ಶಿವಮೊಗ್ಗ, ಜೂ
ರೋಹಿತ್ ಚಕ್ರವರ್ತಿ ಮತ್ತು ಶಿಕ್ಷಣ ಸಚಿವ ನಾಗೇಶ್ ಸೇರಿ ಪಠ್ಯಪುಸ್ತಕಗಳನ್ನು ಅದ್ವಾನ ಮಾಡಿದ್ದಾರೆ. ಮಕ್ಕಳಿಗೆ ಆ ಪುಸ್ತಕಗಳ ವಿತರಣೆ ಕೂಡಲೇ ನಿಲ್ಲಿಸಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಗ್ರಹಿಸಿದರು.
ಕುವೆಂಪು ಹುಟ್ಟೂರು ಕುಪ್ಪಳ್ಳಿಯ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಬುಧವಾರ ಬೆಳಿಗ್ಗೆ ಪಾದಯಾತ್ರೆ ಆರಂಭದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾದರು.
ಬಿಜೆಪಿಯವರು ಹೊಸ ಹೊಸ ಕಾರ್ಯಕ್ರಮಗಳ ಅನುಷ್ಠಾನಗೊಳಿಸಲು ನಮ್ಮ ವಿರೋಧವಿಲ್ಲ. ಆದರೆ ಚರ್ಚೆ ನಡೆ ಸಬೇಕು. ಸದನದಲ್ಲಿ ಆ ಬಗ್ಗೆ ಚರ್ಚೆ ಆಗಬೇಕು ಎಂದು ಹೇಳಿದರು.
ಪಾದಯಾತ್ರೆಯಲ್ಲಿ ಸಂಗೀತ ನಿರ್ದೇಶಕ ಹಂಸಲೇಖ, ಸಾಹಿತಿಗಳಾದ ಜಿ.ಸಿದ್ದರಾಮಯ್ಯ,ಪ್ರೊ. ರಾಜೇಂದ್ರ ಚೆನ್ನಿ, ನಾ.ಡಿಸೋಜ, ಹಿರಿಯ ಪತ್ರಕರ್ತ ದಿನೇಶ ಅಮಿನಮಟ್ಟು, ಡಿಎಸ್ ಎಸ್ ರಾಜ್ಯ ಸಂಚಾಲಕ ಗುರು ಮೂರ್ತಿ, ರೈತ ಸಂಘಟನೆಯ ಕೆ.ಟಿ.ಗಂಗಾಧರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಮಂಜುನಾಥ್, ವಕೀಲ ಕೆ.ಪಿ.ಶ್ರೀಪಾಲ್ ಕಿಮ್ಮನೆ ಅವರೊಂದಿಗೆ ಹೆಜ್ಜೆ ಹಾಕಿದರು.