರಿ. ಜಗತ್ತಿನ ಸಮಸ್ಯೆಗಳಿಗೆ ನಿಮ್ಮಲ್ಲಿ ಹಲವರು ಪರಿಹಾರವನ್ನೂ ನೀಡಬಹುದು. ಆ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ನಿಮ್ಮಿಂದಾಗಿ ದೇಶ ಹೆಮ್ಮೆ ಪಡುವಂತಾ ಗಲಿ. ನಿಮ್ಮ ಕುಟುಂಬ, ಗುರುಗಳು ನಿಮ್ಮನ್ನು ಮೆಚ್ಚಿಕೊಳ್ಳಲಿ. ನಿಮಗೆ ಎಲ್ಲವನ್ನೂ ಕೊಟ್ಟಿರುವ ದೇಶಕ್ಕೆ ನಿಮ್ಮ ಕೊಡುಗೆಯನ್ನು ಕೊಡುವ ಸಮಯ ಬಂದಿದೆ. ಆ ಸಾಮಥ್ರ್ಯ ವೂ ಕೂಡ ನಿಮ್ಮಲ್ಲಿದೆ. ನಿಮ್ಮ ಬೇರುಗಳನ್ನು ಪರಂಪರೆಗಳನ್ನು ಮತ್ತು ನಿಮ್ಮ ಸಂಸ್ಕೃತಿಯನ್ನು ಮರೆಯಬೇಡಿ. ನಿಮ್ಮ ಜನ್ಮಭೂಮಿಗೆ ಕೊಡುಗೆ ನೀಡಿ ಎಂದು ಕರೆ ನೀಡಿದರು.

31 ನೇ ಘಟಿಕೋತ್ಸವದ ರ‍್ಯಾಂಕ್, ಪದವಿ ಪಡೆದವರು
2019-20 ಸಾಲಿನ ಘಟಿಕೋತ್ಸವದಲ್ಲಿ 61 ಪುರುಷರು ಹಾಗೂ 30 ಮಹಿಳೆಯರು ಸೇರಿ ಒಟ್ಟು 91 ಅಭ್ಯರ್ಥಿಗಳು ಪಿ.ಹೆಚ್.ಡಿ. ಪದವಿ ಪಡೆಯಲು ಅರ್ಹರಾಗಿರುತ್ತಾರೆ. 10214 ಪುರುಷರು ಹಾಗೂ15221 ಮಹಿಳೆಯರು ಸೇರಿ ಒಟ್ಟು254 35 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಘಟಿಕೋತ್ಸವದಲ್ಲಿ 127 ಸ್ವರ್ಣಪದಕಗಳು ಇದ್ದು, ಅವುಗಳನ್ನು 20 ಪುರುಷರು ಹಾಗೂ ೫೧ ಮಹಿಳೆಯರು ಸೇರಿ ಒಟ್ಟು71 ವಿದ್ಯಾರ್ಥಿಗಳು ಹಂಚಿಕೊಂಡಿರುತ್ತಾರೆ. ೧೭ ನಗದು ಬಹುಮಾನಗಳು ಇದ್ದು, ಎಲ್ಲವುಗಳನ್ನು ೧೩ ಮಹಿಳಾ ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ.
32 ನೇ ಘಟಿಕೋತ್ಸವದ ರ‍್ಯಾಂಕ್, ಪದವಿ ಪಡೆದವರು
2021-22 ನೇ ಸಾಲಿನ ಘಟಿಕೋತ್ಸವದಲ್ಲಿ ೮೨ ಪುರುಷರು ಹಾಗೂ47 ಮಹಿಳೆಯರು ಸೇರಿ ಒಟ್ಟು 129 ಅಭ್ಯರ್ಥಿಗಳು ಪಿ.ಹೆಚ್.ಡಿ. ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಈ ಘಟಿಕೋತ್ಸವದಲ್ಲಿ ೮೩೨೪ ಪುರುಷರು ಹಾಗೂ ೧೨೩೧೪ ಮಹಿಳೆಯರು ಸೇರಿ ಒಟ್ಟು ೨೦೬೩೮ ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದರು. ಘಟಿಕೋತ್ಸವದಲ್ಲಿ ೧೩೨ ಸ್ವರ್ಣಪದಕಗಳಿದ್ದು,14 ಪುರುಷರು ಹಾಗೂ 52 ಮಹಿಳೆಯರು ಸೇರಿ ಒಟ್ಟು 66 ವಿದ್ಯಾರ್ಥಿಗಳು ಹಂಚಿಕೊಂಡಿರುತ್ತಾರೆ. 17 ನಗದು ಬಹುಮಾನಗಳು ಇದ್ದು, ೧೩ ಮಹಿಳಾ ವಿದ್ಯಾರ್ಥಿಗಳು ಹಾಗೂ ಇಬ್ಬರು ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 16 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ.
ಎರಡು ವರ್ಷಗಳ ಘಟಿಕೋತ್ಸವದಲ್ಲಿ ಕನ್ನಡ ಭಾರತಿ ವಿಭಾಗದ ದಿವ್ಯಾ ಹೆಚ್. ಎನ್. ಅತಿ ಹೆಚ್ಚು ಒಟ್ಟು 11 ಸ್ವರ್ಣ ಪದಕ ಹಾಗೂ ೨ ನಗದು ಬಹುಮಾನಗಳನ್ನು ಪಡೆದಿರುತ್ತಾರೆ.

31 ನೇ ಘಟಿಕೋತ್ಸವದ ಭಾಗವಾಗಿ ಸಾರ್ವಜನಿಕ ಆಡಳಿತದಲ್ಲಿ ಅಪಾರ ಸೇವೆ ಸಲ್ಲಿಸಿರುವ ಸಾರ್ವಜನಿಕ ಆಡಳಿತದಲ್ಲಿ ಅಪಾರ ಸೇವೆ ಸಲ್ಲಿಸಿರುವ ಹಾಗೂ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ. ಹೆಚ್. ಶಂಕರಮೂರ್ತಿ, ಶಿಕ್ಷಣತಜ್ಞೆ ಗೀತಾ ನಾರಾಯಣನ್ ಹಾಗೂ ಯೋಗ ಗುರು ಭ. ಮ. ಶ್ರೀಕಂಠ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
32 ನೇ ಘಟಿಕೋತ್ಸವದ ಭಾಗವಾಗಿ ಶಿಕ್ಷಣತಜ್ಞ, ವಿಶ್ರಾಂತ ಕುಲಪತಿ ಪೊ?ರ. ಟಿ.ವಿ. ಕಟ್ಟಿಮನಿ, ಅಂಧ ಕ್ರಿಕೆಟಿಗ ಮಹಾಂತೇಶ್ ಜಿ. ಕಿವಡಸಣ್ಣವರ್, ಯೋಗಗುರು ಬಾ. ಸು. ಅರವಿಂದ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

Exit mobile version