Site icon TUNGATARANGA

ನಾಯಕತ್ವಗುಣ ವೃದ್ಧಿಸುವಲ್ಲಿ ರೋಟರಿ ಸಂಸ್ಥೆ ಸಹಕಾರಿ: ಮಂಜುನಾಥ್ ಕದಂ

ಶಿವಮೊಗ್ಗ, ಜೂ.೧೪:
ಸಾಮಾಜಿಕ ಕ್ಷೇತ್ರದಲ್ಲಿ ಸೇವಾ ಮನೋಭಾವ ಮತ್ತು ನಾಯಕತ್ವಗುಣ ವೃದ್ಧಿಸುವಲ್ಲಿ ರೋಟರಿ ಸಂಸ್ಥೆ ಸಹಕಾರಿಯಾಗುತ್ತದೆ ಎಂದುರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಮಂಜುನಾಥ್ ಕದಂ ಹೇಳಿದರು.
ಶಿವಮೊಗ್ಗದ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಲ್ಲಿ ಆಯೋಜಿಸಿದ್ದ ಶಿವಮೊಗ್ಗ ನಗರದ ರೋಟರಿ ಸಂಸ್ಥೆಗಳ ಅಧ್ಯಕ್ಷರ ಮನದಾಳ ಮಾತು ಹಾಗೂ ರೋಟರಿ ಸಂಸ್ಥೆಯ ಓಡನಾಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಅಂತರಾಷ್ಟ್ರೀಯ ರೋಟರಿ ಸಂಸ್ಥೆ ಸಮಾಜಕ್ಕೆ ನೀಡುತ್ತಿರುವ ಸೇವೆಯಲ್ಲಿ ನಾವು ಭಾಗವಹಿಸಿರುವುದು ತೃಪ್ತಿಕರವಾಗಿದೆ ಎಂದು ತಿಳಿಸಿದರು.


ಪ್ರಸ್ತುತ ೨೦೨೧-೨೨ ನೇ ಸಾಲಿನ ರೋಟರಿ ಸಂಸ್ಥೆಯ ಅಧ್ಯಕ್ಷರ ಅವಧಿ ಮುಗಿಯುತ್ತ ಬಂದಿದ್ದು, ಜುಲೈನಲ್ಲಿ ಹೊಸ ಅಧ್ಯಕ್ಷರುಗಳು ಅಧಿಕಾರ ಸ್ವೀಕರಿ ಸಲಿದ್ದಾರೆ. ಈ ವರ್ಷದಲ್ಲಿ ಶಿವಮೊಗ್ಗ ನಗರದ ರೋಟರಿ ಸಂಸ್ಥೆಗಳ ಅಧ್ಯಕ್ಷರು ಒಂದೆಡೆ ಸೇರಿಸುವುದು ತುಂಬಾ ಸಂತೋಷ. ಎಲ್ಲರೋಟರಿ ಸಂಸ್ಥೆಯ ಅಧ್ಯಕ್ಷರುಗಳ ಮನದಾಳದ ಮಾತು ಮತ್ತು ರೋಟರಿ ಒಡನಾಟವನ್ನು ಅಧ್ಯಕ್ಷರ ಅನುಭವವನ್ನು ಸಂಸ್ಥೆಯ ಸದಸ್ಯರುಗಳಿಗೆ

ಹಂಚಿಕೊಳ್ಳುವುದರಿಂದ ನಾವು ಸಮಾಜಕ್ಕೆ ಮಾಡುವ ಸೇವೆಗಳು ಹಾಗೂ ಅಧಿಕಾರದ ಅವಧಿಗಳಲ್ಲಿ ಸಾಧನೆಯ ವಿಷಯಗಳನ್ನು ಹಂಚಿಕೊಳ್ಳು ವುದರಿಂದ ಮನಸ್ಸಿಗೆ ತುಂಬಾ ಸಂತೋಷವೆನಿ ಸುತ್ತದೆಎಂದರು.
ಶಿವಮೊಗ್ಗ ರೋಟರಿ ಉತ್ತರ ಸಂಸ್ಥೆಯ ಅಧ್ಯಕ್ಷ ಪ್ರೊ.ಸತ್ಯನಾರಾಯಣ, ಶಿವಮೊಗ್ಗ ರೋಟರಿ ಸಂಸ್ಥೆಯ ಅಧ್ಯಕ್ಷ ಕಿಶೋರ್ ಶಿರನಾಳಿ, ರೋಟರಿಸೆಂಟ್ರಲ್ ಸಂಸ್ಥೆಯ ಅಧಕ್ಷವಿಜಯಪ್ರಕಾಶ್, ರೋಟರಿ ಜುಬಿಲಿ ಅಧ್ಯಕ್ಷಲಕ್ಷ್ಮೀನಾರಾಯಣ್, ರೋಟರಿ ರಿವರ್ಸೈಡ್ ಅಧ್ಯಕ್ಷ ಶಂಕರ್‌ಎಸ್ ಪಿ ಹಾಗೂ ರೋಟರಿ ಮಿಡ್ ಟೌನ್ ಕಾರ್ಯದರ್ಶಿ ಅನಿಲ್ ಶೆಟ್ಟಿ ಮಾತನಾಡಿದರು.


ರೋಟರಿ ಶಿವಮೊಗ್ಗ ಪೂರ್ವದ ಕಾರ್ಯದರ್ಶಿ ಸತೀಶ್‌ಚಂದ್ರ, ಸಮುದಾಯ ಸೇವೆಗಳ ನಿರ್ದೇಶಕ ಜಿ.ವಿಜಯಕುಮಾರ್, ವಸಂತ್ ಹೋಬಳಿದಾರ್, ಆನಂದಮೂರ್ತಿ,ಮಹೇಶ್ ಅಲೆಮನೆ, ಗಣೇಶಎಸ್, ರೋಟರಿ ಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ ಚಂದ್ರಶೇಖ ರಯ್ಯ, ಡಾ ಪರಮೇಶ್ವರ ಸಿಗ್ಗಾವ್, ಇನ್ನರ್ವೀಲ್ ಕಾರ್ಯದರ್ಶಿ ಬಿಂದು ವಿಜಯಕುಮಾರ್ ಮತ್ತಿತರರಿದ್ದರು.

Exit mobile version