Site icon TUNGATARANGA

ಪತ್ರಕರ್ತರ ಆರೋಗ್ಯ ಚೆನ್ನಾಗಿದ್ದರೆ ಸುದ್ದಿಕೂಡ ಆರೋಗ್ಯಕರವಾಗಿರುತ್ತದೆ- ಎಸ್. ರುದ್ರೇಗೌಡ

ಪತ್ರಕರ್ತರಿಗಾಗಿ ಆರೋಗ್ಯ ತಪಾಸಣಾ ಶಿಬಿರ-೧೨೦ ಮಂದಿ ಪತ್ರಕರ್ತರಿಗೆ ಆರೋಗ್ಯ ತಪಾಸಣೆ

ಶಿವಮೊಗ್ಗ,ಜೂ.13:
ಜಿಲ್ಲೆಯ ಪತ್ರಕರ್ತರಿಗಾಗಿ ನಗರದ ಮೆಟ್ರೋ ಯುನೈಟೆಡ್‌ ಹೆಲ್ತ್‌ ಕೇರ್‌ ಆಸ್ಪತ್ರೆ ಹಾಗೂ ಹೃದಯ ಸ್ಪೆಷಾಲಿಟಿ ಕ್ಲಿನಿಕ್‌ ಸಹಯೋಗದೊಂದಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಭಾನುವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಶಿವಮೊಗ್ಗ ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ಸುಮಾರು 120 ಮಂದಿ ಪತ್ರಕರ್ತರು ಆರೋಗ್ಯ ತಪಾಸಣೆಗೆ ಒಳಗಾಗುವ ಮೂಲಕ ಶಿಬಿರದ ಸದ್ದುಪಯೋಗ ಪಡೆದುಕೊಂಡರು.
ನಗರದ ಸವಳಂಗ ರಸ್ತೆಯಲ್ಲಿರುವ ಮೆಟ್ರೋ ಯುನೈಟೆಡ್‌ ಹೆಲ್ತ್‌ ಕೇರ್‌ ಆಸ್ಪತ್ರೆ ಹಾಗೂ ದುರ್ಗಿಗುಡಿ 1ನೇ ಪ್ಯಾರಲಲ್‌ ರಸ್ತೆಯಲ್ಲಿರುವ ಹೃದಯ ಸ್ಪೆಷಾಲಿಟಿ ಕ್ಲಿನಿಕ್‌ ಗಳಲ್ಲಿ ಪತ್ರಕರ್ತರಿಗೆ ಪ್ರತ್ಯೇಕವಾಗಿಯೇ ಆರೋಗ್ಯ ತಪಾಸಣೆಯ ವ್ಯವಸ್ಥೆ ಮಾಡಲಾಗಿತ್ತು.
ರಕ್ತ ಪರೀಕ್ಷೆ, ಇಸಿಜಿ, ಎಕೋ ಸೇರಿದಂತೆ ಎಲ್ಲಾ ಬಗೆಯ ಅರೋಗ್ಯ ತಪಾಸಣೆಯೊಂದಿಗೆ ಉಚಿತವಾಗಿಯೇ ನೀಡಲಾಯಿತು. ತಜ್ಞ ವೈದರಿಂದ ಎರಡು ಆಸ್ಪತ್ರೆಗಳಲ್ಲೂ ವೈದ್ಯಕೀಯ ಮಾಹಿತಿ ನೀಡಲಾಯಿತು.
ಬೆಳಗ್ಗೆ 9.30ಕ್ಕೆ ಮೆಟ್ರೋ ಯುನೈಟೆಡ್‌ ಹೆಲ್ತ್‌ ಕೇರ್‌ ಆಸ್ಪತ್ರೆಯಲ್ಲಿ ಪತ್ರಕರ್ತರ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ದೊರೆಯಿತು.
ಶಿಬಿರದ ಉದ್ಘಾಟಕರಾಗಿ ಬಂದಿದ್ದ ವಿಧಾನ ಪರಿಷತ್‌ ಶಾಸಕ ರುದ್ರೇಗೌಡ ಹಾಗೂ ಮುಖ್ಯ ಅತಿಥಿಯಾಗಿ ಬಂದಿದ್ದ ಮತ್ತೋರ್ವ ವಿಧಾನ ಪರಿಷತ್‌ ಶಾಸಕ ಆಯನೂರು ಮಂಜುನಾಥ್‌ ಅವರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ. ಶಿವಕುಮಾರ್‌ ಅವರಿಗೆ ಸಾಂಕೇತಿಕವಾಗಿ ರಕ್ತದೊತ್ತಡದ ಪರೀಕ್ಷೆ ನಡೆಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ವಿಧಾನ ಪರಿಷತ್‌ ಶಾಸಕ ಎಸ್.‌ ರುದ್ರೇಗೌಡ ಅವರು ಉದ್ಘಾಟನಾ ಭಾಷಣ ಮಾಡಿ, ನಿತ್ಯ ಒತ್ತಡದ ಕೆಲಸದಲ್ಲಿ ತೊಡಗಿಸಿಕೊಳ್ಳುವ ಪತ್ರಕರ್ತರಿಗೆ ಆರೋಗ್ಯ ತಪಾಸಣೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇಂತಹದೊಂದು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು ನಿಜಕ್ಕೂ ಒಳ್ಳೆಯ ಕೆಲಸ. ರಾಜಕಾರಣಿಗಳ ಹಾಗೆಯೇ ಅನೇಕ ಸಮಯದಲ್ಲಿ ಊಟ ತಿಂಡಿ, ನಿದ್ರೆಗಳೆಲ್ಲವೂ ಪತ್ರಕರ್ತರಿಗೆ ಮರೀಚಿಕೆಯಾಗಿರುತ್ತವೆ. ಸಮಸಯದ ಪರಿವೆಯೇ ಇಲ್ಲದೆ ಕೆಲಸಮಾಡಬೇಕಾದ ಪರಿಸ್ಥಿತಿಗಳು ಇರುತ್ತವೆ. ಹಾಗಾಗಿ ಅವರಿಗೆ ಆರೋಗ್ಯ ತಪಾಸಣೆ ಅವಶ್ಯಕತೆ ಇದೆ. ಪತ್ರಕರ್ತರು ಆರೋಗ್ಯ ಚೆನ್ನಾಗಿದ್ದರೆ ಸುದ್ದಿಕೂಡವೂ ಆರೋಗ್ಯವಾಗಿರುತ್ತದೆ ಎಂದರು.
ಪತ್ರಕರ್ತರಿಗಾಗಿ ಮೆಟ್ರೋ ಯುನೈಟೆಡ್‌ ಹೆಲ್ತ್‌ ಕೇರ್‌ ಆಸ್ಪತ್ರೆ ಹಾಗೂ ಹೃದಯ ಸ್ಪೆಷಾಲಿಟಿ ಕ್ಲಿನಿಕ್‌ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು ನಿಜಕ್ಕೂ ಶ್ಲಾಘನೀಯವಾದದ್ದು. ಶಿವಮೊಗ್ಗ ಎಲ್ಲಾ ಆಸ್ಪತ್ರೆಗಳು ಕೂಡ ಪತ್ರಕರ್ತರಿಗೆ ಇಂತಹ ಶಿಬಿರ ಹಮ್ಮಿಕೊಳ್ಳಲಿ ಎಂದು ಸಲಹೆ ನೀಡಿದರಲ್ಲದೆ, ಪತ್ರಕರ್ತರು ಈ ಆರೋಗ್ಯ ತಪಾಸಣೆ ಶಿಬಿರವನ್ನು ಸದುಪಯೋಗ ಪಡೆದುಕೊಳ್ಳಲಿ. ಹಾಗೆಯೇ ಅವರೆಲ್ಲರೂ ಆರೋಗ್ಯವಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳಲಿ ಎಂದರು.

ಇದೇ ವೇಳೆ ಅವರು ಪತ್ರಕರ್ತರಾಗಿ ಕೆಲಸ ಮಾಡುವವರ ಕುಟುಂಬದವರಿಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇಂತಹ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಿ ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಮಾತನಾಡಿ, ಸಮಾಜದಲ್ಲಿ ರಾಜಕಾರಣಿಗಳು ಹಾಗೂ ಪತ್ರಕರ್ತರು ಇಬ್ಬರೂ ಒಂದೇ ಬಗೆಯ ಜನರು. ಅವರ ನಾಡಿಮಿಡಿತಗಳನ್ನು ಅಷ್ಟು ಸುಲಭವಾಗಿ ಪತ್ತೆ ಹಚ್ಚಲಾಗೋದಿಲ್ಲ ಎಂಬ ಹಾಸ್ಯದ ಮಾತುಗಳೊಂದಿಗೆ ಪತ್ರಕರ್ತರ ಮಹತ್ವದ ಕುರಿತು ಮಾತನಾಡಿದರು.


ಪತ್ರಕರ್ತರು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅವರಿಗೆ ಆರೋಗ್ಯ ತುಂಬಾನೆ ಮುಖ್ಯವಾಗುತ್ತದೆ. ಹಾಗೆಯೇ ಹೃದಯ ಮತ್ತು ಹೃದಯವಂತಿಕೆಯೂ ಇರಬೇಕಾಗುತ್ತದೆ. ಯಾಕಂದ್ರೆ ಈಗ ಪತ್ರಿಕೋದ್ಯಮ ಹಿಂದಿನಂತಿಲ್ಲ. ವರದಿಗಳೇ ಪರ್ತಕರ್ತರ ಅಭಿಪ್ರಾಯಗಳಾಗಿ ಪರಿವರ್ತನೆ ಆಗುತ್ತಿವೆ. ಇದು ಸಮಾಜಕ್ಕೆ ತಪ್ಪು ಸಂದೇಶ ಹೊಂದಂತಾಗುತ್ತದೆ. ವರದಿಯೇ ಬೇರೆ, ಅಭಿಪ್ರಾಯವೇ ಬೇರೆ. ಅದನ್ನು ಅವರು ವರ್ಗಿಕರಿಸಿಯೇ ಪತ್ರಿಕೆಗಳನ್ನು ತರಬೇಕಿದೆ. ಯಾಕಂದ್ರೆ ಪತ್ರಕರ್ತರ ಚೆನ್ನಾಗಿದ್ದರೆ ಸಮಾಜವೂ ಚೆನ್ನಾಗಿರುತ್ತದೆ ಎಂದರು.
ಜಿ.ಪಂ. ಸದಸ್ಯ ಕೆ.ಈ. ಕಾಂತೇಶ್‌ ಮಾತನಾಡಿ, ಸಮಾಜದ ಓರೆಕೋರೆಗಳನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು. ಅವರ ಸಹಾಯಕ್ಕೆ ನಾನು ಮತ್ತು ನಮ್ಮ ಕುಟುಂಬ ಸದಾ ಸಿದ್ದವಿದೆ. ಪತ್ರಕರ್ತರು ಮತ್ತು ಅವರ ಕುಟುಂಬಕ್ಕೆ ಮೆಟ್ರೋ ಆಸ್ಪತ್ರೆಯಲ್ಲಿ ತಪಾಸಣೆ ಮತ್ತು ಚಿಕಿತ್ಸೆಗೆ ಶೇ.20 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಘೋಷಿಸಿದರು. ಇದೇ ವೇಳೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು, ಇನ್ನು ಹೆಚ್ಚಿನ ರಿಯಾಯಿತಿ ನೀಡುವಂತೆ ಮಾಡಿಕೊಂಡ ಮನವಿಗೆ ಅಲ್ಲಿಯೇ ಪ್ರತಿಕ್ರಿಯೆ ನೀಡಿದ ಅವರು, ಮುಂದಿನ ದಿನಗಳಲ್ಲಿ ಆ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಭರವಸೆ ನೀಡಿದರು.
ಶಿವಮೊಗ್ಗ ನಗರಾಭಿವೃದ್ದಿ ಪ್ರಾಧಿಕಾರಿ ಮಾಜಿ ಅಧ್ಯಕ್ಷ ಎಸ್.‌ ಎಸ್.‌ ಜ್ಯೋತಿ ಪ್ರಕಾಶ್‌ ಮಾತನಾಡಿ, ಪತ್ರಕರ್ತರು ತಮ್ಮ ಒತ್ತಡ ಕೆಲಸದ ನಡುವೆಯೂ ಆರೋಗ್ಯಕ್ಕೆ ಅಂತಲೇ ಒಂದಷ್ಟು ಸಮಯವನ್ನು ಮೀಸಲಿಡಬೇಕು. ಈಗ ಆರೋಗ್ಯಕರವಾಗಿರಲು ಯೋಗವೂ ಪ್ರಮುಖ ಪಾತ್ರ ವಹಿಸುತ್ತಿದೆ. ನಿತ್ಯವೂ ಒಂದಷ್ಟು ಸಮಯ ಯೋಗ ಮಾಡುವುದರ ಮೂಲಕವೂ ಪತ್ರಕರ್ತರು ಒತ್ತಡವನ್ನು ರಿಲ್ಯಾಕ್ಸ್‌ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ. ಶಿವಕುಮಾರ್‌ ಅಧ್ಯಕ್ಷತೆ ವಹಿಸಿದ್ದರು.

ಪತ್ರಕರ್ತರಿಗಾಗಿ ಆರೋಗ್ಯ ಶಿಬಿರ ಹಮ್ಮಿಕೊಳ್ಳುವುದಕ್ಕೆ ಕಾರಣವಾದ ವಿಚಾರವನ್ನು ಹಂಚಿಕೊಂಡರು. ಹಾಗೆಯೇ ಮೆಟ್ರೋ ಆಸ್ಪತ್ರೆ ಮತ್ತು ಹೃದಯ ಸ್ಪೆಷಾಲಿಟಿ ಕ್ಲಿನಿಕ್‌ ಸಹಾಯಕ್ಕೆ ಅಭಿನಂದನೆ ತಿಳಿಸಿದರು. ಸಮಾರಂಭದಲ್ಲಿ ಮೆಟ್ರೋ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪೃಥ್ವಿ ಬಿ.ಸಿ, ಹೃದಯ ರೋಗ ತಜ್ಞ ಮಹೇಶ ಮೂರ್ತಿ, ಮೇಟ್ರೋ ಸಿಇಓ ಡಾ. ತೇಜಸ್ವಿ ಹಾಜರಿದ್ದರು.

Exit mobile version